Asianet Suvarna News Asianet Suvarna News

ದೂರು ಕೊಡಲು ಬಂದ ಪತ್ನಿಗೆ ಹಾಸನ ಎಸ್‌ಪಿ ಕಛೇರಿ ಎದುರೇ ಚಾಕು ಹಾಕಿ ಕೊಂದ ಪೊಲೀಸ್ ಕಾನ್ಸ್ ಟೇಬಲ್!

ಎಸ್ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಕೊಂದು ಪೊಲೀಸ್ ಕಾನ್ಸ್ ಟೇಬಲ್ ಕ್ರೌರ್ಯ ಮೆರೆದಿದ್ದಾನೆ. ಎಸ್ಪಿ ಕಚೇರಿ ಗೆ ಬಂದ ಪತ್ನಿಯನ್ನು ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ.

police constable stabbed and murdered his wife in Hassan SP office gow
Author
First Published Jul 1, 2024, 12:36 PM IST

ಹಾಸನ (ಜು.1): ಎಸ್ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಕೊಂದು ಪೊಲೀಸ್ ಕಾನ್ಸ್ ಟೇಬಲ್ ಕ್ರೌರ್ಯ ಮೆರೆದಿದ್ದಾನೆ. ಎಸ್ಪಿ ಕಚೇರಿ ಗೆ ಬಂದ ಪತ್ನಿಯನ್ನು ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದ ಪೊಲೀಸ್ ಕಾನ್ಸ್ ಟೇಬಲ್  ಆಗಿದ್ದು, ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ದಿನಗಳಿಂದ ಗಂಡ ಹೆಂಡತಿ ಗಲಾಟೆ ಮಾಡಿಕೊಂಡಿದ್ದರು.

ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘನೆ, ದರ್ಶನ್ ನೋಡಲು ಬಂದ ತಾಯಿ, ತಮ್ಮ ಕುಟುಂಬಕ್ಕೆ ರಾಜಾತಿಥ್ಯ!

ಈ ಹಿನ್ನೆಲೆಯಲ್ಲಿ ಗಂಡನ ವಿರುದ್ಧ ದೂರು ನೀಡಲು ಪತ್ನಿ ಮಮತಾ ಹಾಸನ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಗಂಡ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಪತಿಯಿಂದ ಚಾಕು ಇರಿತಕ್ಕೆ ಒಳಗಾದ ಮಮತಾಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ  ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾಳೆ.

5ಕೋಟಿ ಸಾಲಕ್ಕೆ ಬಡ್ಡಿ ಸೇರಿಸಿ 13 ಕೋಟಿ ಹಿಂತಿರುಗಿಸುವಂತೆ ಕನ್ನಡ ನಿರ್ಮಾಪಕ ಪುಷ್ಕರ್‌ಗೆ ಕೊಲೆ ಬೆದರಿಕೆ!

24 ವರ್ಷಗಳ ಪೊಲೀಸ್ ಇಲಾಖೆಯಲ್ಲಿರುವ ಅರಕಲಗೂಡು ಮೂಲದ ಲೋಕನಾಥ್ ಮತ್ತು ಹಾಸನ ಮೂಲದ ಮಮತಾ ಪ್ರೀತಿಸಿ ಮದುವೆಯಾಗಿ 19 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ ಪಿಯುಸಿ ಮತ್ತು ಮತ್ತೋರ್ವ 9ನೇ ತರಗತಿ ಓದುತ್ತಿದ್ದಾನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಗಲಾಟೆ ಜಾಸ್ತಿ ಆದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಗೆ ದೂರು ಕೊಡಲು ಪತ್ನಿ ಬಂದಾಗ ಹಿಂದಿನಿಂದ ಬಂದ ಪೇದೆ ಡ್ರ್ಯಾಗರ್‌ನಿಂದ ಇರಿದು ಕೃತ್ಯ ಮೆರೆದಿದ್ದು, ಸದ್ಯ ಕೊಲೆ ಆರೋಪಿ ಲೋಕನಾಥ್‌ನನ್ನು ಬಂಧಿಸಲಾಗಿದೆ.

Latest Videos
Follow Us:
Download App:
  • android
  • ios