ಎರಡು ದಿನದ ಹಿಂದೆ ಸಿಟಿ ರೌಂಡ್ಸ್‌ನಲ್ಲಿದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೈ ಎಂಡ್ ಕಾರ್ ನಂಬರ್ ಪ್ಲೇಟ್ ನೋಡಿ ಶಾಕ್ ಆಗಿದ್ದಾರೆ. ಹೌದು! ಆಯುಕ್ತರು ನಗರ ಪ್ರದಕ್ಷಿಣೆ ಸಮಯದಲ್ಲಿ ಹೈ ಎಂಡ್ ಕಾರೊಂದು ಓವರ್ ಸ್ಪೀಡ್‌ನಲ್ಲಿ ಹೋಗಿದೆ.
ಬೆಂಗಳೂರು (ಜೂ.29): ಎರಡು ದಿನದ ಹಿಂದೆ (ಸೋಮವಾರ) ಸಿಟಿ ರೌಂಡ್ಸ್‌ನಲ್ಲಿದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೈ ಎಂಡ್ ಕಾರ್ ನಂಬರ್ ಪ್ಲೇಟ್ ನೋಡಿ ಶಾಕ್ ಆಗಿದ್ದಾರೆ. ಹೌದು! ಆಯುಕ್ತರು ನಗರ ಪ್ರದಕ್ಷಿಣೆ ಸಮಯದಲ್ಲಿ ಹೈ ಎಂಡ್ ಕಾರೊಂದು ಓವರ್ ಸ್ಪೀಡ್‌ನಲ್ಲಿ ಹೋಗಿದ್ದು, ಕೂಡಲೇ ಕಾರನ್ನು ಫಾಲೋ ಮಾಡಿ ನಂಬರ್ ಪ್ಲೇಟ್ ಪೋಟೋವನ್ನು ತೆಗೆದಿದ್ದಾರೆ.
ಕೆಎ 03 ಎಂಸಿ 7007 ನಂಬರ್‌ನಲ್ಲಿದ್ದ ಹೈ ಎಂಡ್ ಕಾರ್ ನಂಬರ್ ಪ್ಲೇಟ್ ಪೋಟೊವನ್ನ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರಿಗೆ ಪ್ರತಾಪ್ ರೆಡ್ಡಿ ಕಳುಹಿಸಿದ್ದು, ತನಿಖೆಗೆ ಆದೇಶಿಸಿದ್ದರು. ಈ ವೇಳೆ ಹೈ ಎಂಡ್ ಕಾರ್‌ಗೆ ಲೋಕಲ್ ನಂಬರ್‌ನ್ನ ಅಳವಡಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪ್ರತಾಪ್ ರೆಡ್ಡಿ ಶಾಕ್ ಆಗಿದ್ದಾರೆ. ಈ ವೇಳೆ ಬಿಎಂಡಬ್ಲ್ಯೂ ಕಾರ್‌ಗೆ ಓಮಿನಿ ಕಾರ್ ನಕಲಿ ನಂಬರ್ ಹಾಕಿರೋದು ಪತ್ತೆಯಾಗಿದ್ದು, ಸದ್ಯ ಬಿಎಂಡಬ್ಲ್ಯೂ ಕಾರು ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪೊಲೀಸರ ಸಭೆ: ನಗರ ಸಂಚಾರ ಸಮಸ್ಯೆಗೆ ಪ್ರಧಾನ ಮಂತ್ರಿಗಳು ಆರು ತಿಂಗಳು ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಸಂಚಾರ ವಿಭಾಗದ ಪೊಲೀಸರ ಜತೆ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಮಂಗಳವಾರ ಸಮಾಲೋಚಿಸಿದರು. ಸಂಚಾರ ಸಮಸ್ಯೆ ಕುರಿತು ಇನ್ಸ್‌ಪೆಕ್ಟರ್‌ಗಳ ಜತೆ ವರ್ಚುಲ್ ಸಭೆ ನಡೆಸಿದ ಆಯುಕ್ತರು, ನಗರದ ಸಂಚಾರ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮಳೆ-ಗಾಳಿ ಬಿಸಿಲು ಎನ್ನದೆ ಸಂಚಾರ ಪೊಲೀಸರ ಕೆಲಸ ಮಾಡಬೇಕಿದೆ. ನಿಮ್ಮ ಕಷ್ಟಅರ್ಥವಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.
ಸಂಚಾರ ಉಲ್ಲಂಘಿಸಿದವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಆದರೆ ಯಾವುದೇ ಕಾರಣಕ್ಕೂ ಸಂಚಾರ ನಿಯಮ ತಪಾಸಣೆ ನೆಪದಲ್ಲಿ ಹಣ ಸುಲಿಗೆ ಸೇರಿದಂತೆ ಭ್ರಷ್ಟಾಚಾರ ಸಹಿಸುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಇನ್‌ಸ್ಪೆಕ್ಟರ್‌ಗಳಿಗೆ ಪ್ರತಾಪ್ ರೆಡ್ಡಿ ತಾಕೀತು ಮಾಡಿದ್ದಾರೆ.
Bengaluru: ಪ್ರಧಾನಿ ಗಡುವು ಬೆನ್ನಲ್ಲೇ ಸಂಚಾರ ಸಮಸ್ಯೆ ಬಗ್ಗೆ ಪ್ರವೀಣ್ ಸೂದ್ ಸಭೆ
ತುಮಕೂರು, ಮೈಸೂರು, ಬಳ್ಳಾರಿ, ಹೊಸೂರು ರಸ್ತೆಗಳು, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಸೇರಿದಂತೆ ನಗರದ ಕೆಲವಡೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ಬಗ್ಗೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟಅಧಿಕಾರಿಗಳ ಜತೆ ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ. ಇತ್ತೀಚಿಗೆ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿಗಳು, ಆರು ತಿಂಗಳಲ್ಲಿ ನಗರ ಸಂಚಾರ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು.
