Asianet Suvarna News Asianet Suvarna News

ಗದಗನಲ್ಲಿ ಪೊಲೀಸರ ಸಿಟಿ ರೌಂಡ್ಸ್: ಪುಂಡರ ಮೈಚಳಿ ಬಿಡಿಸಿದ ಖಾಕಿ ಪಡೆ..!

ಗದಗ-ಬೆಟಗೇರಿ ವಾಪ್ತಿಯ ಸೆನ್ಸಿಟಿವ್ ಏರಿಯಾಗಳಲ್ಲಿ ಮಾರ್ನಿಂಗ್ ಮಾರ್ಚ್ ಮಾಡಿ, ಪುಂಡರಿಗೆ ತಂಡಿ ಬಿಡಿಸಿದ ಪೊಲೀಸರು  

Police City Rounds in Gadag Betageri grg
Author
First Published Dec 9, 2022, 11:45 PM IST

ಗದಗ(ಡಿ.09): ಬೆಟಗೇರಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಚಾಕು ಇರಿತ ಪ್ರಕರಣ ಹೆಚ್ಚಾಗಿವೆ. ತಿಂಗಳ ಅಂತರದಲ್ಲಿ ಎರಡು ಪ್ರಕರಣಗಳು ಚಾಕು ಇರತದ್ದೇ ಅನ್ನೋದು ಗದಗ ಜನರನ್ನ ಆತಂಕಕ್ಕೆ ಈಡು ಮಾಡಿತ್ತು. ಚಾಕು ಇರಿತ ಪ್ರಕರಣವನ್ನ ಸೀರಿಯಸ್ಸಾಗಿ ತೆಗೆದುಕೊಂಡ ಪೊಲೀಸರು, ಗಲ್ಲಿಗಲ್ಲಿಗಳಲ್ಲಿ ವೆಪನ್‌ಗಳಿಗಾಗಿ ತಲಾಶ್ ನಡೆಸಿದ್ದಾರೆ. 

ಗದಗ-ಬೆಟಗೇರಿ ವಾಪ್ತಿಯ ಸೆನ್ಸಿಟಿವ್ ಏರಿಯಾಗಳಲ್ಲಿ ಮಾರ್ನಿಂಗ್ ಮಾರ್ಚ್ ಮಾಡಿ, ಪುಂಡರಿಗೆ ತಂಡಿ ಬಿಡಿಸಿದ್ದಾರೆ. ರೌಡಿ ಶೀಟರ್‌ಗಳು, ಕ್ರಿಮಿನಲ್ ಆ್ಯಕ್ಟಿವಿಟಿಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇರುವವರ ಮನೆಗಳಿಗೆ ಮಾರ್ನಿಂಗ್ ವಿಸಿಟ್ ಹಾಕಿ ವಿಚಾರಿಸಿದ್ದಾರೆ.

PANCHAMASALI RESERVATION; 2ಎ ಮೀಸಲಾತಿ ನೀಡಿದರೆ ಸಿಎಂಗೆ ಸನ್ಮಾ​ನ: ಮೃತ್ಯುಂಜಯ ಶ್ರೀ

ಅಲ್ದೆ, ಮನೆಯಲ್ಲಿ ಅಡಗಿಸಿಟಿದ್ದ 10 ಕ್ಕೂ ಹೆಚ್ಚು ವಿವಿಧ ಬಗೆಯ ಆಯುದ್ಧಗಳನ್ನ ವಶಕ್ಕೆ ಪಡೆದಿದಾರೆ. ಚಾಕು, ಚೂರಿ, ಬಟನ್ ನೈಫ್, ಕ್ರೈಮ್‌ಗೆ ಬಳಸಲು ಯೂಸ್ ಆಗುವ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಲಾಗಿದೆ. ಅಲ್ಲದೆ ಮೂರು ದಿನಗಳಿಂದ ಆರು ತಂಡಗಳನ್ನ ಮಾಡಿ ಸರ್ಚ್ ಆಪರೇಶ್ ನಡೆಸಲಾಗಿದೆ. ರಾಬರಿ ಕೇಸ್ ಗೆ ತಯಾರಾಗ್ತಿದ್ದ ನಗರದ ಉಮೇಶ್, ವಿನೋದ್ ಚವ್ಹಾಣ್ ಅನ್ನೋರನ್ನ ವಶಕ್ಕೆ ಪಡೆಯಲಾಗಿದೆ. 12 ಜನರ ವಿರುದ್ಧ ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಸಿಆರ್ ಪಿಸಿ 110 ರ ಅಡಿ ಕೇಸ್ ದಾಖಲಿಸಲಾಗಿದೆ. ಕ್ರಿಮಿನಲ್ ಆಕ್ಟಿವಿಟಿಯಲ್ಲಿರುವ ಆರು ಜನರನ್ನ ಗಡಿಪಾರ್ ಮಾಡ್ಬೇಕು ಅಂತಾ ಎಸಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

ಇನ್ನು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ‌ ಶಿವಪ್ರಕಾಶ್ ದೇವರಾಜು, ಮರಕಾಸ್ತ್ರಗಳನ್ನ ಸಾರ್ವಜನಿಕವಾಗಿ ಯೂಸ್ ಮಾಡಬಾರದು. ಚಾಕು ಚೂರಿ ತೋರಿಸಿ ಹೆದರಿಸುವವರು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡ್ಬೇಕು.. ಈಗಾಗ್ಲೆ ರೌಡಿ ಸ್ಕ್ವಾಡ್ ಮೂಲಕ ಕಾರ್ಯಾಚರಣೆ  ಮಾಡಲಾಗಿದ್ದು, ಮುಂದಿನ ಮೂರು ನಾಲ್ಕು ತಿಂಗಳು ಕಾರ್ಯಾಚರಣೆ ಮುಂದುವರೆಯಲಿದೆ ಅಂತಾ ಹೇಳಿದ್ದಾರೆ.

ಆಟೋ ಚಾಲಕರು, ಗಾರೆ ಕೆಲಸದವರು, ಪ್ಲಂಬರ್ಸ್ ಸೇರಿದಂತೆ ಯಾರೂ ಚಾಕು ಚೂರಿ ಇಟ್ಟಿಕೊಳ್ಳುವ ಹಾಗಿಲ್ಲ.. ಚಾಕು, ಮಾರಕಾಸ್ತ್ರ ಇಟ್ಟುಕೊಂಡು ಹೆದರಿಕೆ ಹಾಕ್ತಿದ್ರೆ ತಕ್ಷಣ, ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ರು..ರಾತ್ರಿ 9 ರಿಂದ 11 ಗಂಟೆ ಮಧ್ಯದಲ್ಲಿ ಗಲಾಟೆ ಆಗ್ತಿವೆ. ಪಾನ್ ಅಂಗಡಿ, ಬಾರ್ ಎದುರು ಗಲಾಟೆ ಮಾಡ್ಲಾಗ್ತಿದೆ‌‌. ಈ ಎಲ್ಲ ಚಟುವಟಿಕೆ ಮೇಲೆ ಕಣ್ಣಿರಿಸಲಾಗಿದೆ. ಸಾರ್ವಜನಿಕವಾಗಿ ಜನರನ್ನ ಹೆದರಿಸುವ, ತೊಂದರೆಯುಂಟು ಮಾಡುವ ಉದ್ದೇಶದಿಂದ ಚಾಕು ಬಳಸುವವರನ್ನ ಮಟ್ಟ ಹಾಕ್ತೀವಿ ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 

Follow Us:
Download App:
  • android
  • ios