ಬೆಂಗಳೂರು(ಮಾ. 14)  ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ಕೆಲ ಆತಂಕಗಳು ಕಾಡುತ್ತಿವೆ. ಅದರಲ್ಲಿ ಸಿನಿಮಾ ಪೈರಸಿ ಭೂತ ಒಂದು. ರಾಬರ್ಟ್ ಚಿತ್ರವನ್ನು ಪೈರಸಿ ಮಾಡಿದರೆ ಪರಿಣಾಮ ಘೋರವಾಗಿರುತ್ತದೆ ಎಂದು ನಿರ್ಮಾಪಕ ಉಮಾಪತಿ ಮೊದಲೆ ಎಚ್ಚರಿಕೆ  ನೀಡಿದ್ದರು.

ದರ್ಶನ್ ನಟನೆಯ ರಾಬರ್ಟ್ ಚಿತ್ರಪೈರಸಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ.  ದರ್ಶನ್ ಅಭಿಮಾನಿಗಳೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಶ್ವನಾಥ್ ಸೇರಿ ಹಲವರ ಬಂಧನವಾಗಿದೆ.

ಮತ್ತೆ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ

ಉಮಾಪ ಫಿಲ್ಮ್ಸ್ ಮ್ಯಾನೇಜರ್ ಶ್ರೀಕಾಂತ್ ರಿಂದ ದೂರು ಸಲ್ಲಿಕೆಯಾಗಿದೆ. ವಾಟ್ಸ್ ಆಪ್, ಇನ್ಸ್ಟಾಗ್ರಾಮ್,ವೆಬ್ ಸೈಟ್ ಮೂಲಕ ಪೈರಸಿ ಕಾಪಿ ಹಂಚಿಕೊಳ್ಳುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲನೆ ವೇಳೆ ರಾಬರ್ಟ್ ಸಿನಿಮಾದ ಪೂರ್ತಿ ಲಿಂಕ್ ಫೋನ್ ನಲ್ಲಿರೋದು ಪತ್ತೆಯಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಯವಿಟ್ಟು ಕನ್ನಡ ಸಿನಿಮಾಗಳನ್ನು ಪೈರಸಿ ಮಾಡಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ತೆರಳಿ ನೋಡಿ ಎಂದು ಸ್ಯಾಂಡಲ್ ವುಡ್ ನಟರು ಮೇಲಿಂದ ಮೇಲೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಿತಾಪತಿಗೆ ಬ್ರೇಕ್ ಬಿದ್ದಿಲ್ಲ.