66.9 ಕೋಟಿ ಜನ ಹಾಗೂ ಸಂಸ್ಥೆಗಳ ಖಾಸಗಿ ಮತ್ತು ರಹಸ್ಯ ಮಾಹಿತಿಯನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸೈಬರಾಬಾದ್‌ ಪೊಲೀಸರು ಶನಿವಾರ ಹೇಳಿದ್ದಾರೆ.

ಹೈದಾರಾಬಾದ್‌: 66.9 ಕೋಟಿ ಜನ ಹಾಗೂ ಸಂಸ್ಥೆಗಳ ಖಾಸಗಿ ಮತ್ತು ರಹಸ್ಯ ಮಾಹಿತಿಯನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸೈಬರಾಬಾದ್‌ ಪೊಲೀಸರು ಶನಿವಾರ ಹೇಳಿದ್ದಾರೆ.

ಆರೋಪಿಯನ್ನು ವಿನಯ್‌ ಭಾರದ್ವಾಜ್‌ ಎಂದು ಗುರುತಿಸಲಾಗಿದ್ದು, ಈತ ಸುಮಾರು 24 ರಾಜ್ಯಗಳು ಹಾಗೂ 8 ಮೆಟ್ರೋಪಾಲಿಟಿನ್‌ ನಗರಗಳಲ್ಲಿ ಮಾಹಿತಿ ಕಳ್ಳತನ ಮಾಡಿದ್ದ. ಈತನ ಎಜುಟೆಕ್‌ ಕಂಪನಿಗಳ ವಿದ್ಯಾರ್ಥಿಗಳು ಮತ್ತು ಹಲವು ರಾಜ್ಯಗಳ ಜಿಎಸ್‌ಟಿ, ರಸ್ತೆ ಸಾರಿಗೆ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ಫಿನ್‌ಟೆಕ್‌ ಕಂಪನಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಈತ ಸುಮಾರು 66.9 ಕೋಟಿ ಜನರ ಖಾಸಗಿ ಮಾಹಿತಿಗಳನ್ನು ಮಾರಾಟ ಮಾಡಲು, ಇವುಗಳನ್ನು 104 ವಿಭಾಗಗಳಲ್ಲಿ ವಿಭಾಗಿಸಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್‌ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!

ಈತನ ಬಳಿ ರಕ್ಷಣಾ ಇಲಾಖೆ ನೌಕರರು, ಸರ್ಕಾರಿ ಇಲಾಖೆಗಳ ನೌಕರರ ಮಾಹಿತಿ, ಪಾನ್‌ ಕಾರ್ಡುದಾರರ ಮಾಹಿತಿ, ವಿದ್ಯಾರ್ಥಿಗಳ ಮಾಹಿತಿ, ವಿಮಾದಾರರು, ಡೆಬಿಟ್‌/ಕ್ರೆಡಿಟ್‌ ಖಾರ್ಡುಗಳ ಮಾಹಿತಿ ಇದ್ದವು.

ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್‌ ಚೋರರು..!