ಸಿಂಧನೂರು ಬಾಲಕಿಗೆ ಮದ್ಯ ಕುಡಿಸಿ ಲೈಂಗಿಕ ಕಿರು​ಕುಳ

ಬಾಲಕಿಯೋರ್ವಳಿಗೆ ಇಬ್ಬರು ಕಾಮುಕ ಯುವಕರು ಬಲವಂತವಾಗಿ ಮದ್ಯ ಕುಡಿಸಿ ಲೈಂಗಿ​ಕ​ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಹೊಸಪೇಟೆ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

pocso case filed for physical abuse at sindhanur in raichur gvd

ಸಿಂಧನೂರು (ಡಿ.03): ಬಾಲಕಿಯೋರ್ವಳಿಗೆ ಇಬ್ಬರು ಕಾಮುಕ ಯುವಕರು ಬಲವಂತವಾಗಿ ಮದ್ಯ ಕುಡಿಸಿ ಲೈಂಗಿ​ಕ​ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಹೊಸಪೇಟೆ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಂದನೂರು ನಿವಾಸಿಯಾಗಿರುವ ವಿದ್ಯಾರ್ಥಿನಿಯು ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನ.25ರಂದು ತನ್ನ ತಾಯಿಯ ತವರೂರಾದ ಹೊಸ ಪೇಟೆಗೆ ಹೋಗಿದ್ದಳು. ಪುನಃ ನ.27 ರಂದು ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್‌ ಬರುವ ವೇಳೆ ವಿದ್ಯಾರ್ಥಿನಿಯ ಪರಚಿತ ಸಚಿನ್‌ ಎಂಬ ಯುವಕ ಮೊಬೈಲ್‌ ಕರೆ ಮಾಡಿ ಆಕೆಯನ್ನು ವಾಪಸ್‌ ಹೊಸಪೇಟೆಗೆ ಕರೆಸಿಕೊಂಡಿದ್ದಾನೆ. 

ನಂತರ ಸಚಿನ್‌ ಮತ್ತು ಆತನ ಗೆಳೆಯ ಇಬ್ಬರೂ ಸೇರಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಅಂಜನಾದ್ರಿ ಬೆಟ್ಟ ಹಾಗೂ ಗಂಗಾವತಿಯತ್ತ ಅಲೆದು, ಮದ್ಯ ಖರೀದಿಸಿದ್ದಾರೆ. ತದನಂತರ ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ವೇಳೆ ಕಾರಿನಲ್ಲೆ ಸಚಿನ್‌ ಎಂಬಾತ ವಿದ್ಯಾರ್ಥಿನಿ ಮೈ-ಕೈ ಮುಟ್ಟಿ ಬಲವಂತದಿಂದ ಮದ್ಯ ಕುಡಿಸಿ,ಲೈಂಗಿಕ ಕಿರು​ಕು​ಳ ನೀಡಿ​ದ್ದಾನೆ. ವಿದ್ಯಾರ್ಥಿನಿ ತಾಯಿ ದೂರು ನೀಡಿದ್ದಾರೆ. ಘಟನೆ ಸಂಬಂಧ ವಿದ್ಯಾರ್ಥಿನಿಯ ತಾಯಿ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ಸೌಮ್ಯ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ತನಿಖೆ ಕೈಗೊಂಡಿದ್ದಾರೆ.

ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಹದಿಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸರಾಯಿಪಾಳ್ಯದ ನಿವಾಸಿ ಇಮ್ತಿಯಾಜ್‌ (31) ಬಂಧಿತ. ಆರೋಪಿಯು ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುವ ಚಟಕ್ಕೆ ಬಿದ್ದಿದ್ದಾನೆ. ಜ.20ರಂದು ಕೆ.ಜಿ.ಹಳ್ಳಿಯಲ್ಲಿ 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ರಸ್ತೆ ಬದಿ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಈ ವೇಳೆ ಹೆದರಿದ ಬಾಲಕಿ ಜೋರಾಗಿ ಕಿರುಚಾಡಿದ್ದಳು. ​

ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಿ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌

ಆಗ ಸ್ಥಳೀಯರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಬಾಲಕಿಯನ್ನು ಬಿಟ್ಟು ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಸಂತ್ರ​ಸ್ತೆ ಪೋಷ​ಕರು ದೂರು ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋ​ಪಿ​ಯನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ತಿಳಿಸಿದ್ದಾರೆ. ಆರೋಪಿಯು ಈ ಹಿಂದೆ 2017ರಲ್ಲಿ ಹೆಬ್ಬಾಳದ ಬಳಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋ​ಪಿ, ಸಂಪಿಗೆಹಳ್ಳಿ, ಬಾಗಲೂರಿನಲ್ಲೂ ಅಪ್ರಾ​ಪ್ತೆ​ಯ​ರಿಗೆ ಲೈಂಗಿಕ ಕಿರು​ಕುಳ ನೀಡಿದ್ದ ಎನ್ನಲಾಗಿದೆ. ಆದರೆ, ಈ ಪ್ರಕರಣಗಳಲ್ಲಿ ಸಂತ್ರ​ಸ್ತೆಯ ಪೋಷ​ಕ​ರು ಯಾವುದೇ ದೂರು ದಾಖಲಿಸಿರಲಿಲ್ಲ.

Latest Videos
Follow Us:
Download App:
  • android
  • ios