Asianet Suvarna News Asianet Suvarna News

ಬೆಂಗಳೂರು: ತಿಂಗಳ ಹಿಂದಷ್ಟೇ ಜೈಲಿಂದ ಹೊರ ಬಂದ ಪೋಕ್ಸೋ ಆರೋಪಿ ಸಾವು

ಶುಕ್ರವಾರ ಬೆಳಗ್ಗೆ ಮಿಷನ್ ರಸ್ತೆಯ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು 

POCSO Accused Dies in Bengaluru grg
Author
First Published May 11, 2024, 11:35 AM IST

ಬೆಂಗಳೂರು(ಮೇ.11):  ತಿಂಗಳ ಹಿಂದೆಯಷ್ಟೇ ಪೋಕೋ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಂದಿದ್ದ ಯುವಕನೊಬ್ಬ ಅನುಮಾನಾ ಸ್ಪದವಾಗಿ ಮೃತಪಟ್ಟಿರುವ ಘಟನೆ ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಸಂಪಂಗಿರಾಮನಗರದ ಸತ್ಯ. (20) ಮೃತ. ಶುಕ್ರವಾರ ಬೆಳಗ್ಗೆ ಮಿಷನ್ ರಸ್ತೆಯ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಸಿಕ 1.2 ಲಕ್ಷ ಪಿಂಚಣಿ ಪಡೆಯಲು ತಂದೆಯ ಮೃತದೇಹವನ್ನೇ ಬಚ್ಚಿಟ್ಟ ಮಹಿಳೆ!

ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸತ್ಯ ತಮ್ಮದೇ ಏರಿಯಾದ ಅಪ್ರಾಪ್ತಿಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಈ ವಿಚಾರ ಅಪ್ರಾಪ್ತ ಮನೆಯವರಿಗೆ ಗೊತ್ತಾಗಿ ಸತ್ಯನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಕೋ ಕಾಯ್ದೆ ಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬೇಲ್‌ನಿಂದ ಹೊರಬಂದ ಬಳಿಕ ಸತ್ಯ ಮತ್ತೆ ಅಪ್ರಾಪ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಈ ವಿಚಾರ ಅಪ್ರಾಪ್ತ ಮನೆಯವರಿಗೆ ಗೊತ್ತಾಗಿ ಸತ್ಯನ ಜತೆಗೆ ಜಗಳವಾಗಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಅಪ್ರಾಪ್ತ ಮನೆಯವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಸತ್ಯನ ಪೋಷಕರು ದೂರು ನೀಡಿದ್ದಾರೆ. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios