Asianet Suvarna News Asianet Suvarna News

ಫುಟ್ಪಾತ್ ಏರಿ ಗೂಳಿಯಂತೆ ಅಂಗಡಿಗೆ ನುಗ್ಗಿದ ಪಿಕಪ್ ವಾಹನ; ಬೆಚ್ಚಿಬಿಳಿಸುತ್ತೆ ಅಪಘಾತದ ದೃಶ್ಯ!

ವೇಗವಾಗಿ ಬಂದ ಪಿಕಪ್ ವಾಹನ ನಿಯಂತ್ರಣ ಕಳೆದುಕೊಂಡು ಅಂಗಡಿಗೆ ನುಗ್ಗಿದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ನಿನ್ನೆ ಸುಮಾರು ಮಧ್ಯಾಹ್ನ 2.30 ಕ್ಕೆ ನಡೆದಿರುವ ಅಪಘಾತ, ಘಟನೆಯಲ್ಲಿ ಓರ್ವನ ಕಾಲು ಕಟ್ ಆಗಿದೆ.

Pickup vehicle accident one injured at subrahmanyanagar bengaluru rav
Author
First Published Jun 21, 2024, 3:31 PM IST

ಬೆಂಗಳೂರು (ಜೂ.21): ವೇಗವಾಗಿ ಬಂದ ಪಿಕಪ್ ವಾಹನ ನಿಯಂತ್ರಣ ಕಳೆದುಕೊಂಡು ಅಂಗಡಿಗೆ ನುಗ್ಗಿದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ನಿನ್ನೆ ಸುಮಾರು ಮಧ್ಯಾಹ್ನ 2.30 ಕ್ಕೆ ನಡೆದಿರುವ ಅಪಘಾತ, ಘಟನೆಯಲ್ಲಿ ಓರ್ವನ ಕಾಲು ಕಟ್ ಆಗಿದೆ. ಅಪಘಾತದ ವೇಳೆ ಫುಟ್‌ಪಾತ್ ಪಕ್ಕದಲ್ಲಿ ಗಾಡಿ ನಿಲ್ಲಿಸಿಕೊಂಡು ನಿಂತಿದ್ದ ವಾಹನ ಸವಾರ. ಈ ವೇಳೆ ಬೈಕ್ ಸವಾರನಿಗೆ ಗುದ್ದಿ ಗೂಳಿಯಂತೆ ಅಂಗಡಿಗೆ ನುಗ್ಗಿದ ಪಿಕಪ್ ವಾಹನ. ಗಾಯಾಳುವನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೇಗ ಮೀತಿ ಮೀರಿದ್ದರಿಂದ ಅಪಘಾತ ಸಂಭವಿಸಿದೆ.

ಘಟನೆ ದೃಶ್ಯ ಸಿಸಿಟಿವಿಯಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತ ಘಟನೆ ಸಂಬಂಧ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ-ಪಿಕಪ್ ವಾಹನ ನಡುವೆ ಭೀಕರ ಅಪಘಾತ; ಮಹಿಳೆ ದುರ್ಮರಣ!

Latest Videos
Follow Us:
Download App:
  • android
  • ios