ಮಲ್ಕುಂಡಿ(ಡಿ.27): ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಅರಿಯೂರು ಗ್ರಾಮದ ಕಾಮುಕ ಮಧುಸೂದನ್‌ (27)ಬಂಧಿತ ಆರೋಪಿ. 

ಮಧುಸೂದನ್‌ ತನ್ನ ಪಕ್ಕದ ಮನೆ 9 ವರ್ಷದ ಬಾಲಕಿಯನ್ನು ಚಾಕ್ಲೆಟ್‌ ನೀಡುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. 

ರೇಪ್‌ ಮಾಡಿ ಯುವತಿಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ಎಸೆದ್ರು!

ತಕ್ಷಣ ಬಾಲಕಿಯ ಮನೆಯವರಿಗೆ ವಿಷಯ ತಿಳಿದು ಹುಲ್ಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಲಕ್ಷ್ಮೇಕಾಂತ್‌ ತಳವರ್‌, ಎಸ್‌ಐ ರಾಘವೇಂದ್ರ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಬಾಲಕಿ ಮೈಸೂರಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರಕರಣ ಹುಲ್ಲಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.