Asianet Suvarna News Asianet Suvarna News

ಯಾದಗಿರಿ: ತಮಟೆ ವಾಪಸ್‌ ಕೇಳಿದ್ದಕ್ಕೆ ಕೊಂದೇ ಬಿಟ್ರು..!

ತಾನು ಕೊಟ್ಟಿದ್ದ ತಮಟೆ ವಾಪಸ್‌ ಕೊಡು ಎಂದು ಕೇಳಿದ್ದಕ್ಕೆ ಹತ್ಯೆ| ಕೊಲೆಯಲ್ಲಿ ಅಂತ್ಯಗೊಂಡ ಮೊಹರಂ ಹಬ್ಬದ ಸಂಭ್ರಮ| ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಸಮೀಪದ ಹೊಸಹಳ್ಳಿ ತಾಂಡಾದಲ್ಲಿ ನಡೆದ ಘಟನೆ ಐವರ ವಿರುದ್ಧ ಕೇಸ್‌ ದಾಖಲಿಸಿದ್ದು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಯಾದಗಿರಿ ಗ್ರಾಮಾಂತರ ಪೊಲೀಸರು| 

Person Murder in Gurmatkal in Yadgir District
Author
Bengaluru, First Published Sep 3, 2020, 1:38 PM IST
  • Facebook
  • Twitter
  • Whatsapp

ಯಾದಗಿರಿ(ಸೆ.03): ತಾನು ಕೊಟ್ಟಿದ್ದ ತಮಟೆ ವಾಪಸ್‌ ಕೊಡು ಎಂದು ಕೇಳಿದ್ದಕ್ಕೆ, ಆತನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಗುರುಮಠಕಲ್‌ ಸಮೀಪದ ಹೊಸಹಳ್ಳಿ ತಾಂಡಾದಲ್ಲಿ ನಡೆದಿದೆ. ಸಂಭ್ರಮದಲ್ಲಿದ್ದ ಮೊಹರಂ ಮೆರವಣಿಗೆ ಕೊಲೆಯಲ್ಲಿ ಅಂತ್ಯ ಕಂಡಿರುವುದು ವಿಪರ್ಯಾಸ.

ಹೊಸಹಳ್ಳಿ (ಎಸ್‌) ತಾಂಡಾದಲ್ಲಿ ತಮಟೆ ವಿಚಾರವಾಗಿ ಕೊಲೆ ನಡೆದಿದೆ. ಗ್ರಾಮದ ಬಾಲಪ್ಪ (45) ಕೊಲೆಯಾದ ದುರ್ದೈವಿ. ಇದೇ ತಾಂಡಾದ ಶಂಕರ್‌ ಎಂಬಾತನ ಮನೆಯಲ್ಲಿ ನಿಶ್ಚಿತಾರ್ಥವಾಗಿದ್ದರಿಂದ ಬಾಲಪ್ಪ ತನ್ನ ತಮಟೆಯನ್ನ ಆತನಿಗೆ ಕೊಟ್ಟಿದ್ದ ಎನ್ನಲಾಗಿದೆ. ಕಾರ್ಯಕ್ರಮ ಮುಗಿದ ಮೇಲೆ ತಮಟೆ ಕೊಡದ ಶಂಕರ್‌, ಮೊಹರಂ ದಿನ ಮೆರವಣಿಗೆಯಲ್ಲಿ ಅದನ್ನು ಉಪಯೋಗಿಸುತ್ದಿದ್ದಾಗ ಬಾಲಪ್ಪ ಅಸಮಾಧಾನಗೊಂಡಿದ್ದಾನೆ.

ಯಾದಗರಿಯಲ್ಲಿ ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ

ತನ್ನ ತಮಟೆ ತನಗೆ ವಾಪಸ್‌ ಕೊಡು ಎಂದು ಬಾಲಪ್ಪ, ಶಂಕರನ ಮನೆಗೆ ಹೋದರೆ ಇದು ತನ್ನದೇ ಕೊಡುವುದಿಲ್ಲ ಎಂದು ಜಗಳ ಆರಂಭವಾಗಿದೆ. ಶಂಕರ್‌ ಹಾಗೂ ಕೆಲವರು ಬಾಲಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ಬಾಲಪ್ಪನ ಕುಟುಂಬಸ್ಥರು ಜಗಳ ಬಿಡಿಸಿಕೊಂಡು ಬಾಲಪ್ಪ®್ನನ್ನು ಮನೆಗೆ ಕರೆದುಕೊಂಡು ಬರುವ ಮಾರ್ಗಮಧ್ಯೆ, ಪೆಟ್ಟು ತಿಂದಿದ್ದ ಬಾಲಪ್ಪ ಮೃತಪಟ್ಟಿದ್ದಾನೆ.

ವಿಷಯ ತಿಳಿದ ಗ್ರಾಮಾಂತರ ಪೋಲಿಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಶಂಕರ್‌ ಹಾಗೂ ಈತನ ನಾಲ್ಕು ಮಂದಿ ಕುಟುಂಬಸ್ಥರ ಮೇಲೆ ಬಾಲಪ್ಪನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವ ಮೂಲಕ ಬಾಲಪ್ಪನ ಕುಟುಂಬಸ್ಥರಿಗೆ ಪೋಲಿಸರು ನ್ಯಾಯ ಒದಗಿಸಿ ಕೋಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ಯಾದಗಿರಿ ಗ್ರಾಮಾಂತರ ಪೊಲೀಸರು ಐವರ ವಿರುದ್ಧ ಕೇಸ್‌ ದಾಖಲಿಸಿದ್ದು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
 

Follow Us:
Download App:
  • android
  • ios