ಬೆಂಗಳೂರು(ಆ.22): ನಗರದ ಆರ್‌ಎಂಸಿ ಯಾರ್ಡ್‌ ಠಾಣಾ ವ್ಯಾಪ್ತಿಯಲ್ಲಿ ಆ.18ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪೇಟೆ ಸಮೀಪದ ಐಶನಹಳ್ಳಿಯ ಡಿ.ಎನ್‌.ಸೋಮ (30) ಬಂಧಿತ. ಆರ್‌ಎಂಸಿ ಯಾರ್ಡ್‌ನ ಶಕ್ತಿ ಕಾರ್ಗೋ ಟ್ರಾನ್ಸ್‌ಪೋರ್ಟ್‌ನಲ್ಲಿ ರೈಟರ್‌ ಆಗಿದ್ದ ಪ್ರಶಾಂತ್‌ನನ್ನು ಸೋಮ ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಶಾಂತ್‌ ರೈಟರ್‌ ಆಗಿದ್ದರೆ, ಸೋಮ ಚಾಲಕನಾಗಿದ್ದ. ಇಬ್ಬರ ನಡುವೆ ಕೆಲಸದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿ 8ಕ್ಕೆ ಪ್ರಶಾಂತ್‌ ಮನೆಗೆ ಬಂದಿದ್ದ. ಮತ್ತೆ ಮೊಬೈಲ್‌ನಲ್ಲಿ ಜಗಳವಾಗಿತ್ತು. ಟ್ರಾನ್ಸ್‌ಪೋರ್ಟರ್‌ ಕಚೇರಿಗೆ ಪ್ರಶಾಂತ್‌ ತೆರಳಿದ್ದ. 

ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ

ಈ ವೇಳೆ ಇಬ್ಬರ ನಡುವೆ ಗಲಾಟೆ ಆಯಿತು. ಸೋಮ ಚೂರಿಯಿಂದ ಪ್ರಶಾಂತ್‌ನ ಹೊಟ್ಟೆ, ತಲೆಗೆ ಇರಿದು ಹತ್ಯೆ ಮಾಡಿದ್ದ. 6 ತಿಂಗಳಿಂದ ಉದ್ದೇಶ ಪೂರ್ವಕವಾಗಿ ಪ್ರಶಾಂತ್‌ ಸರಿಯಾಗಿ ಬಾಡಿಗೆಗೆ ಲೋಡ್‌ ಕೊಡುತ್ತಿರಲಿಲ್ಲ. ಅದನ್ನು ಪ್ರಶ್ನಿಸಿದಾಗ ಜಗಳವಾಯಿತು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಹತ್ಯೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.