Asianet Suvarna News Asianet Suvarna News

ಧಾರವಾಡ: ಚುನಾವಣೆಯಲ್ಲಿ ಸೋತಿದ್ದಕ್ಕೆ ಮನನೊಂದು ಆತ್ಮಹತ್ಯೆ

ನೌಕರ ಚಂದ್ರಕಾಂತ ಸಾವಳಗಿ ತಮ್ಮ ರೇಣುಕಾನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Person Committed Suicide after Defeated in Election in Dharwad grg
Author
First Published Dec 28, 2023, 1:27 PM IST

ಧಾರವಾಡ(ಡಿ.28):  ಕರ್ನಾಟಕ ವಿಶ್ವವಿದ್ಯಾಲಯದ ನೌಕರರ ಸಹಕಾರಿ ಪತ್ತಿನ ಸಂಘ ನಿಯಮಿತದ ಚುನಾವಣೆಯಲ್ಲಿ ಪರಾಭವಗೊಂಡಿದ್ದಕ್ಕೆ ಮನನೊಂದ ನೌಕರ ಚಂದ್ರಕಾಂತ ಸಾವಳಗಿ ತಮ್ಮ ರೇಣುಕಾನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಎರಡು ದಿನಗಳ ಹಿಂದೆಯಷ್ಟೇ ನಡೆದಿದ್ದ ಚುನಾವಣೆಯಲ್ಲಿ ಇವರು ಸೋತಿದ್ದರು. 

ಬೆಂಗಳೂರು: ಅಪಾರ್ಟ್ಮೆಂಟ್‌ ಟೆರೆಸ್ಸಿಂದ ಜಿಗಿದು ಜಿಮ್‌ ತರಬೇತುದಾರ ಆತ್ಮಹತ್ಯೆ

ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಶಹರ ಪೊಲೀಸ್‌ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Follow Us:
Download App:
  • android
  • ios