ಬೆಳಗಾವಿ(ಮಾ.24): ಸಾಲದ ಬಾಧೆ ತಾಳಲಾರದೆ ನೇಕಾರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವಡಗಾವಿಯ ದೇವಾಂಗ ನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ದೇವಾಂಗ ನಗರದ ಮೋಹನ್‌ ಡೊಂಬರ (61) ಆತ್ಮಹತ್ಯೆ ಮಾಡಿಕೊಂಡ ನೇಕಾರ. ಕೋವಿಡ್‌-​19 ಲಾಕ್‌ಡೌನ್‌ನಲ್ಲಿ ನೇಕಾರಿಕೆ ಕೈ ಕೊಟ್ಟ ಪರಿಣಾಮ ಮೋಹನ್‌ ಸಾಲ ಮಾಡಿಕೊಂಡಿದ್ದ. ಸಾಲ ಮರುಕಳಿಸುವಂತೆ ಸಾಲಗಾರರು ಕಾಟ ಹೆಚ್ಚಾಗಿತ್ತು. ಇದರಿಂದ ಮನನೊಂದು ತಮ್ಮ ಮಗ್ಗದ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಸಾಲಬಾಧೆ: ಕೃಷಿ ಹೊಂಡಕ್ಕೆ ಹಾರಿ ಮೂವರು ಆತ್ಮಹತ್ಯೆ

ಈ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.