ಬೆಂಗಳೂರು(ಡಿ.10): ಭಾರತ-ಆಸ್ಪ್ರೇಲಿಯಾ ಟಿ20 ಪಂದ್ಯಾವಳಿ ವೇಳೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಭುವನೇಶ್ವರಿ ನಗರದ ಚೆಲುವಪ್ಪ ಗಾರ್ಡನ್‌ ನಿವಾಸಿ ಪ್ರಭು ಬಂಧಿತನಾಗಿದ್ದು, ಆರೋಪಿಯಿಂದ .4.5 ಲಕ್ಷ ಹಣ ಮತ್ತು ಮೊಬೈಲ್‌ ಜಪ್ತಿಯಾಗಿದೆ. ಆಸ್ಪ್ರೇಲಿಯಾದಲ್ಲಿ ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ಕ್ರಿಕೆಟ್‌ ಪಂದ್ಯಾವಳಿ ವೇಳೆ ಆರೋಪಿ ಬೆಟ್ಟಿಂಗ್‌ ನಡೆಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಏಳು ಜನರ ಬಂಧನ

'Lordesxh.com’ ಎಂಬ ಮೊಬೈಲ್‌ ಆ್ಯಪ್‌ ಮೂಲಕ ಸಾರ್ವಜನಿಕರಿಂದ ಬೆಟ್ಟಿಂಗ್‌ ಕಟ್ಟಿಸಿಕೊಂಡು ಆತ ಜೂಜಾಡುತ್ತಿದ್ದ. ಹಿಂದಿನ ಪಂದ್ಯಗಳಿಗೆ ಸಂಬಂಧಿಸಿದ ಗೆದ್ದವರಿಗೆ ಹಣ ಕೊಡಲು ಹಾಗೂ ಸೋತವರಿಂದ ಹಣ ಸಂಗ್ರಹಿಸಲು ರಾಮದಾಸ್‌ ಲೇಔಟ್‌ಎ ಬ್ಲಾಕ್‌ ಟೆಲಿಕಾಂ ಲೇಔಟ್‌ ಬಳಿಗೆ ಆರೋಪಿ ಬಂದಾಗ ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.