Asianet Suvarna News Asianet Suvarna News

6 ಸಾವಿರ ಜನರಿಗೆ ಮನಿ ಡಬ್ಲಿಂಗ್ ಆಮಿಷವೊಡ್ಡಿ 210 ಕೋಟಿ ವಂಚನೆ ಮಾಡಿದ್ದ ಅಂತರ್ ರಾಜ್ಯ ಕಳ್ಳನ ಬಂಧನ!

ಹಣ ದ್ವಿಗುಣ ಮಾಡಿಕೊಡ್ತೀವಿ ಎಂದು ಜನರಿಗೆ ಮೋಸ ಮಾಡೋರು ಒಬ್ರಲ್ಲ. ಆದ್ರೆ ಇಲ್ಲೊಬ್ಬ ಸುಮಾರು ಸಾವಿರಾರು ಮಂದಿಗೆ ಆನ್ ಲೈನ್ ನಲ್ಲಿ ದೋಖಾ ಮಾಡಿ ಕೋಟಿಗಟ್ಟಲೇ ಹಣವನ್ನು ಪೀಕಿ ಇಂದು ಪೊಲೀಸರ ಅತಿಥಿಯಾಗಿದ್ದಾನೆ. 
 

People Lost More Than Rs 210 Crore Money In Chitradurga For Money Doubling Scam gvd
Author
First Published Jun 26, 2024, 6:02 PM IST | Last Updated Jun 26, 2024, 6:02 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.26): ಹಣ ದ್ವಿಗುಣ ಮಾಡಿಕೊಡ್ತೀವಿ ಎಂದು ಜನರಿಗೆ ಮೋಸ ಮಾಡೋರು ಒಬ್ರಲ್ಲ. ಆದ್ರೆ ಇಲ್ಲೊಬ್ಬ ಸುಮಾರು ಸಾವಿರಾರು ಮಂದಿಗೆ ಆನ್ ಲೈನ್ ನಲ್ಲಿ ದೋಖಾ ಮಾಡಿ ಕೋಟಿಗಟ್ಟಲೇ ಹಣವನ್ನು ಪೀಕಿ ಇಂದು ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆ ಐನಾತಿ ಕಳ್ಳ ಯಾರು ಏನು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಸೈಬರ್ ಕ್ರೈಂ ಪೊಲೀಸರ ಅತಿಥಿಯಾಗಿರೋ ವ್ಯಕ್ತಿ ಹೆಸರು ಕೋಡೆ ರಮಣಯ್ಯ ಅಂತ. ಮೂಲತಃ ಆಂಧ್ರಪ್ರದೇಶದ ಇವನು, ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ರಾಜ್ಯದ ಜನರ ಮುಖಕ್ಕೆ ಮಂಕು ಬೂದಿ ಎರಚಿಕೊಂಡು ಬಂದಿದ್ದಾನೆ. 

ನಿಮ್ಮ ಹಣವನ್ನು ದ್ವಿಗುಣ ಮಾಡಿ ಕೊಡ್ತೀನಿ ಎಂದು ಹೇಳಿ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈ.ಲಿ ಹೆಸರಲ್ಲಿ ಆನ್ ಲೈನ್ ನಲ್ಲಿಯೇ ಜನರಿಗೆ ಮೋಸ ಮಾಡಿಕೊಂಡು ಬಂದಿದ್ದಾನೆ. ಅದೇ ರೀತಿ ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ರೈಲ್ವೇ ಇಲಾಖೆ ನೌಕರನಾದ ರಮೇಶ್ ಎಂಬಾತನಿಗೆ ಬರೋಬ್ಬರಿ 4 ಕೋಟಿ ೭ ಲಕ್ಷದ ೯೯ ಸಾವಿರ ರೂ ಪಡೆದು ವಂಚನೆ ಮಾಡಿದ್ದಾನೆ. ಕೂಡಲೇ ಎಚ್ಚೆತ್ತ ರಮೇಶ್ ನ್ಯಾಯಕ್ಕಾಗಿ ಚಿತ್ರದುರ್ಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೂ ಈ ಪ್ರಕರಣದ ಆರೋಪಿಯನ್ನ ಬೆನ್ನತ್ತಿದ ಕೋಟೆನಾಡಿ‌ನ ಖಾಕಿ ಪಡೆಗೆ ಶಾಕ್ ಕಾದಿತ್ತು. 

ಮೋದಿಯವರ ಸುಳ್ಳಾಟ ಬಯಲಿಗೆಳೆಯಲು ರಾಹುಲ್‌ಗೆ ಒಳ್ಳೆಯ ಅವಕಾಶವಿದೆ: ಸಚಿವ ಸಂತೋಷ್ ಲಾಡ್

ಈ ಐನಾತಿ ರಮಣಯ್ಯ ದೇಶಾದ್ಯಂತ ಸರಿ ಸುಮಾರು ೬ ಸಾವಿರಕ್ಕೂ ಅಧಿಕ ಮಂದಿಗೆ ಬರೋಬ್ಬರಿ ೨೧೦ ಕೋಟಿ ಹಣ ಲೂಟಿ ಹೊಡೆದಿದ್ದು ಪೊಲೀಸರ ತನಿಖೆ ಮೂಲಕ ಬೆಳಕಿಗೆ ಬಂದಿದ್ದು, ಇಂತಹ ಬಹುದೊಡ್ಡ ಪ್ರಕರಣವನ್ನು ಭೇದಿಸುವಲ್ಲಿ ಕೋಟೆನಾಡಿನ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಜನರಿಗೆ ಮೋಸ ಮಾಡಿ ವಿದೇಶದಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಕರೆತಂದು ಇಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಈ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಉನ್ನತ ಮಟ್ಟದ ಪೊಲೀಸರಿಗೆ ಚಿತ್ರದುರ್ಗ ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ಈ ಪ್ರಕರಣದಿಂದಾಗಿ ಕೋಟೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ.‌ ಇಂತಹ ತಾಂತ್ರಿಕ ಯುಗದಲ್ಲಿಯೂ ಮೋಸ ಮಾಡುವವರು ಇದ್ದಾರಲ್ಲ ಎಂದು ಜನರು ಭಯ ಭೀತರಾಗಿದ್ದಾರೆ. ಆದ್ದರಿಂದ ಪೊಲೀಸರು ಐನಾತಿ ಕಳ್ಳನ ಎಡೆಮುರಿ ಕಟ್ಟಿದ್ದು ಶ್ಲಾಘನೀಯ. ಆದ್ರೆ ಈ ಹಿಂದೆ ಕೋಟಿ ಗಟ್ಟಲೇ ಮನಿ ಡಬ್ಲಿಂಗ್ ಗೆ ಹಣ ನೀಡಿದ್ದ ವ್ಯಕ್ತಿ ಕೋಟಿಗಟ್ಟಲೇ ಹಣ ಎಲ್ಲಿಂದ ತಂದು ಹಾಕಿದ್ದ, ಈ ಜಾಲದ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ಮೂಲಕ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದರು.

ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿ: ಸಿ.ಟಿ.ರವಿ

ಒಟ್ಟಾರೆಯಾಗಿ ಲಕ್ಷಗಳ ಲೆಕ್ಕದಲ್ಲಿ ಮನಿ ಡಬ್ಲಿಂಗ್ ಕೇಸ್ ನಲ್ಲಿ ಅಂದರ್ ಆಗ್ತಿದ್ದ ಆರೋಪಿಗಳು ಇಂದು ಕೋಟಿಗಟ್ಟಲೇ ಮೋಸ ಮಾಡಿ ಜನರಿಗೆ ಅನ್ಯಾಯ ಮಾಡಲು ಮುಂದಾಗಿರೋದು ಬೇಸರದ ಸಂಗತಿ. ಇನ್ನಾದ್ರು ಜನರು ಸಾಮಾಜಿಕ ಜಾಲತಾಣದಲ್ಲಿ ಹಣದ ಆಸೆಗಾಗಿ ಈ ರೀತಿಯ ಪ್ರಕರಣದಲ್ಲಿ ಮುಂದಾಗೋದು ನಿಲ್ಲಿಸಬೇಕಿದೆ.

Latest Videos
Follow Us:
Download App:
  • android
  • ios