ಅಂಕೋಲ, (ಏ.04): ಅಪಘಾತವಾದರೆ ಸ್ಥಳೀಯರು ಸಾಮಾನ್ಯವಾಗಿ ಮರುಗುತ್ತಾರೆ. ಆದ್ರೆ, ಇಲ್ಲೊಂದು ಕಡೆ ಲಾರಿಯೇ ಮಗುಚಿ ಬಿದಿದ್ದಕ್ಕೆ ಒಂದಷ್ಟು ಜನರಿಗೆ  ಖುಷಿಯೋ ಖುಷಿಯಾಗಿದೆ. ಯಾಕಂದ್ರೆ ಪಲ್ಟಿಯಾಗಿದ್ದು ಮದ್ಯ ಸಾಗಿಸುತ್ತಿದ್ದ ಲಾರಿ.

ಹೌದು.. ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಡ್ಲೂರು ಗ್ರಾಮದ ಬಳಿ ಇಂದು (ಭಾನುವಾರ) ಮದ್ಯವನ್ನು ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಈ ಲಾರಿಯಲ್ಲಿ ಗೋವಾದಿಂದ ಮದ್ಯವನ್ನು ತುಂಬಿಕೊಂಡು ಹುಬ್ಬಳ್ಳಿಗೆ ಸಾಗಿಸಲಾಗುತ್ತಿತ್ತು.

ಬಿಯರ್ ದರ ಭಾರೀ ಇಳಿಕೆ; ಬಾಟಲ್‌ಗೆ  20 ರೂ. ಕಡಿಮೆ ಇಂದಿನಿಂದಲೇ! 

ಆದರೆ ವಿವಿಧ ಬ್ರ್ಯಾಂಡ್​ನ ಮದ್ಯದ ಬಾಕ್ಸ್​ಗಳನ್ನು ತುಂಬಿಕೊಂಡು ಹೊರಟಿದ್ದ ಈ ಲಾರಿ ಅಪಘಾತಕ್ಕೀಡಾಗಿ ಪಲ್ಟಿಯಾಗಿದ್ದರಿಂದ, ಅದರಲ್ಲಿ ತುಂಬಿದ್ದ ಮದ್ಯದ ಬಾಕ್ಸ್​ಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ. 

ಇದನ್ನು ಕಂಡ ಜನರು ಲಾರಿ ಬಳಿ ಬಂದು ಮದ್ಯದ ಬಾಟಲಿಗಳ ಬಾಕ್ಸ್​ಗಳನ್ನೇ ಹೊತ್ತೊಯ್ದಿದ್ದಾರೆ. ಇವತ್ತು ಭಾನುವಾರ ಬೇರೆ. ಫುಲ್ ಪಾರ್ಟಿ ಮಾಡಿದ್ದಾರೆ. 

ಒಟ್ಟಿನಲ್ಲಿ ಕೆಲವರಿಗೆ ಸಂಡೇ ಪಾರ್ಟಿ ಜೋರಾಗಿದ್ರೆ, ಇನ್ನೂ ಕೆಲವರು ನಮಗೆ ಸಿಗಲಿಲ್ಲ ಅಂತ ಬೇಸರಗೊಂಡಿರುವುದಂತೂ ಗ್ಯಾರಂಟಿ.