ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಸ್ನಾನ ಮಾಡುವಾಗ ಈತನನ್ನು ಗಮನಿಸಿರುವ ಮಹಿಳೆ, ಜೋರಾಗಿ ಕಿರುಚಿದ್ದಾರೆ. ತಕ್ಷಣ ಮಹಿಳೆಯ ಪತಿ ಹಾಗೂ ಅಕ್ಕಪಕ್ಕದ ಮನೆಯವರು ಓಡಿ ಬಂದಾಗ, ನಿತಿನ್‌ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಬೆಂಗಳೂರು(ಜೂ.12): ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕಾಮುಕನೊಬ್ಬನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುನೇನಕೊಳಲು ಮಂಜುನಾಥನಗರ ನಿವಾಸಿ ನಿತಿನ್‌ (25) ಬಂಧಿತ. ನಗರದ ಖಾಸಗಿ ಫಾರ್ಮಾಸ್ಕೂ್ಯಟಿಕಲ್‌ ಕಂಪನಿಯೊಂದರ ಉದ್ಯೋಗಿಯಾಗಿರುವ ನಿತಿನ್‌, ಶನಿವಾರ ಬೆಳಗ್ಗೆ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಸ್ನಾನ ಮಾಡುವಾಗ ಈತನನ್ನು ಗಮನಿಸಿರುವ ಮಹಿಳೆ, ಜೋರಾಗಿ ಕಿರುಚಿದ್ದಾರೆ. ತಕ್ಷಣ ಮಹಿಳೆಯ ಪತಿ ಹಾಗೂ ಅಕ್ಕಪಕ್ಕದ ಮನೆಯವರು ಓಡಿ ಬಂದಾಗ, ನಿತಿನ್‌ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಶಿರಾಡಿ: ಟ್ಯಾಂಕರ್‌ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ

ಆರೋಪಿ ನಿತಿನ್‌ ಬಹಳ ದಿನಗಳಿಂದ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡುತ್ತಿದ್ದ. ಆದರೆ, ಮಹಿಳೆ ಗಮನಿಸಿರಲಿಲ್ಲ. ಶನಿವಾರ ಆರೋಪಿ ತನ್ನ ಚಾಳಿ ಮುಂದುವರೆಸಿದ್ದಾಗ ಮಹಿಳೆ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.