ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನಾಮ ಹಾಕಿದ ವಂಚಕರು: ಖಾತೆಯಲ್ಲಿದ್ದ ಲಕ್ಷ‌-ಲಕ್ಷ‌ ಹಣ ಮಂಗಮಾಯ!

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನ ಸಾಮಾನ್ಯರು ಮಾತ್ರವಲ್ಲದೆ, ಖುದ್ದು ಪೊಲೀಸ್ ಅಧಿಕಾರಿಗಳೇ ಸೈಬರ್ ವಂಚನೆಗೆ ಒಳಗಾಗಿದ್ದು, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಒಬ್ಬರು ದೂರು ದಾಖಲಿಸಿದ್ದಾರೆ. 

online fraudsters stole money from police inspector bank account in hubballi gvd

ಹುಬ್ಬಳ್ಳಿ (ನ.23): ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನ ಸಾಮಾನ್ಯರು ಮಾತ್ರವಲ್ಲದೆ, ಖುದ್ದು ಪೊಲೀಸ್ ಅಧಿಕಾರಿಗಳೇ ಸೈಬರ್ ವಂಚನೆಗೆ ಒಳಗಾಗಿದ್ದು, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಒಬ್ಬರು ದೂರು ದಾಖಲಿಸಿದ್ದಾರೆ. ಹೌದು! ಧಾರವಾಡ ಉಪನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಯಾನಂದ ಶೇಗುಣಸಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅವರ ಗಮನಕ್ಕೆ ಬರದೆ ಆನ್‌ಲೈನ್‌ಲ್ಲಿ ವರ್ಗಾವಣೆ ಮಾಡಲಾಗಿದೆ.  ಕುರಿತು ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿದ್ದಾರೆ.  

ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ವರ್ಗಾವಣೆಯಾಗಿದೆ. ಬ್ಯಾಂಕ್‌ನವರು ಸೆಕ್ಯೂರ್‌ ಇರುವ ನೆಟ್‌ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್‌ ಖಾತೆಗೆ ಲಿಂಕ್‌ ಇರುವ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದ್ದ ಸಂದರ್ಭ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ 50 ಸಾವಿರದಂತೆ 12 ಬಾರಿ, 45 ಸಾವಿರ ಮೂರು ಬಾರಿ, 25 ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡಿರುವ ವಂಚಕರು ಇನ್ಸ್ಪೆಕ್ಟರ್ ನಾಮ ಹಾಕಿದ್ದಾರೆ.ಈ ಬಗ್ಗೆ ಸ್ವತಃ ಇನ್ಸ್ಪೆಕ್ಟರ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬ್ಯಾಂಕ್‌ ನಿಷ್ಕಾಳಜಿಯಿಂದಲೂ ಆಗಿರಬಹುದು. ಅಥವಾ ಹೊಸ ಬಗೆಯ ಸೈಬರ್‌ ಕ್ರೈಂ ಹುಟ್ಟಿಕೊಂಡಿದೆಯ ಎಂಬ ಅನುಮಾನ ಶುರುವಾಗಿದೆ.

126 ಬೇನಾಮಿ ಖಾತೆ ಸೃಷ್ಟಿಸಿ ಸೈಬರ್‌ ವಂಚನೆ: ಅಮಾಯಕರಿಗೆ ಕೇವಲ ಐದು, ಹತ್ತು ಸಾವಿರ ಹಣದ ಆಮಿಷವೊಡ್ಡಿ ಬೇನಾಮಿ ಬ್ಯಾಂಕ್‌ ಖಾತೆಗಳನ್ನು ತೆರೆದು ಸೈಬರ್ ವಂಚನೆಗೆ ಬಳಸಿಕೊಂಡು ಅಕ್ರಮವಾಗಿ ಲಕ್ಷಾಂತರ ರುಪಾಯಿ ಸಂಪಾದನೆ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನನ್ನ ಪಕ್ಷಾಂತರ ಪ್ರಭಾವ ಪಂಚರಾಜ್ಯ ಚುನಾವಣೆ ಮೇಲೂ ಆಗಿದೆ: ಜಗದೀಶ್‌ ಶೆಟ್ಟರ್‌

ಕೇರಳ‌ ಮೂಲದ ಕೆ.ಪಿ.ಸಮೀರ್, ಮೊಹಮ್ಮದ್ ಅಸನ್, ಮೊಹಮ್ಮದ್ ಇರ್ಫಾನ್, ಅಮಲ್‌ ಬಾಬು, ತಾಂಜಿಲ್ ಸಾಹುಲ್ ಹಾಗೂ ಬೆಂಗಳೂರು ಮೂಲದ ಎಚ್.ಸಿ.ಮಂಜುನಾಥ್ ಬಂಧಿತರು. ಇತ್ತೀಚೆಗೆ ಆರೋಪಿಗಳು ಮತ್ತಿಕೆರೆಯ ಮಂಜೇಶ್‌ ಎಂಬುವವರಿಗೆ ಕೆವೈಸಿ ದಾಖಲೆ ನೀಡಿದರೆ ₹10 ಸಾವಿರ ನೀಡುವುದಾಗಿ ಆಮೀಷವೊಡ್ಡಿದ್ದರು. ಈ ಬಗ್ಗೆ ಅನುಮಾನಗೊಂಡು ನೀಡಿದ ದೂರಿನ ಮೇರೆಗೆ ನಗರ ಸೈಬರ್‌ ಕ್ರೈಂ ಠಾಣೆ ಇನ್‌ಸ್ಪೆಕ್ಟರ್‌ ಹಜರೇಶ್‌ ಕಿಲ್ಲೇದಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

Latest Videos
Follow Us:
Download App:
  • android
  • ios