ತೀರ್ಥಹಳ್ಳಿ; ದಾರುಣ ವಿಧಿ, ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು
ಅಡಿಕೆ ನುಂಗಿ ಮಗು ಸಾವು/ ತೀರ್ಥಹಳ್ಳಿಯಲ್ಲಿ ದಾರುಣ ಘಟನೆ/ ಮನೆಯ ಹರಿವಾಣದಲ್ಲಿ ಇದ್ದ ಅಡಿಕೆ ನುಂಗಿದ ಮಗು/ ಉಸಿರು ಕಟ್ಟಿ ಸಾವನ್ನಪ್ಪಿದ ಮಗು
ಶಿವಮೊಗ್ಗ(ಫೆ. 06) ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಶನಿವಾರ ಬೆಳಗ್ಗೆ ಅಡಿಕೆ ನುಂಗಿ ಉಸಿರುಗಟ್ಟಿ ಒಂದು ವರ್ಷ ಮಗುವೊಂದು ಮೃತಪಟ್ಟಿದೆ. ಸಂದೇಶ್ ಮತ್ತು ಅರ್ಚನಾ ದಂಪತಿ ಪುತ್ರ ಶ್ರೀಹಾನ್ ದಾರುಣ ಸಾವಿಗೆ ಗುರಿಯಾಗಿದ್ದಾನೆ.
ಆಟವಾಡುತ್ತಿದ್ದ ಮಗು ಮನೆಯ ಹರಿವಾಣ ತಟ್ಟೆಯಲ್ಲಿದ ಅಡಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಡಿಕೆ ನುಂಗಿದ ಮಗುವನ್ನು ತಕ್ಷಣವೇ ಕಟ್ಟೆಹಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಅಲ್ಲಿಂದ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.
ಉಳಿದಿದ್ದು ಬರಿ ಕಣ್ಣೀರು...ದುರಂತ ಜಾಗದಲ್ಲೇ ಪೋಟೋ ಇಟ್ಟರು...!
ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀಹಾನ್‌ಗೆ ‘ಆರೋಗ್ಯವಂತ’ ಮಗು ಎಂಬ ಪುರಸ್ಕಾರ ಜತೆಗೆ ನಗದು ಬಹುಮಾನ ಕೂಡ ನೀಡಿ ಗೌರವಿಸಲಾಗಿತ್ತು. ಮಗುವಿನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಂದೇಶ್ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು ಕೊರೋನಾ ಸಂದರ್ಭದಿಂದ ಹೆದ್ದೂರಿನ ಮನೆಯಲ್ಲಿ ಮಗು ಬಿಟ್ಟಿದ್ದರು. ಭಾನುವಾರ ಬೆಂಗಳೂರಿಗೆ ಕರೆದುಕೊಂಡು ಹೋಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.