ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ,ಪ್ಲೈ ಓವರ್‌ನಿಂದ ಬಿದ್ದು ಚಾಲಕ ಸಾವು!
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಭೀಕರ ಅಪಘಾತದಲ್ಲಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಕಾರು ಫ್ಲೈ ಓವರ್ ಮೇಲಿನಿಂದ ಕೆಳಕ್ಕೆ ಬಿದ್ದು ಅಪ್ಪಚ್ಚಿಯಾಗಿದೆ.
ರಾಮನಗರ(ಮಾ.16) ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಅತೀ ವೇಗದಿಂದ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ.ಪರಿಣಾಮ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿಯ ನೇಟಸ್ ಶಾಲೆ ಸಮೀಪದಲ್ಲಿನ ಫ್ಲೈ ಓವರ್ ಮೇಲಿನಿಂದ ಕೆಳಕ್ಕೆ ಬಿದ್ದಿದೆ. ಹೆದ್ದಾರಿಯ ಅಂಡರ್ ಪಾಸ್‌ಗೆ ಉರುಳಿದ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅತೀ ವೇಗದಿಂದ ಕಾರು ಚಾಲನ ನಿಯಂತ್ರಣ ತಪ್ಪಿರುವುದೇ ಅಪಘಾತ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಅಭಿಷೇಕ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ರಾಮನಗಲ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.
ತುಕಾಲಿ ಸಂತೋಷ್ ಕಾರು ಅಪಘಾತ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಗುಮ ಸಂಚಾರ ಹಾಗೂ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ ಹಲವು ಅಂಡರ್ ಪಾಸ್, ಫ್ಲೈ ಓವರ್ ಮಾಡಲಾಗಿದೆ. ಪ್ರತಿ ಫ್ಲೈ ಓವರ್ ಪ್ರವೇಶಕ್ಕೂ ಮುನ್ನ ವೇಗದ ಮಿತಿಯನ್ನು ನಮೂದಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನದ ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ. ಅದರಲ್ಲೂ ಪ್ರಮುಖವಾಗಿ ಫ್ಲೈ ಓವರ್ ಮೇಲೆ ವೇಗದ ಮಿತಿ ಕಡಿತಗೊಳಿಸಲಾಗಿದೆ. 60 ಕಿ.ಮೀಗೆ ಇಳಿಸಲಾಗಿದೆ. ಫ್ಲೈ ಓವರ್ ಮೇಲೆ ಅತೀ ವೇಗದ ಚಾಲನೆ ಅತ್ಯಂತ ಅಪಾಯಾಕಾರಿಯಾಗಿದೆ. ಹೀಗಾಗಿ ವೇಗದ ಮಿತಿಯನ್ನು ಮತ್ತಷ್ಟು ಕಡಿತಗೊಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಇತ್ತ ಚಾಲಕನ ಮರಣೋತ್ತರ ವರದಿಗೂ ಕಾಯುತ್ತಿದ್ದಾರೆ. ಇತ್ತ ಅಭಿಷೇಕ್ ನಿಧನ ಸುದ್ದಿಯಿಂದ ಕೆಸ್ತೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಗುವಿನ ಮೇಲೆ ಕಾರು ಹತ್ತಿಸಿದ, ಕೈ ಮುಗಿದು ಬೇಡಿಕೊಂಡರು ಆಸ್ಪತ್ರೆ ಸೇರಿಸಲು ನಿರಾಕರಿಸಿದ : ಮಗು ಸಾವು
ಫ್ಲೇ ಓವರ್ ಮೇಲೆ ಸೈಡ್ ಸೇಫ್ಟಿ ವಾಲ್‌ಗೆ ಡಿಕ್ಕಿಯಾದ ಕಾರು ನೇರವಾಗಿ ಕೆಳಕ್ಕೆ ಬಿದ್ದಿದೆ. ಅತೀ ವೇಗ ಹಾಗೂ ಎತ್ತರದಿಂದ ಕೆಳಕ್ಕೆ ಬಿದ್ದ ಕಾರು ಅಪ್ಪಚ್ಚಿಯಾಗಿದೆ ಕಾರು ಬಹುತೇಕ ಗುರುತೇ ಸಿಗದಂತೆ ಅಪ್ಪಚ್ಚಿಯಾಗಿದೆ. ಇತ್ತ ಕಾರಿನೊಳಗೆ ಚಾಲಕ ಅಭಿಷೇಕ್ ಮಾತ್ರ ಪ್ರಯಾಣಿಸುತ್ತಿದ್ದ.