ಆಂಧ್ರದಿಂದ ತುಮಕೂರಿಗೆ ಸಾಗಾಟ ವೇಳೆ ದಾಳಿ: ಒಂದು ಕೋಟಿ ಮೌಲ್ಯದ ರಕ್ತಚಂದನ ವಶ..!

ತಪಾಸಣೆಗೆ ಮುಂದಾದಾಗ ಚಾಲಕ ಸೇರಿ ಇಬ್ಬರು ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗಿ ಚರಂಡಿಯಲ್ಲಿ ಅವಿತು ಕುಳಿತಿದ್ದ ಚಾಲಕ ಇಬ್ರಾಹಿಂನನ್ನ ಅರಣ್ಯ ಇಲಾಖೆ ಸಿಬ್ನಂದಿ ಬೆನ್ನತ್ತಿ ಹಿಡಿದಿದ್ದಾರೆ. ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ಆರಂಭಿಸಲಾಗಿದೆ. 
 
one crore worth red sandalwood seized in tumakuru grg

ತುಮಕೂರು(ಜು.23):  ಆಂಧ್ರದಿಂದ ತುಮಕೂರಿಗೆ ಸಾಗಿಸುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಒಂದು ಕೋಟಿ ರೂ. ಮೌಲ್ಯದ ರಕ್ತಚಂದನವನ್ನ ವಶಪಡಿಸಿಕೊಂಡ ಘಟನೆ ತುಮಕೂರಿನ ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾ ಬಳಿ ಇಂದು(ಮಂಗಳವಾರ) ನಡೆದಿದೆ. 

ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ರಕ್ತಚಂದನ ಪತ್ತೆಯಾಗಿದೆ. ತಪಾಸಣೆಗೆ ಮುಂದಾದ ಇಲಾಖೆ ಸಿಬ್ಬಂದಿ ಕೇಶವಮೂರ್ತಿಯಿಂದ ರಕ್ತ ಚಂದನ ಪತ್ತೆಯಾಗಿದೆ. 
ತಪಾಸಣೆಗೆ ಮುಂದಾದಾಗ ಚಾಲಕ ಸೇರಿ ಇಬ್ಬರು ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗಿ ಚರಂಡಿಯಲ್ಲಿ ಅವಿತು ಕುಳಿತಿದ್ದ ಚಾಲಕ ಇಬ್ರಾಹಿಂನನ್ನ ಅರಣ್ಯ ಇಲಾಖೆ ಸಿಬ್ನಂದಿ ಬೆನ್ನತ್ತಿ ಹಿಡಿದಿದ್ದಾರೆ. ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ಆರಂಭಿಸಲಾಗಿದೆ. 

ಮಂಗಳೂರು: ಕಸ್ಟಮ್ಸ್ ವಶಕ್ಕೆ ಪಡೆದ ರಕ್ತಚಂದನ 28 ಕೋಟಿಗೆ ಹರಾಜು!

ಸ್ಥಳಕ್ಕೆ ಆಗಮಿಸಿದ ಎಸಿಎಫ್ ಮಹೇಶ್ ಮಾಲಗತ್ತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೆ.ಎ.45 -6234 ವಾಹನದಲ್ಲಿ‌ ರಕ್ತ ಚಂದನದ ತುಂಡುಗಳನ್ನ ಸಾಗಿಸಲಾಗುತಿತ್ತು.  

Latest Videos
Follow Us:
Download App:
  • android
  • ios