Asianet Suvarna News Asianet Suvarna News

ಹೆಣ್ಮಕ್ಕಳಿಗೆ ಜನ್ಮ ಕೊಟ್ಟಳೆಂದು ನಡುರಸ್ತೆಯಲ್ಲೇ ಮಹಿಳೆಯ ಥಳಿಸಿದ ಗಂಡ, ಅತ್ತೆ!

* ಹೆಣ್ಣು ಮಗುವಿನ ಮೇಲೆ ವೈರಾಗ್ಯ, ಸೊಸೆಗೆ ಥಳಿಸಿದ ಅತ್ತೆ, ಗಂಡ

* ಮಹಿಳೆ ಮೇಲಿನ ದೌರ್ಜನ್ಯದ ವಿಡಿಯೋ ವೈರಲ್

* ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ಇದೆಂತಹಾ ಕ್ರೌರ್ಯ?

 

On Camera UP Woman Beaten By In Laws For Having Daughters pod
Author
Bangalore, First Published Jun 4, 2022, 2:09 PM IST | Last Updated Jun 4, 2022, 2:09 PM IST

ಲಕ್ನೋ(ಜೂ.04): ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡದ ಕಾರಣ ಮಹಿಳೆಯೊಬ್ಬರು ಹೀನಾಯ ಶಿಕ್ಷೆಗೆ ಗುರಿಯಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ಮಹಿಳೆಯ ಪತಿ ಮತ್ತು ಅತ್ತೆ ಸೇರಿ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಈ ಘಟನೆಯ ವೀಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಸಂತ್ರಸ್ತ ಮಹಿಳೆಗೆ ಆಕೆಯ ಅತ್ತೆಯ ಮನೆಯ ಇಬ್ಬರು ಹೆಂಗಸರು ಮನೆಯ ಮುಂದೆ ದಾರಿ ಮಧ್ಯೆ ಒದ್ದು, ಥಳಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೇ ಈ ಇಬ್ಬರು ಮಹಿಳೆಯರು ಆಕೆಯನ್ನು ನಿಂದಿಸುವುದರೊಂದಿಗೆ ಅಳದಂತೆ ಅವಾಜ್ ಹಾಕಿದ್ದಾರೆ.

ಮಹಿಳೆಯರಿಬ್ಬರೂ ಸೇರಿ ಸಂತ್ರಸ್ತೆಯನ್ನು ಒಮ್ಮೆ ಥಳಿಸಿದರೆ, ಮತ್ತೊಮ್ಮೆ ಒದೆಯುತ್ತಿರುವುದನ್ನು ನೋಡಬಹುದು. ಮರುಕ್ಷಣವೇ ಆಕೆಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಪತಿ ಹಾಗೂ ಅತ್ತೆಯಂದಿರು ಪದೇ ಪದೇ ಥಳಿಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಅವರಿಗೆ ಮಗ ಬೇಕಿತ್ತು.

ಗಂಡ ಮತ್ತು ಅತ್ತೆ-ಮಾವಂದಿರು ನನಗೆ ಗಂಡು ಮಗುವಾಗಲಿಲ್ಲವೆಂದು ಕಿರುಕುಳ ನೀಡುತ್ತಿದ್ದರು, ನಾನು ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಅವರ ಕಿರುಕುಳ ಹೆಚ್ಚಾಯಿತು’ ಎಂದು ಮಹಿಳೆ ಹೇಳಿದರು. ತನ್ನ ಅತ್ತೆಯಂದಿರು ಹಲವಾರು ಬಾರಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ, ಇದಾದ ಬಳಿಕ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದಳು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೋಬಾ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಮಾತನಾಡಿ, ಸಂತ್ರಸ್ತ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ನಾವು ಎಫ್‌ಐಆರ್ ದಾಖಲಿಸಿದ್ದೇವೆ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

Latest Videos
Follow Us:
Download App:
  • android
  • ios