ಯುವಕರ ಮಧ್ಯೆ ಹಣದ ವಿಚಾರವಾಗಿ ಗಲಾಟೆ ನಡೆದು, ಬ್ಲೇಡ್ ನಿಂದ ಹಲ್ಲೆ‌ ನಡೆಸಿರುವ ಘಟನೆ ಗದಗ ನಗರದ ಭೀಷ್ಮ ಕೆರೆ ಬಳಿ‌ ನಡೆದಿದೆ. 

ಗದಗ (ಜ.11): ಯುವಕರ ಮಧ್ಯೆ ಹಣದ ವಿಚಾರವಾಗಿ ಗಲಾಟೆ ನಡೆದು, ಬ್ಲೇಡ್ ನಿಂದ ಹಲ್ಲೆ‌ ನಡೆಸಿರುವ ಘಟನೆ ಗದಗ ನಗರದ ಭೀಷ್ಮ ಕೆರೆ ಬಳಿ‌ ನಡೆದಿದೆ. ಘಟನೆಯಲ್ಲಿ ನಗರದ ಪಂಚಲೊಂಡ ಏರಿಯಾದ ಮಂಜುನಾಥ್ ಹಿರೇಮಠ, ಶಹನವಾಜ್ ಗೆ ಕುತ್ತಿಗೆಗೆ ಗಾಯಗಳಾಗಿದ್ದು, ಇಬ್ಬರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ್ಲಾಗ್ತಿದೆ. ಓಂ ಎಂಬುವವ ಹಳೆಯ ದ್ವೇಷ ಇಟ್ಟುಕೊಂಡು ಎಂಟು ಜನರೊಂದಿಗೆ ಬಂದು ಹಲ್ಲೆ ಮಾಡಿ ಗಾಯಗೊಳಿಸಿರೋದಾಗಿ ಮಂಜುನಾಥ್ ಹೇಳಿಕೆ ನೀಡಿದ್ದಾನೆ. 

ಗೂಡಸಾಬ್ ಅನ್ನೋ ಲಾರಿ ಚಾಲಕ, ತನ್ನ ಲಾರಿಯಲ್ಲಿದ್ದ‌ ಸಕ್ಕರೆ ಅನ್ಲೋಡ್ ಮಾಡಿ, ಅಂಗಡಿ‌ ಮಾಲೀಕನಿಂದ ಅದರ 3200 ರೂ. ಪಡೆದಿದ್ದಾನೆ. ಈ ವೇಳೆ ಮಂಜುನಾಥ ಹಿರೇಮಠ ಹಾಗೂ ಶಹನವಾಜ್ ಸಿದ್ನೆಕೊಪ್ಪ ಅನ್ನೋ ಯುವಕರು, ಹೊಸ ಬಸ್ ನಿಲ್ದಾಣದ ಬಳಿ ಈತನನ್ನ ತಡೆದು, ಹೊಟೆಲ್ ನಲ್ಲಿ‌ ಊಟ ಮಾಡಿ ಹಾಗೇ ಬಂದಿದಿಯಾ ಹಣ ಕೊಡು ಅಂತಾ ಏಕಾ ಏಕಿ ಗಲಾಟೆ ಮಾಡಿದ್ರಂತೆ. ಅಲ್ದೆ, ಹಣ ದೋಚಲು ಯತ್ನಿಸಿದ್ದಾರಂತೆ. ತಕ್ಷಣ ಅವರಿಂದ ತಪ್ಪಿಸಿಕೊಂಡು, ಗೂಡಸಾಬ್ ನಗರದ ಎಂಜಿಎಂ ಆಸ್ಪತ್ರೆವರೆಗೂ ಓಡಿ ಬಂದಿದ್ನಂತೆ. ಯುವಕರ‌ ಗಲಾಟೆ ಗಮನಿಸಿದ ಸ್ಥಳಿಯರು ಬುದ್ಧಿವಾದ ಹೇಳಿದರೂ ಯಾರ ಮಾತನ್ನೂ ಕೇಳಿಲ್ಲ.

ಭಾರೀ ಕಳ್ಳತನ: ಮುಕ್ಕಾಲು ಕೆಜಿ ಚಿನ್ನ, 5.5 ಲಕ್ಷ ನಗದು, 15 ಕೆಜಿ ಬೆಳ್ಳಿ ದೋಚಿದ ಕಳ್ಳರು!

ಒಬ್ಬರಿಗೊಬ್ಬರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ತನ್ನನ್ನ ರಕ್ಷಿಸಿಕೊಳ್ಳೋಕೆ, ಗೂಡಸಾಬ್, ಅಲ್ಲೇ ಇದ್ದ ಬ್ಲೇಡ್ ತಗೆದುಕೊಂಡು ಇಬ್ಬರೂ ಯುವಕರ‌ ಮೇಲೆ ಹಲ್ಲೆ ಮಾಡಿದ್ದಾನೆ. ಸ್ಥಳಕ್ಕೆ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ,‌ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.. ಸದ್ಯ ಬಡಾವಣೆ ಪೊಲೀಸರು, ಹಲ್ಲೆ ಮಾಡಿದ ಗೂಡಸಾಬ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ, ಯಾವುದು ಸತ್ಯ,‌ ಯಾವದು ಸುಳ್ಳು‌ ಅನ್ನೋದು ತಿಳಿಯಲಿದೆ.