Mangaluru: ಅಪಾರ್ಟ್ಮೆಂಟ್‌ನಲ್ಲಿ ಅನುಮಾನಾಸ್ಪದವಾಗಿ ವೃದ್ಧ ದಂಪತಿ ಮೃತದೇಹ ಪತ್ತೆ

ಮಂಗಳೂರಿನ ಬಿಜೈ ಕಾಪಿಕಾಡ್ ಖಾಸಗಿ ಫ್ಲಾಟ್ ವೊಂದರ ಕೊಠಡಿಯಲ್ಲಿ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಅವರ ಪತ್ನಿ (ಹಿರಿಯ ದಂಪತಿ) ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾಗಿದೆ.

Old couple found dead in Mangaluru apartment suspiciously sat

ಮಂಗಳೂರು (ಜ.28): ಕರಾವಳಿ ತೀರ ಮಂಗಳೂರಿನ ಬಿಜೈ ಕಾಪಿಕಾಡ್ ಖಾಸಗಿ ಫ್ಲಾಟ್ ವೊಂದರ ಕೊಠಡಿಯಲ್ಲಿ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಅವರ ಪತ್ನಿ (ಹಿರಿಯ ದಂಪತಿ) ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾಗಿದೆ. ಈ ವೃದ್ಧ ದಂಪತಿ ಸಾವಿಗೆ ಕಾರಣ ಏನೆಂಬುದು ಪತ್ತೆಯಾಗಿಲ್ಲ.

ನಿವೃತ್ತ ಬ್ಯಾಂಕ್ ಮ್ಯಾನೇಜರ್ ದಿನೇಶ್(67) ಮತ್ತು ಪತ್ನಿ ಶೈಲಜಾ(64) ಸಾವನ್ನಪ್ಪಿದ ವೃದ್ಧರಾಗಿದ್ದಾರೆ. ಮಂಗಳೂರು ನಗರ ಬಿಜೈ ಕಾಪಿಕಾಡ್ 4ನೇ ಅಡ್ಡ ರಸ್ತೆಯ ಪೂನಂ ಪಾರ್ಕ್ ಅಪಾರ್ಟ್ಮೆಂಟ್‌ನ ಎರಡನೇ ಮಹಡಿಯ ಮನೆಯ ಬೆಡ್ ರೂಂನಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದ ಆರು ವರ್ಷಗಳಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ನಿವೃತ್ತ ಬ್ಯಾಂಕ್‌ ಅಧಿಕಾರಿಯ ಪತ್ನಿ ಶೈಲಜಾ  ಹಾಸಿಗೆ ಹಿಡಿದಿದ್ದರು. ದಂಪತಿ ಪ್ರತಿನಿತ್ಯ ಕಷ್ಟದಿಂದಲೇ ಜೀವನ ಮಾಡುತ್ತಿದ್ದರು.

Raichur: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಸಾವು: ಹೃದಯಾಘಾತಕ್ಕೆ ಬಲಿ

ಪತಿಯೇ ಪತ್ನಿ ಕೊಲೆ ಮಾಡಿರುವ ಶಂಕೆ:  ಇನ್ನು ಅಪಾರ್ಟ್‌ಮೆಂಟ್‌ನ ಮಹಡಿಯಲ್ಲಿ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ದಿನೇಶ್‌ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಅವರ ಪತ್ನಿ ಶೈಲಜಾ ಮೃತದೇಹ ಹಾಸಿಗೆ ಮೇಲಿದೆ. ಹೀಗಾಗಿ, ದಿನೇಶ್‌ ಅವರೇ ತಮ್ಮ ಪತ್ನಿ ಶೈಲಜಾ ಅವರನ್ನು ಹತ್ಯೆಗೈದು ನಂತರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ದುರ್ಘಟನೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios