ಭುವನೇಶ್ವರ, (ಜೂನ್. 06): ಅತ್ತಿಗೆ ತನ್ನ ತಾಯಿಯ ಸಮಾನ ಎಂದು ತಿಳಿದರೂ ಆಕೆಯ ಜತೆ ಚಕ್ಕಂದವಾಡಲು ಹೋಗಿ ಇದೀಗ ಮಸಣ ಸೇರಿದ್ದಾನೆ.

ಹೌದು...ಅಣ್ಣನೊಬ್ಬ ತನ್ನ ಪತ್ನಿಯನ್ನು ಪ್ರೀತಿಸುತ್ತಿದ್ದ ಸಹೋದರ (ಚಿಕ್ಕಪ್ಪನ ಮಗ) ನನ್ನು ಬಾಣದ ಮೂಲಕ ಕೊಲೆ ಮಾಡಿದ್ದಾನೆ. ಶಂಕರ್ ಮುಂಡಾ ಎನ್ನುವಾತ ಕೊಲೆ ಮಾಡಿದ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ.

ಸ್ನೇಹಿತರ ಬಳಿ ಹೆಂಡತಿ ಕರೆದೊಯ್ದ ಗಂಡ, ಮಗುವಿನ ಎದುರೇ ತಾಯಿ ಮೇಲೆ ಅತ್ಯಾಚಾರ

ಈ ಘಟನೆ ಒಡಿಶಾದ ಕಿಯೊಂಜ್ಹಾರ ಜಿಲ್ಲೆಯ ಟೆಲ್ಕೊಯಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ಜಿತು ಮುಂಡಾ ಎಂದು ಗುರುತಿಸಲಾಗಿದೆ. 

ಘಟನೆ ಹಿನ್ನೆಲೆ
ಶಂಕರ್ ಮುಂಡಾ ಸಂಬಂಧದಲ್ಲಿ ಮೃತ ಜಿತುಗೆ ಸಹೋದರ ಆಗಬೇಕು. ಆದರೆ ಮೃತ ಜಿತು ತನ್ನ ಸಹೋದರ ಶಂಕರ್ ಪತ್ನಿ ಅಂದರೆ ಅತ್ತಿಗೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆಕೆಯ ಜೊತೆ ಅನೈತಿಕ ಸಂಬಂಧ ಕೂಡ ಇಟ್ಟುಕೊಂಡಿದ್ದನು. 

ವಿಷಯ ತಿಳಿಯುತ್ತಿದ್ದಂತೆಯೇ ಶಂಕರ್, ಈ ರೀತಿ ಮಾಡದಂತೆ ಜಿತುಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಕೇಳದ ಜಿತು ಅತ್ತಿಗೆಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದನು. 

ಇದರಿಂದ ಕೋಪಗೊಂಡ ಶಂಕರ್ ಶುಕ್ರವಾರ ಸಹೋದರ ಜಿತು ಎದೆಗೆ ಬಿಲ್ಲಿನ ಬಾಣವನ್ನ ಬಿಟ್ಟು ಕೊಲೆ ಮಾಡಿದ್ದಾನೆ. ಪರಿಣಾಮ ಜಿತು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಶಂಕರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.