ಭುವನೇಶ್ವರ(ಸೆ. 05) ಅಸಿಸ್ಟಂಟ್ ಇಂಜಿನಿಯರ್ ಒಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿಯ ಶಾಸಕರನ್ನು ಬಂಧಿಸಲಾಗಿದೆ.  ಓರಿಸ್ಸಾದ ಬರಿಪದ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಕಾಶ್ ಸೋರೆನ್ ಬಂಧನವಾಗಿದೆ.

ಬರಿಪದ ಪೊಲೀಸ್ ಸ್ಟೇಶನ್ ನಲ್ಲಿ ಐಪಿಸಿ ಸೆಕ್ಷನ್ 294, 341, 323, 324, 506  ಮತ್ತು  34 ರ ಆಧಾರದಲ್ಲಿ ಶಾಸಕನ ಮೇಲೆ ಕೇಸ್ ಬುಕ್ ಆಗಿದೆ. ಬುಟಕಟ್ಟು ಅಭಿವೃದ್ಧಿ ದಳದ ಇಂಜಿನಿಯರ್ ಗಣಪತಿ ಜೇನಾ ಅವರ ಮೇಲೆ ದಬ್ಬಾಳಿಕೆ ಮಾಡಿದ ಶಾಸಕ ಯಾವ ಕಾರಣಕ್ಕೆ ಕಾಂಟ್ರಾಕ್ಟ್ ಗಳನ್ನು ತಮ್ಮ ಬೆಂಬಲಿಗರಿಗೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.  ಬಿಜೆಡಿ ಕಾತರ್ಯಕತರ್ತರಿಗೆ ಟೆಂಟರ್ ನೀಡುತತ್ತಿರುವುದು ಯಾಕೆ? ಕಳೆದ ವರ್ಷದ  ಕಮಿಷನ್ ಹಣ ನನಗೆ ಯಾಕೆ ಕೊಟ್ಟಿಲ್ಲ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಕರ್ನಾಟಕ ರಾಜಕಾರಣ ಬಿಸಿಯೇರಲು ಕಾರಣವಾದ ದೆಹಲಿಯಿಂದ ಬಂದ ಸುದ್ದಿ

 ಇಂಜಿನಿಯರ್ ದೂರಿನ ಆಧಾರದಲ್ಲಿ ಶಾಸಕನ ವಶಕ್ಕೆ ಪಡೆದು ನಂತರ ವಿಚಾರಣೆ ನಡೆಸಿ ಬಂಧನಕ್ಕೆ ಒಳಪಡಿಸಲಾಘಿದೆ. ಇನ್ನೊಂದು ಕಡೆ ಶಾಸಕರ ಬಂಧನದ ನಂತರ ಅವರ ಬೆಂಬಲಿಗರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. 

ರಾಜಕಾರಣ ವಲಯದಲ್ಲಿ ಈ ರೀತಿಯ ಬೆಳವಣಿಗೆಗಳು ಹೊಸದೇನೂ ಅಲ್ಲ.  ಕರ್ನಾಟಕದಲ್ಲಿಯೂ ಅನೇಕ ಶಾಸಕರು ಮತ್ತು ಮುಖಂಡರು ತಮ್ಮ ಬೆಂಬಲಿಗರಿಗೆ  ಟೆಂಡರ್ ಕೊಡಿಸುತ್ತಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತದೆ.