ವಿಜಯಪುರ, (ಆ.2): ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಮೊಬೈಲ್‌ನಿಂದ ವಿಜಯಪುರ ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಅಶ್ಲೀಲ ಫೋಟೋ ಪೋಸ್ಟ್‌ ಆಗಿವೆ.

"

ವಿಜಯಪುರ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಪೋಸ್ಟ್ ಆದ ಅಶ್ಲೀಲ ಫೋಟೋ ಇಡೀ ಜಿಲ್ಲೆಯಾದ್ಯಂತ ಒಬ್ಬರಿಂದ ಮತ್ತೊಬ್ಬರಿಗೆ ಫುಲ್ ವೈರಲ್ ಆಗುತ್ತಿವೆ.

ಫೇಸ್‍ಬುಕ್‍ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಹಾಕುತ್ತಿದ್ದವ ಪೊಲೀಸ್ ಅತಿಥಿಯಾದ

ವಿಜಯಪುರದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಅವರಿಗೆ ಸೇರಿದ ಮೊಬೈಲ್ ನಂಬರ್‌ನಿಂದ ನಿನ್ನೆ ರಾತ್ರಿ ವಿಜಯಪುರ ಡಿಸಿಸಿ (ಮೀಡಿಯಾ ಮತ್ತು ಟಿವಿ) ಗ್ರೂಪ್‌ನಲ್ಲಿ ಅಶ್ಲೀಲ ಪೋಸ್ಟ್ ವೊಂದನ್ನು ಹರಿಬಿಡಲಾಗಿದೆ. ಇದಕ್ಕೆ ಕೂಡಲೇ ಕೆಲವು ಸದಸ್ಯರು ಆಕ್ಷೇಪವೆತ್ತಿದ್ದಾರೆ.  ಆದರೆ, ಆ ವೇಳೆ ರವಿಗೌಡ ಪಾಟೀಲ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಹಲವು ಜನ ಗ್ರೂಪ್‌ನಿಂದ ಎಕ್ಸಿಟ್ ಆಗಿದ್ದಾರೆ.

ಬಳಿಕ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಅವರು ರವಿಗೌಡ ಪಾಟೀವ ಧೂಳಖೇಡ ಅವರನ್ನು ವಾಟ್ಸಾಪ್ ಗ್ರೂಪ್ ನಿಂದಲೇ ರಿಮೂವ್ ಮಾಡಿದ್ದಾರೆ.  ನಂತರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆನಂತರವಷ್ಟೇ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಸಮಜಾಯಿಷಿ ಕೊಟ್ಟ ರವಿಗೌಡ ಪಾಟೀಲ 
ಇವರ ಫೋನ್‌ನಿಂದ ಹರಿದಾಡಿದ ಫೋಟೋಗಳು ವಿಜಯಪುರ ಡಿಸಿಸಿ (ಪ್ರೆಸ್) ಗ್ರೂಪ್‍ಗೆ ಫಾರ್ವರ್ಡ್‌ ಆಗಿದೆ. ವಿಷಯ ತಿಳಿಯುತ್ತಲೇ ರವಿಗೌಡ ಪಾಟೀಲ ಅವರು ಸಾರ್ವಜನಿಕ ಕ್ಷಮೆ ಕೇಳಿದ್ದಾರೆ.

ನಿನ್ನೆ (ಶನಿವಾರ) ರಾತ್ರಿ ಮನೆಯಲ್ಲಿ ಮುಖ ತೊಳೆಯಲು ಹೋಗಿದ್ದ ವೇಳೆ, ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್‍ ತೆಗೆದುಕೊಂಡು ಆಟವಾಡುತ್ತಿದ್ದರು. ಆ ವೇಳೆ ಅವರಿಗೆ ಗೊತ್ತಾಗದೇ ಈ ರೀತಿ ಆಗಿರಬಹುದು. ಎಲ್ಲರ ಕ್ಷಮೆ ಕೋರುತ್ತೇನೆ ಎಂದು ಪಾಟೀಲರು ಸಮಜಾಯಿಷಿ ನೀಡುವ ಮೂಲಕ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ರಾತ್ರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರೆ ಮಾಡಿ ಹೇಳಿದಾಗಲೇ ನನಗೆ ವಿಷಯ ಗೊತ್ತಾಗಿದೆ. ನನಗೆ ವಾಟ್ಸಪ್  ಬಗ್ಗೆ ಅಷ್ಟೆಲ್ಲಾ ಗೊತ್ತಿಲ್ಲ. ಈ ವಿಷಯ ತಿಳಿದ ನಂತರ ಬೇರೆಯವರಿಗೆ ನನ್ನ ಫೋನ್‌ ತೋರಿಸಿದೆ. ವಾಟ್ಸಪ್ ಕೆಳಗಡೆ ಪಿಕ್ಚರ್ ಬಂದಿದ್ದವು. ಅವುಗಳನ್ನು ಮೊಮ್ಮಕ್ಕಳು ಫಾರ್ವರ್ಡ್ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಅಚಾತುರ್ಯದಿಂದ ನಡೆದ ಘಟನೆಗೆ ವಿಷಾದಿಸುವುದಾಗಿ ತಿಳಿಸಿದ್ದಾರೆ.