ಖತರ್ನಾಕ್ ಕಳ್ಳರನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು
ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಸುಮಾರು 28ರಿಂದ 30 ಪ್ರಕರಣಗಳಲ್ಲಿ ಭಾಗಿಯಾಗಿರೋ ಮೂವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.
ವರದಿ: ರವಿಕುಮಾರ್ ವಿ
ಚಿಕ್ಕಬಳ್ಳಾಪುರ (ಜು.30): ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಸುಮಾರು 28ರಿಂದ 30 ಪ್ರಕರಣಗಳಲ್ಲಿ ಭಾಗಿಯಾಗಿರೋ ಮೂವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಎಸ್.ಪಿ.ನಾಗೇಶ್ ಮಾತನಾಡಿ ಆರೋಪಿಗಳ ಬಂಧನದ ಬಗ್ಗೆ ಸುದ್ದಿಗೋಷ್ಢಿ ನಡೆಸಿದರು. ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ವೃದ್ದೆ ಬಳಿ ಪಲ್ಸರ್‌ನಲ್ಲಿ ಬಂದ ಇಬ್ಬರು ಚಿನ್ನದ ಸರವನ್ನು ಕಳವು ಮಾಡಿಕೊಡು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ತನಿಖೆ ಆರಂಭಿಸಿದಾಗ ಈ ಖದೀಮರ ಜಾಲ ಪತ್ತೆಯಾಗಿದೆ. ಮೂವರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಇಮ್ರಾನ್ ಪಾಷಾ ಅಲಿಯಾಸ್ ಬೋಡ್ಕೆ, ಸಿಕಂದರ್ ಖುರೇಷಿ ಅಲಿಯಾಸ್ ಸಿಕ್ಕು, ಬೆಂಗಳೂರಿನ ಗೌರಿಪಾಳ್ಯದ ಶಬರೀಶ್ ಅಲಿಯಾಸ್ ಅಪ್ಪಿ ಎಂಬ ಮೂವರು ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.
ಕಾರಿನಲ್ಲಿದ್ದ ವೈದ್ಯ ಕುಟುಂಬವನ್ನು ಬೆದರಿಸಿ ನಗದು, ಚಿನ್ನಾಭರಣ ಲೂಟಿ!
ಬರೀ ಚಿಕ್ಕಬಳ್ಳಾಪುರ ಮಾತ್ರವಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ದೊಡ್ಡಬೆಳವಂಗಲ, ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಹಾಗೂ ಬೈಕ್ ಕಳವು ಮಾಡಿದ್ದಾಗ, ಪೊಲೀಸರ ವಿಚಾರಣೆಯಲ್ಲಿ ಕಂಡುಬಂದಿದೆ. ಬಂಧಿತರಿಂದ 5.5 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣಗಳು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಈ ಮೂವರು ಆರೋಪಿಗಳು ಕೊಲೆ, ಸುಲಿಗೆ, ದರೋಡೆ, ಕೊಲೆ ಯತ್ನ, ಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರೋದು ತನಿಖೆಯಿಂದ ಬಯಲಾಗಿದೆ.
ತನಿಖೆಗಿಳಿದ ಪೊಲೀಸರಿಗೆ ಶಾಕ್: ಚಿಕ್ಕಬಳ್ಳಾಪುರ ನಗರದಲ್ಲಿ ಸರಗಳ್ಳತನ ಬೆನ್ನಟ್ಟಿದ ಪೊಲೀಸರು ಇದರ ಜಾಡು ಹಿಡಿದು ತನಿಖೆ ಮಾಡಲು ಮುಂದಾದಾಗ ಪೋಲೀಸರಿಗೆ ಆಶ್ವರ್ಯ ತಂದಿದೆ. ಅವರು ಅಂತಿಂತಾ ಕಳ್ಳರಲ್ಲ. ಖತರ್ನಾಕ್ ಚಾಲಾಕಿಗಳು ಅಂತಾ, ಮೂವರು ಆರೋಪಿಗಳ ಬಗ್ಗೆ ವಿಚಾರಣೆ ನಡೆಸಿದಾಗ ಹೆಚ್ಚು ದರೋಡೆ, ಸುಲಿಗೆ, ಮರ್ಡರ್ ಕೇಸ್‌ನ ಆರೋಪಿಗಳು ಎಂದು ಗೊತ್ತಾಗಿದೆ.
ಒಬ್ಬನದ್ದು 31 ಕೇಸ್ ಮತ್ತೊಬನದ್ದು 28 ಕೇಸ್ ಹಿಸ್ಟರಿ: ಹೌದು! ಆರೋಪಿಗಳಾದ ಇಮ್ರಾನ್ ಪಾಷಾ ಹಾಗೂ ಶಬರೀಶ್ ಇಬ್ಬರು ಕೂಡ ವಿವಿಧ ಠಾಣೆಗಳಲ್ಲಿ ಈಗಾಗಲೇ ಸಾಕಷ್ಟು ಚೈನ್ ಕಳ್ಳತನ, ದರೋಡೆ ಕೇಸ್‌ಗಳಲ್ಲಿ ಭಾಗಿಯಾಗಿದ್ದ ವಿಚಾರ ತಿಳಿದು ಪೊಲೀಸರಿಗೆ ಶಾಕ್ ಆಗಿದೆ. ಇಮ್ರಾನ್ ಅಲಿಯಾಸ್ ಅಲಿಯಾಸ್ ಬೋಡ್ಕೆ ಈಗಾಗಲೇ 31 ಪ್ರಕರಣಗಳಲ್ಲಿ ಭಾಗಿಯಾಗಿರೋದು ಕಂಡುಬಂದಿದ್ದರೆ ಮತ್ತೊಬ್ಬ ಶಬರೀಶ್ 28 ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇಬ್ಬರು ಕೂಡ ಯಲಹಂಕ, ದಾಬಸ್ ಪೇಟೆ, ಪೀಣ್ಯ, ನೆಲಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲೆ ಹೆಚ್ಚು ದರೋಡೆ, ಸುಲಿಗೆ, ಚೈನ್ ಕಳವು ಮಾಡುತ್ತಿದ್ದರು.
ಬಹುದಿನಗಳ ಕನಸು ಈಡೇರುವ ಆಶಾಭಾವನೆ: ಚಿಕ್ಕಬಳ್ಳಾಪುರ- ಗೌರಿಬಿದನೂರು ರೈಲು ಮಾರ್ಗ ಸಮೀಕ್ಷೆ
ಆದರೆ ಇತ್ತೀಚೆಗೆ ಈ ಗ್ಯಾಂಗ್ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಕಡೆಗೂ ಕಳ್ಳತನಕ್ಕೆ ಬಂದು ಇಲ್ಲಿಯೂ ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸರು ಇಂತಹ ಖತರ್ನಾಕ್ ಗ್ಯಾಂಗ್ ಆರೋಪಿಗಳನ್ನು ಪತ್ತೆ ಹಚ್ಚಿದಕ್ಕೆ ಸಿಪಿಐ ರಾಜು, ಪಿಎಸ್ ಐ ಪ್ರದೀಪ್ ಪೂಜಾರಿ ಹಾಗೂ ಸಿಬ್ಬಂದಿಯಾದ ರವಿಕುಮಾರ್, ವಿಜಯ್, ಗೌತಮ್, ಮಧುಸೂದನ್, ಮುರಳಿ, ಪ್ರವೀಣ್ ಕುಮಾರ್, ನಾಗೇಶ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಶ್ಲಾಘಿಸಿದ್ದಾರೆ.