ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಬಂಧನ ಭೀತಿ, ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಸಂಕಷ್ಟ!
ಹಿಟ್ ಚಿತ್ರ ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ ಶುರುವಾಯ್ತು ಸಂಕಷ್ಟ/ ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿ/ 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್/ ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ/ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ
ಅಜನೀಶ್ ಲೋಕನಾಥ್ & ಪರಮ್ವಾ ಸ್ಟುಡೀಯೋಸ್ ಆರೋಪಿಗಳು
ಬೆಂಗಳೂರು(ಏ. 09) ಸೂಪರ್.ಹಿಟ್ ಚಿತ್ರ ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ ಇದೀಗ ಸಂಕಷ್ಟ ಬಂದಿದೆ. ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ. 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ.
ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ ಸಿಕ್ಕಿದೆ. ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿ ಪಟ್ಟಿಯಲ್ಲಿ ಇದ್ದಾರೆ.
ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು.
ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಕಾಪಿ ರೈಟ್ಸ್ ಆಕ್ಟ್ 63ಎ & 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು..
ಸೆಪ್ಟಂಬರ್ 28, 2019 ರಲ್ಲಿ ಕೇಸು ದಾಖಲಾಗಿತ್ತು. ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಕೊನೆಗೆ ಆಡರ್ ಟೆಕಿಂಗ್ ಪಡೆದುಕೊಂಡು ಸಿನಿಮಾ ರಿಲೀಸ್ ಆಗಿತ್ತು. ಕ್ರಿಮಿನಲ್ ಕೇಸ್ ವಿಚಾರಣೆ ಎಸಿಎಂಎಂ ಕೋರ್ಟ್ನಲ್ಲಿ ಮುಂದುವರೆದಿತ್ತು.
ಇಲ್ಲಿತನಕ ಕಿರಿಕ್ ಪಾರ್ಟಿ ಟೀಂ ವಿರುದ್ದ 8 ಬಾರಿ ನಾನ್ ಬೆಲಬಲ್ ಜಾರಿಯಾಗಿದೆ. ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್, ರಕ್ಷಿತ್ ಶೆಟ್ಟಿ ಕೋರ್ಟ್ ಗೆ ಬಂದಿಲ್ಲ
ಈ ಬಾರಿ ಬಂಧಿಸಿ ಕರೆತರಲು ಎಸಿಎಂಎಂ ಕೋರ್ಟ್ ನಿಂದ ಅದೇಶ ನೀಡಿದೆ. ಮೇ 27ಕ್ಕೆ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.