Bengaluru: ಮಾಸ್ಟರ್‌ ಆನಂದ್‌ ಪುತ್ರಿ ವನ್ಷಿಕಾ ಹೆಸರಲ್ಲಿ ವಂಚಿಸಿದ್ದ ನಿಶಾ ನರಸಪ್ಪ ಜೈಲಿಂದ ರಿಲೀಸ್‌..

ಕನ್ನಡ ಕಿರುತೆರೆ ನಿರೂಪಕ ಮಾಸ್ಟರ್‌ ಆನಂದ್‌ ಪುತ್ರಿ ವನ್ಷಿಕಾ ರೀತಿ ನಿಮ್ಮ ಮಕ್ಕಳಿಗೂ ಟಿವಿ ಶೋಗಳು, ಸಿನಿಮಾದಲ್ಲಿ ಚಾನ್ಸ್‌ ಕೊಡುವುದಾಗಿ ಹಣ ಪಡೆದು ವಂಚಿಸಿದ್ದ ನಿಶಾ ನರಸಪ್ಪ ಜೈಲಿನಿಂದ ಬಿಡುಗಡೆ ಆಗಿದ್ದಾಳೆ. 

Nisha Narsappa has released from jail she cheated in name of Master Anand daughter Vamshika sat

ಬೆಂಗಳೂರು (ಜು.28): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಮ್ಮ ಮಕ್ಕಳಿಗೂ ಪ್ರತಿಷ್ಠಿತ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಭಾಗಹಿಸಲು ಚಾನ್ಸ್‌ ಕೊಡಿಸುತ್ತೇವೆ ಎಂದು ಕನ್ನಡ ಕಿರುತೆರೆ ನಿರೂಪಕ ಮಾಸ್ಟರ್‌ ಆನಂದ್‌ ಪುತ್ರಿ ವನ್ಷಿಕಾಳ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿ ನಿಶಾ ನರಸಪ್ಪ 14 ದಿನಗಳ ಕಾಲ ಜೈಲು ಪಾಲಾಗಿದ್ದಳು. ಒಟ್ಟು ಹದಿನಾಲ್ಕು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನಿಶಾ ನರಸಪ್ಪ ಈಗ ಜೈಲಿನಿಂದ ಹೊರ ಬಂದಿದ್ದಾಳೆ.

ಕರ್ನಾಟಕದಲ್ಲಿ ಮಕ್ಕಳ ಟ್ಯಾಲೆಂಟ್‌ ಗುರುತಿಸಿ ಅವರನ್ನು ಬೆಳೆಸಲು ನಾನು ಅವಕಾಶ ಕೊಡಿಸುತ್ತೇನೆ. ಸಿನಿಮಾಗಳಲ್ಲಿ ಹಾಗೂ ಟಿವಿಗಳಲ್ಲಿ ಪ್ರಸಾರವಾಗುವ ರಿತಾಲಿಟಿ ಶೋಗಳಲ್ಲಿ ಚಾನ್ಸ್‌ ಕೊಡಿಸುತ್ತೇನೆ ಎಂದು ನೂರಾರು ಜನರನ್ನು ನಂಬಿಸಿದ್ದ ಆರೋಪಿ ನಿಶಾ ನರಸಪ್ಪ ಲಕ್ಷ, ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಳು. ಮಾಸ್ಟರ್‌ ಆನಂದ್‌ ಪುತ್ರಿ ವನ್ಷಿಕಾ ಭಾಗವಹಿಸುವ ಒಂದೆರಡು ಕಾರ್ಯಕ್ರಮದಲ್ಲಿ ಪೋಸ್‌ ಕೊಟ್ಟಿದ್ದ ನಿಶಾ ನರಸಪ್ಪ, ವನ್ಷಿಕಾ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಿದ್ದಳು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನೂರಾರು ಜನರಿಂದ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿದ್ದಳು.

ಬೆಂಗಳೂರು: ವಂಶಿಕಾ, ನಟರ ಹೆಸರಿನಲ್ಲಿ 40 ಲಕ್ಷ ವಂಚಿಸಿದ ನಿಶಾ

ಸದಾಶಿವನಗರದಲ್ಲಿ ಹಲವು ದೂರು: ವಂಚನೆ ಕುರಿತಂತೆ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿ ಬಹಿರಂಗ ಆಗುತ್ತಿದ್ದಂತೆ ಹಲವು ಜನರು ಬಂದು ತಾವೂ ಕೂಡ ಹಣ ಕೊಟ್ಟಿದ್ದೇವೆ. ನಮ್ಮ ಮಕ್ಕಳಿಗೂ ಯಾವುದೇ ಚಾನ್ಸ್‌ ಕೊಡದೇ ವಂಚನೆ ಮಾಡಿದ್ದಾಳೆ ಎಂದು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ವಂಚನೆ ಮಾಡಿದ್ದ ನಿಶಾ ನರಸಪ್ಪಳನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಇದಾದ ನಂತರ, 14 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ ನಿಶಾ ನರಸಪ್ಪ ಈಗ ಜೈಲಿನಿಂದ ಹೊರ ಬಂದಿದ್ದಾರೆ. 

40 ಲಕ್ಷ ರೂ. ಹೆಸರಲ್ಲಿ ವಂಚನೆ: ಚಲನಚಿತ್ರ ನಟರ ಹೆಸರು ಬಳಸಿಕೊಂಡು ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಪೋಷಕರಿಂದ ಸುಮಾರು 30 ರಿಂದ 40 ಲಕ್ಷ ರುಪಾಯಿ ಪಡೆದು ಆರೋಪಿ ನಿಶಾ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ (ಜು.25ರಂದು) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸಗೌಡ ಅವರು, ಚಲನಚಿತ್ರ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ವಂಚಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ. ತನಿಖೆ ಪೂರ್ಣಗೊಂಡ ಬಳಿಕ ಎಷ್ಟುಮಂದಿ ಹಣ ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದರು.

ಮಾಸ್ಟರ್‌ ಆನಂದ್‌ ಪುತ್ರಿ ಲಿಟಲ್‌ಸ್ಟಾರ್‌ ವಂಶಿಕಾ ಹೆಸರಲ್ಲಿ ವಂಚನೆ: ಕಿರುತೆಗೆ ಜೀವನಕ್ಕೆ ಆರಂಭದಲ್ಲಿಯೇ ವಿಘ್ನ!

ನಿಶಾ ನರಸಪ್ಪ ಮೇಲೆ 60 ದೂರುಗಳು: ಈವರೆಗೆ ನಿಶಾ ಅವರಿಂದ ಮೋಸ ಹೋಗಿರುವುದಾಗಿ 50 ರಿಂದ 60 ದೂರುಗಳು ದಾಖಲಾಗಿವೆ. ಇವುಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದುವರೆಗೆ ನಿಶಾ ಸುಮಾರು .40 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಹಣವನ್ನು ಐಷರಾಮಿ ಜೀವನಕ್ಕೆ ಆರೋಪಿ ವಿನಿಯೋಗಿಸಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ. ತಮ್ಮ ಮಗಳ ಮತ್ತು ಬಾಲನಟಿ ವಂಶಿಕಾ ಹೆಸರು ಬಳಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದಾಳೆ ಎಂದು ಆರೋಪಿಸಿ ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಠಾಣೆಗೆ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

Latest Videos
Follow Us:
Download App:
  • android
  • ios