ಬೆಂಗಳೂರಿನಲ್ಲಿ ಶಂಕಿತ ಅಲ್‌ಖೈದಾ ಉಗ್ರನನ್ನು ಬಂಧಿಸಿದ ಎನ್‌ಐಎ!

ಬೆಂಗಳೂರಿನ ತಣಿಸಂದ್ರದ ಮಂಜುನಾಥ್ ನಗರದಲ್ಲಿ ತನ್ನ ಹೆಂಡತಿ ಮತ್ತು ಇಬ್ಪರು ಮಕ್ಕಳ ಜೊತೆ ವಾಸವಿದ್ದ ಸಾಫ್ಟ್ ವೇರ್ ಉದ್ಯೋಗಿ ಶಂಕಿತ ಉಗ್ರ ಅರೆಸ್ಟ್.

NIA arrests suspected Al-Qaeda terrorist in Bengaluru gow

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಫೆ.11): ಆತ‌ ಹೇಳಿಕೊಳ್ಳೋದಕ್ಕೆ ಸಾಫ್ಟ್ ವೇರ್ ಉದ್ಯೋಗಿ. ಆದ್ರೆ ಮಡ್ತಾಯಿದ್ದದ್ದು ಮಾತ್ರ ದೇಶ ದ್ರೋಹದ ಕೆಲಸ‌‌. ಈತನ ಚಲನವಲನ ವನ್ನು ಕರೆಕ್ಟ್ ಆಗಿ ವಾಚ್ ಮಾಡ್ತಾಯಿದ್ದ ತನಿಖಾ ಸಂಸ್ಥೆಗಳು ಇದೀಗ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ. ಈತನ ಹೆಸರು ಆರೀಫ್. ಈತ ಓರ್ವ ಶಂಕಿತ ಉಗ್ರ. ಉತ್ತರ ಪ್ರದೇಶ ಮೂಲದ ಅರೀಫ್ ಅಲಿಯಾಸ್ ಮಹಮದ್ ಆರಿಫ್ ಕಳೆದ ಎರಡು‌ವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಮಾನ್ಯತ ಟೆಕ್ ಪಾರ್ಕ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡ್ತಾಯಿದ್ದ. ತಣಿಸಂದ್ರದ ಮಂಜುನಾಥ್ ನಗರದಲ್ಲಿ ತನ್ನ ಹೆಂಡತಿ ಮತ್ತು ಇಬ್ಪರು ಮಕ್ಕಳ ಜೊತೆ ವಾಸವಿದ್ದ. ಆದ್ರೆ ಈತನ ಟಾರ್ಗೆಟ್ ಬೇರೆಯೇ‌ ಇತ್ತು.  ಐಎಸ್ ಡಿ ಹಾಗು ಕೇಂದ್ರ ಸಂಸ್ಥೆಗಳ ಕಾರ್ಯಾಚರಣೆ ನಡೆಸಿ ಇಂದು ಈತನ ಮನೆಗೆ ದಾಳಿ ಮಾಡಿದ್ದಾರೆ. ಈ ಆರೀಫ್ ಟೆಲಿಗ್ರಾಮ್ ನಲ್ಲಿ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದನಂತೆ. ಇಷ್ಟೇ ಅಲ್ಲದೇ ಸಿರಿಯಾ ಮತ್ತು ಇರಾನ್ ಮೂಲಕ ತೆರಳಲು ಈ ಹಿಂದೆ ಯತ್ನಿಸಿದ್ದ ಆದ್ರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ  ಹೋಗಲು ಸಾದ್ಯವಾಗಿರಲಿಲ್ಲಾ. ಈಗ ಮಾರ್ಚ್ ನಲ್ಲಿ ಮತ್ತೆ ಇರಾನ್ ಮೂಲಕ ಸಿರಿಯಾ ಹಾಗು ಅಫ್ಘಾನ್ ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ಕೂಡ ರೆಡಿ ಮಾಡಿಕೊಂಡಿದ್ದ. 

ಈ ಹಿಂದೆ ಐಸಿಸ್  ಬಗ್ಗೆ  ಒಲವನ್ನು ಹೊಂದಿದ್ದ ಆರೀಫ್ ತದನಂತರದಲ್ಲಿ  ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ  ತಾಲಿಬಾನ್ ವಶಕ್ಕೆ ಪಡೆದ ನಂತರ ತನ್ನ ಒಲವನ್ನು ತಾಲಿಬಾನ್ ಗೆ ವಾಲಿಸಿದ್ದ‌. ತಾಲಿಬಾನ್ ಪವರ್ ಫುಲ್ ಆಗಿದ್ದ ಬಳಿಕ ಈತನ ಒಲವು ಆಲ್ ಖೈದಾ ಮತ್ತು ತಾಲಿಬಾನ್ ಕಡೆಗೆ ಹೋಗಿತ್ತು. ಇದಕ್ಕೆ ಪೂರಕವಾಗಿ ಈ ಹಿಂದೆ ಟ್ವಿಟರ್ ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ಕ್ರಿಯೇಟ್‌ ಮಾಡಿ ಅದರಲ್ಲಿ ಪೋಸ್ಟ್ ಮಾಡಿದ್ದ ಅಂತಲು ಸಹ ಹೇಳಲಾಗುತ್ತಿದೆ.

Bengaluru Crime: ಕುಡಿದ ಮತ್ತಲ್ಲಿ ಕಟ್ಟಡದಿಂದ ಜಿಗಿದ ಕಾರ್ಮಿಕ: ಸ್ಥಳದಲ್ಲೇ ಸಾವು

ಅದ್ರೆ  ಟ್ವಿಟರ್  ಈತನ ಫೇಕ್ ಅಕೌಂಟ್ ಗಳನ್ನು  ಬ್ಲಾಕ್ ಮಾಡಿತ್ತು, ಆಗಲೇ ಎಚ್ಚಿತ್ತುಕೊಂಡ ಈತ ಟ್ವಿಟರ್ ಯೂಸ್ ಮಾಡೋದನ್ನೆ ಬಿಟ್ಟಿದ್ದನಂತೆ. ಇನ್ನು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದ ಈ ಆರೀಫ್ ಯಾವುದೇ ತನ್ನ ದಾಖಲಾತಿ ಕೊಡದೇ ಬರಿ ಅಗ್ರಿಮೆಂಟ್ ಮಾಡಿಕೊಂಡು ಮನೆಗೆ ಸೇರಿಕೊಂಡಿದ್ದ. ಆದ್ರೆ ಮುಂದಿನ ತಿಂಗಳು ಅಫ್ಘಾನ್ ಗೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದ ಈತ ಮನೆ ಕಾಲಿ ಮಾಡ್ತೀವಿ ಅಂತ  ಓನರ್ ಜೊತೆ ಫೈನಲ್ ಸೆಟಲ್ ಮೆಂಟ್ ಮಾಡಿಕೊಂಡಿದ್ದ. ಕಳೆದ 2.5 ವರ್ಷಗಳಿಂದ‌ ವಾಸವಿದ್ದ‌ ಆರೀಫ್, ಈ ಹಿಂದೆ ಮನೆಗೆ ಬರಬೇಕಾದ್ರೆ  50 ಸಾವಿರ ಅಡ್ವಾನ್ಸ್ ಕೊಟ್ಟಿದ್ದ ಹೀಗಾಗಿ ಓನರ್ ನಿನ್ನೆ‌ ಪೇಯಿಂಟ್ ಖರ್ಚು ಎಲ್ಲಾ ಕಳೆದು 35 ಸಾವಿರ ಕೊಟ್ಟಿದ್ದರು‌‌, ಹೀಗಾಗಿ ನಾಳೆ 12 ನೇ ತಾರೀಖಿನಂದು ಮನೆ ಖಾಲಿ ಮಾಡ್ತೀವಿ ಅಂತ ಹೇಳಿದ್ದ.

SEXUAL ASSAULT: 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಫಿರೋಜ್‌ಖಾನ್ ಅರೆಸ್ಟ್

ಸದ್ಯ ಆರೀಫ್ ಮನೆಯಲ್ಲಿ ಸಿಕ್ಕಂತಹ ಮೊಬೈಲ್, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಕೆಲ ದಾಖಲಾತಿಗಳು,  ಸೇರಿದಂತೆ ಅನೇಕ ಎವಿಡೆನ್ಸ್ ಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಆರೀಫ್ ನನ್ನು ಸಹ‌ ವಶಕ್ಕೆ ಪಡೆದಿದ್ದು ಇದೀಗ ದೊಮ್ಮಲೂರಿನಲ್ಲಿರುವ ಎನ್.ಐ.ಎ ಕಚೇರಿಗೆ ಕರೆದೋಯ್ದು ತನಿಖೆಯನ್ನು ಸಹ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಇದೇ ದೇಶದ ಅನ್ನ ತಿಂದು ಇದೇ ದೇಶಕ್ಕೆ ದ್ರೋಹ ಬಗೆಯೋದು ಅದೆಷ್ಟು ಸರಿ‌ ಅನ್ನೋದೆ ಪ್ರಶ್ನೆ.

Latest Videos
Follow Us:
Download App:
  • android
  • ios