Asianet Suvarna News Asianet Suvarna News

'ಪುಲ್ವಾಮಾ ದಾಳಿ ಮಾಡಿದ್ದು ನಾವೇ' ಕೊನೆಗೂ ಸತ್ಯ ಒಪ್ಪಿಕೊಂಡ ಕುತಂತ್ರಿ!

ಕೊನೆಗೂ ಸತ್ಯ ಒಪ್ಪಿಕೊಂಡ ಕುತಂತ್ರಿ ಪಾಕಿಸ್ತಾನ/ ಪುಲ್ವಾಮ ದಾಳಿ ಮಾಡಿಸಿದ್ದು ನಾವೇ/  ಇದು ಇಮ್ರಾನ್ ಖಾನ್ ನಾಯಕತ್ವಕ್ಕೆ ಸಂದ ಜಯ/ ಈ ಜಯಕ್ಕೆ ಎಲ್ಲರೂ ಪಾಲುದಾರರು

Massive Pakistan admits role in Pulwama bombing mah
Author
Bengaluru, First Published Oct 29, 2020, 6:26 PM IST

ನವದೆಹಲಿ(ಅ. 29)  ಕುತಂತ್ರಿ ಪಾಕಿಸ್ತಾನ ಕೊನೆಗೂ ಸತ್ಯ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯಲ್ಲಿ ತನ್ನದೇ ಪಾತ್ರ ಇತ್ತು ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ.

2019 ರಲ್ಲಿ ನಡೆದ ಆತ್ಹಾಹುತಿ ಬಾಂಬ್ ದಾಳಿಯಲ್ಲಿ ಭಾರತದ ನಲವತ್ತು ಯೋಧರು ಪ್ರಾಣ ತ್ಯಾಗ ಮಾಡಿದ್ದರು.  ನಾವು  ಭಾರತದೊಳಗೆ ಕಾಲಿಟ್ಟು ದಾಳಿ ಮಾಡಿದ್ದೇವೆ. ಇದರ ಶ್ರೇಯ ಪ್ರಧಾನಿ ಇಮ್ರಾನ್ ಖಾನ್ ಗೆ ಸಲ್ಲುತ್ತದೆ ಎಂದು ಮಾಡಿದ್ದ ಹೀನ ಕೆಲಸವನ್ನು ಪಾಕ್ ಸಚಿವ ಫಾವದ್ ಚೌಧರಿ ಕೊಂಡಾಡಿಕೊಂಡಿದ್ದಾರೆ!

ಭಾರತದೊಳಗೆ ಇತ್ತು ಉಗ್ರ ತಯಾರಿಕಾ ಶಾಲೆ

ಪ್ರತಿಯೊಬ್ಬರಿಯೂ ಇದರ ಯಶಸ್ಸಿನಲ್ಲಿ ಪಾತ್ರವಿದೆ. ಪುಲ್ವಾಮಾ ನಂತರವೂ ನಾವು ಭಾರತ ಪ್ರವೇಶ ಮಾಡಿ ದಾಳಿ ಮಾಡಿದ್ದೇವೆ ಎಂದಿದ್ದಾರೆ. ಅಭಿನಂದನ್ ಬಿಡುಗಡೆ ಮಾಡಿದ್ದರ ಸಂಬಂಧದ ಚರ್ಚೆ ವೇಳೆ ಮಾತನಾಡಿದ  ಸಚಿವ ಪುಲ್ವಾಮಾ  ದಾಳಿ ತಾವೇ ಮಾಡಿಸಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ. 

ಪಾಕಿಸ್ತಾನ ಮುಸ್ಲಿಂ ಲೀಗ್ ನಾಯಕ ಸರ್ದಾರ್ ಅಯಾಜ್ ಸಾದಿಕ್ , ಪುಲ್ವಾಮಾ ದಾಳಿ ನಂತರ ಸರ್ಕಾರ ನಡುಗಿತ್ತು. ಸೇನಾ ಅಧಿಕಾರಿಗಳು ಏನು ಮಾಡದ ಸ್ಥಿತಿಯಲ್ಲಿ ಇದ್ದರು, ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡದಿದ್ದರೆ ಭಾರತ ದಾಳಿ ಮಾಡುತ್ತಿದ್ದು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಸತ್ಯ ಹೊರಹಾಕಿದ್ದಾರೆ.

"

 

ಇಂಗ್ಲಿಷ್‌ನಲ್ಲಿಯೂ ಓದಿ

Follow Us:
Download App:
  • android
  • ios