Suspicious Death: ಹಾಸನದಲ್ಲಿ ಮದುವೆಯಾದ ಎರಡೇ ವಾರಕ್ಕೆ ಮಧು ಮಗಳ ಅನುಮಾನಾಸ್ಪದ ಸಾವು
* ಹಾಸನದ ಸಲೀಂ ನಗರದಲ್ಲಿ ನಡೆದ ಘಟನೆ
* ಡಿ.2 ರಂದು ನಡೆದಿದ್ದ ಮದುವೆ
* ವರದಕ್ಷಿಣೆಗಾಗಿ ಮಗಳ ಕೊಲೆ
ಹಾಸನ(ಡಿ.22): ಮದುವೆಯಾದ(Marriage) ಎರಡೇ ವಾರಕ್ಕೆ ಮಧು ಮಗಳು ಸಾವನ್ನಪ್ಪಿದ ಘಟನೆ ಹಾಸನದ ಸಲೀಂ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಫಿಜಾ ಖಾನಂ(22) ಮೃತಪಟ್ಟ(Death) ದುರ್ದೈವಿ ಮಹಿಳೆಯಾಗಿದ್ದಾರೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ(Hassan) ಶಾಗಿಲ್ ಅಹಮದ್ ನಡುವೆ ಡಿ.2 ರಂದು ಮದುವೆ ನಡೆದಿತ್ತು. ಮದುವೆಯಾಗಿ ಕೇವಲ 19 ನೇ ದಿನಕ್ಕೆ ನವ ವಿವಾಹಿತೆ ಫಿಜಾ ಖಾನಂ ಅನುಮಾನಾಸ್ಪವಾಗಿ(Suspicious Death) ಮೃತಪಟ್ಟಿದ್ದಾಳೆ. ಹೀಗಾಗಿ ವರದಕ್ಷಿಣೆಗಾಗಿ(Dowry) ತಮ್ಮ ಮಗಳನ್ನು ಗಂಡನ ಮನೆಯವರು ಕೊಲೆ(Murder) ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
Drug Peddling : ಗೋಧಿಹಿಟ್ಟಲ್ಲಿ ಹೆರಾಯಿನ್... ಮಯನ್ಮಾರ್ ಕಿರಾತಕರು ಬೆಂಗಳೂರಲ್ಲಿ ಸೆರೆ
ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ವರದಕ್ಷಿಣೆ ಕಿರುಕುಳ, ಕೊಲೆ ಆರೋಪದಡಿ ಪ್ರಕರಣ(Case) ದಾಖಲಾಗಿದೆ. ಅಳಿಯ ಶಾಗಿಲ್ ಅಹಮದ್ ಸೇರಿ ಸಹೋದರರು, ಶಾಗಿಲ್ ತಾಯಿ ವಿರುದ್ಧ ಕೇಸ್ ದಾಖಲಿಸಲಾಗಿದೆ
ನಕಲಿ ಚಿನ್ನದ ಆಭರಣ ಮಾರಾಟ ಮಾಡಿ ವಂಚನೆ: ಇಬ್ಬರು ವಂಚಕಿಯರ ಬಂಧನ
ಬಾಗಲಕೋಟೆ: ನಕಲಿ ಚಿನ್ನದ ಆಭರಣ ಮಾರಾಟ ಮಾಡಿ ವಂಚನೆ ಮಾಡಿದ್ದ ಇಬ್ಬರು ವಂಚಕಿಯರನ್ನ ಪೊಲೀಸರು ಬಂಧಿಸಿದ(Arrest) ಘಟನೆ ಬಾಗಲಕೋಟೆ(Bagalkot) ಜಿಲ್ಲೆಯ ಇಳಕಲ್‌ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ರೆಹಾನಾಬೇಗಂ ಹಾಗೂ ಮೆಹರಾಜನ್ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ನಕಲಿ ಚಿನ್ನದ ಆಭರಣ ಕೊಟ್ಟು 1,86,000 ಮೌಲ್ಯದ ಆಭರಣ ಹಾಗೂ 13 ಸಾವಿರ ಹಣ ಪಡೆದಿದ್ದ ಮಹಿಳೆಯರು. ನಕಲಿ ಬಂಗಾರದ ಆಭರಣಗಳ ಮೂಲಕ ಮಹಿಳೆಯರು ವಂಚಿಸುತ್ತಿದ್ದರು(Fraud) ಪೊಲೀಸರು(Police) ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳು ಇಳಕಲ್ ಪಟ್ಟಣದ ಚಿನ್ನದ ವ್ಯಾಪಾರಿ ಹರೀಶ ಎಂಬುವರುಗೆ ವಂಚಿಸಿದ್ದರು. ನಕಲಿ ಚಿನ್ನ ಎಂಬುದು ಅರಿವಿಗೆ ಬಾರದೆ ಅಸಲಿ ಎಂದು ನಂಬಿ ಹರೀಶ ಅವರು ತೆಗೆದುಕೊಂಡಿದ್ದರು. ಬಳಿಕ ನಕಲಿ ಚಿನ್ನ ಎಂದು ತಿಳಿದ ಬಳಿಕ ಚಿನ್ನದ ವ್ಯಾಪಾರಿ ಹರೀಶ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆಗಳಿದಿದ್ದ ಪೊಲೀಸರು ಚಾಲಾಕಿ ವಂಚಕಿಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ವಿವಿಧ ಅಪರಾಧ(Crime) ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
Highway Robbery Case: ಅಂಕೋಲಾದಲ್ಲಿ ಮೂವರು ಖದೀಮರ ಬಂಧನ
ಮುಂಬೈ ರೈಲಿನಲ್ಲಿ ಒಡವೆ ಕದ್ದಿದ್ದ ಇಬ್ಬರು ಕಲಬುರಗಿ ಮಹಿಳೆಯರ ಬಂಧನ
ಥಾಣೆ (ಮಹಾರಾಷ್ಟ್ರ): ರೈಲಿನಲ್ಲಿ(Train) ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಕರ್ನಾಟಕದ(Karnataka)ಕಲಬುರಗಿಯ(Kalaburagi) ಇಬ್ಬರು ಮಹಿಳೆಯರನ್ನು ಮಂಗಳವಾರ ಥಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರೇಖಾ ಕಾಂಬ್ಳೆ ಹಾಗೂ ರೋಜಾ ಕಾಂಬ್ಳೆ ಎಂದು ಗುರುತಿಸಲಾಗಿದೆ. ಇವರು ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು, ಸದ್ಯ ಮುಂಬೈನ(Mumbai) ಸಾತ್ ರಾಸ್ತ ಏರಿಯಾದಲ್ಲಿ ನೆಲೆಸಿದ್ದಾರೆ. ಡಿ.11ರಂದು ಕಲ್ಯಾಣ್ ರೈಲು ನಿಲ್ದಾಣದಲ್ಲಿ ತಪೋವನ್ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ 42 ವರ್ಷದ ಮಹಿಳೆಯಿಂದ ಸುಮಾರು 3.02 ಲಕ್ಷ ಮೌಲ್ಯದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ನಂತರ ಡಿ. 15ರಂದು ಇವರನ್ನು ಕಲ್ಯಾಣ್ ರೈಲು ನಿಲ್ದಾಣದಲ್ಲಿ ಥಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಲಕ್ಷದ 25 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಮನೆ ಕಳವು ಆರೋಪಿಗಳ ಬಂಧನ
ಮೂಲ್ಕಿ: ಮೂಲ್ಕಿ(Mulki) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆಗೆ ನುಗ್ಗಿ ಸುಲಿಗೆ ಮತ್ತು ಮನೆ ಕಳವು ಮಾಡುತ್ತಿದ್ದ ಆರೋಪಿಗಳಾದ ಮುಂಡ್ಕೂರು ಬಾಕ್ಯಾರಕೋಡಿ ನಿವಾಸಿ ಶೈಲೇಶ್ ಶೆಟ್ಟಿ(38) ಮತ್ತು ಕೋಟೆಕಾರು ಬೀರಿಯ ಜನಾರ್ದನ ಆಚಾರ್ಯ (43)ರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.