Bengaluru: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ನೇಣಿಗೆ ಶರಣಾದ ಗೃಹಿಣಿ
ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಬೆಂಗಳೂರು (ಜು.03): ರಾಜ್ಯ ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಬೆಂಗಳೂರಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಗೃಹಿಣಿಯನ್ನು ಪವಿತ್ರ (30) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ಭಾನುವಾರ ಸಂಜೆಯೇ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಈ ಘಟನೆ ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗೃಹಿಣಿ ಆತ್ಮಹತ್ಯೆ ಕುರಿತಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Bengaluru: ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ನೇಣು ಬಿಗಿದುಕೊಂಡ ಯುವಕ
ಖಾಸಗಿ ಕಂಪನಿಯಲ್ಲಿ ಗಂಡನ ಲವ್ವಿ- ಡವ್ವಿ: ಪತಿ ಹಾಗೂ ಆತನ ಗರ್ಲ್'ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಕಂಡುಬರುತ್ತಿದೆ. ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಆತ್ಮಹತ್ಯೆಗೆ ಶರಣಾಗಿರೋ ಮಹಿಳೆ ಆಗಿದ್ದಾಳೆ. ಡೆತ್ ನೋಟ್ ಬರೆದಿಟ್ಟು ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಜುಲೈ 02 ರ ಬೆಳಗಿನ ಜಾವ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಗಳ ವಾಟ್ಸಪ್ ಸ್ಟೇಟಸ್‌ನಿಂದ ಘಟನೆ ಬೆಳಕಿಗೆ: ಮೊದಲ ಪತಿಗೆ ವಿಚ್ಚೇದನ ನೀಡಿ ಚೇತನ್‌ಗೌಡ ಎನ್ನುವರನ್ನ ಎರಡನೇ ಮದುವೆಯಾಗಿದ್ದಳು. ಚೇತನ್ ಗೌಡ ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕನಾಗಿದ್ದಾನೆ. ಮೃತ ಪವಿತ್ರ ಚೇತನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ಲು. ಇತ್ತೀಚೆಗೆ ಮತ್ತೊರ್ವ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗ್ತಿತ್ತು. ಈ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಬಳಿ ತಿಳಿಸಿದ್ದಳು. ಕಡೆಗೆ ಮನನೊಂದು ಡೆತ್ ನೋಟ್ ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣು ಆಗಿದ್ದಾಳೆ.
ಮೃತ ಯುವತಿ ಪತಿ ವಿರುದ್ಧ ದೂರು: ಮಗಳ ವಾಟ್ಸಾಫ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ ಮಗಳ ಮನೆ ಬಳಿ ಬಂದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ. ಮೃತಳ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ 306 ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಡೆತ್ ನೋಟ್ ಹಾಗೂ ಮೃತಳ ಎರಡು ಪೋನ್ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
BENGALURU: ಬಕ್ರೀದ್ ಹಬ್ಬಕ್ಕೆ ಕಾಲೇಜು ಹುಡುಗನ ಬಲಿಕೊಟ್ಟ ದುಷ್ಕರ್ಮಿಗಳು
ಅನೈತಿಕ ಸಂಬಂಧಕ್ಕಾಗಿ ಗೌಡ್ರು ಹೋಟೆಲ್ ಮಾಲೀಕ ಗಂಡನ ಕೊಲೆ: ಬೆಂಗಳೂರು (ಜು.3): ಕಳೆದ ಜೂನ್ 28 ರ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈಗ ಅಪರಿಚಿತ ವ್ಯಕ್ತಿ ಶವದ ಹಿಂದೆ ರೋಚಕ ಅನೈತಿಕ ಸಂಬಂಧದ ಕಹಾನಿ ಬಹಿರಂಗವಾಗಿದೆ. ಮೃತ ವ್ಯಕ್ತಿಯ ಪತ್ನಿ ಪ್ರಿಯಕರನ ನಡುವಿನ ಲವ್ವಿ ಡವ್ವಿ ವಿಚಾರ ಬೆಳಕಿಗೆ ಬಂದಿದೆ. ಶವ ಯಾರದ್ದು ಎಂದು ತನಿಖೆ ನಡೆಸಿದ ಪೊಲೀಸರಿಗೆ ಅರುಣ್ (43) ಎಂಬಾತನದ್ದು ಎಂದು ತಿಳಿದುಬಂದಿದೆ. ಜೂನ್ 28 ರ ರಾತ್ರಿ 11 ಗಂಟೆಗೆ ಈತನ ಬರ್ಬರ ಹತ್ಯೆ ನಡೆದಿತ್ತು. ಹತ್ಯೆ ನಡೆಸಿ ತಲಘಟ್ಟಪುರದ ಅಜ್ಞಾತ ಸ್ಥಳದಲ್ಲಿ ಹಂತಕರು ಮೃತದೇಹವನ್ನು ಎಸೆದಿದ್ದರು.