Asianet Suvarna News Asianet Suvarna News

ಪ್ರೀತಿಸಿ ಮದುವೆ ಆಗಿದ್ದ ನವ ವಧು-ವರ ಪರಸ್ಪರ ಮಚ್ಚಿನಿಂದ ಕೊಚ್ಚಿ ಸಾವು! ವರನ ಸಹೋದರಿ ಹೇಳಿದ್ದಿಷ್ಟು

ಬುಧವಾರ ಬೆಳಗ್ಗೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನೂತನ ವಧುವರರು, ಸಂಜೆ ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿಕೊಂಡ ಪರಿಣಾಮ ವಧು ಆಸ್ಪತ್ರೆಯಲ್ಲಿ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ವರನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಿರುವ ಘಟನೆ ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

newly married couple who were in love were killed by hitting each other at kolar district rav
Author
First Published Aug 8, 2024, 10:27 AM IST | Last Updated Aug 8, 2024, 11:05 AM IST

ಕೋಲಾರ (ಆ.8): ಬುಧವಾರ ಬೆಳಗ್ಗೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನೂತನ ವಧುವರರು, ಸಂಜೆ ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿಕೊಂಡ ಪರಿಣಾಮ ವಧು ಆಸ್ಪತ್ರೆಯಲ್ಲಿ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ವರನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಿರುವ ಘಟನೆ ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಸಂಬಂಧ ವರನ ಸಹೋದರಿ ಪ್ರತಿಕ್ರಿಯಿಸಿದ್ದು, ಮೃತ ನವೀನ್ ಸಹೋದರಿ ವಿಶಾಲಾಕ್ಷಿ ಹೇಳುವ ಪ್ರಕಾರ, ನಿನ್ನೆ ಬೆಳಿಗ್ಗೆ 6 ಗಂಟೆಗೆ ಮದುವೆ ಆಗಿದೆ. ನಾನು ಆ ಹುಡುಗಿ ಇಲ್ಲ ಅಂದ್ರೆ ಬದುಕಲ್ಲ ಅಂತ ಹೇಳಿದ ನವೀನ್. ಅದಕ್ಕೆ ನಾವು ಅವಳ ಜೊತೆ ಮದುವೆ ಮಾಡಿದ್ದೆವು. ಕಾಲುಂಗುರ ಹಾಗೂ ತಾಳಿ ಬೊಟ್ಟು ನಾವೇ ಕೊಟ್ಟಿದ್ದೇವೆ. ಇಬ್ಬರು ಸಂಜೆ 5 ಗಂಟೆಗೆ ಟೀ ಕುಡಿದು ಪಕ್ಕದ ಮನೆಗೆ ಹೋಗಿದ್ದಾರೆ. ಆ ಮನೆಯ ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ. ದಿಢೀರನೆ ಹುಡುಗಿ ಕೂಗಿದ ಶಬ್ದ ಕೇಳಿಸಿತು. ಹೋಗಿ ನೋಡಿದಾಗ ಇಬ್ಬರಿಗೂ ಗಾಯ ಆಗಿ ಕೆಳಗೆ ಬಿದ್ದಿದ್ರು. ಸಾವಿಗೆ ಏನು ಕಾರಣ ಅಂತ ನಮಗೂ ಗೊತ್ತಾಗಲಿಲ್ಲ ಎಂದಿದ್ದಾರೆ.

. ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದಾರೆ. ಅವರ ಅಪ್ಪ ಅಮ್ಮ ಸಹ ಘಟನೆ ವೇಳೆ ಇಲ್ಲೇ ಇದ್ರು. ಹುಡುಗನಿಗೆ 28 ವರ್ಷ ಆಗಿತ್ತು,ಹುಡುಗಿಗೆ 19 ವರ್ಷ ಆಗಿತ್ತು.  ನವೀನ್ ರಾಜ್ ಪೇಟೆ ರಸ್ತೆಯಲ್ಲಿ ಬಟ್ಟೆ ಅಂಗಡಿ ಹಾಕಿಕೊಂಡು ಕೆಲಸ ಮಾಡ್ತುತ್ತಿದ್ದ. ಹುಡುಗಿ ದ್ವಿತೀಯ ಪಿಯುಸಿ ಓಡುತ್ತಿದ್ದಳು. ಪರಸ್ಪರ ಪ್ರೀತಿಸಿ ಮದುವೆ ಬಳಿಕ ದುರಂತ ಅಂತ್ಯ ಕಂಡಿದ್ದು ವಿಚಿತ್ರ.

ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: 12 ದಿನ ಈರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ!

ಘಟನೆ ಹಿನ್ನೆಲೆ:

ಬುಧವಾರ ಬೆಳಗ್ಗೆ ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ತಾಲೂಕಿನ ಬೈನೇಹಳ್ಳಿ ಶ್ರೀನಿವಾಸಲು ಮತ್ತು ಲಕ್ಷ್ಮೀ ಎಂಬುವವರ ಪುತ್ರಿ ಲಿಖಿತ ಶ್ರೀ (೧೮) ಮೃತ ದುರ್ದೈವಿಯಾಗಿದ್ದಾಳೆ. ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ಮುನಿಯಪ್ಪರ ಪುತ್ರ ನವೀನ್ ಕುಮಾರ್(೩೦) ತೀವ್ರವಾಗಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.

ಲಿಖಿತ ಶ್ರೀ ಮತ್ತು ನವೀನ್ ಕುಮಾರ್‌ರಿಗೆ ಬುಧವಾರ ಬೆಳಗ್ಗೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯ ವರ ನವೀನ್‌ಕುಮಾರ್‌ರ ಅಕ್ಕನ ಮನೆಯಲ್ಲಿ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ತಂದೆ, ತಾಯಿ ಮತ್ತು ವಧುವಿನ ತಂದೆ, ತಾಯಿ ಹಾಗೂ ಕೆಲವು ಸಂಬಂಧಿಕರು ಭಾಗವಹಿಸಿದ್ದರು ಎನ್ನಲಾಗಿದೆ.

ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅನಾವರಣಗೊಳ್ಳಲಿದೆ ಅಂಬೇಡ್ಕರ್ ಜೀವನಗಾಥೆ!

ಕುಟುಂಬ ಸದಸ್ಯರೆಲ್ಲರ ಸಮ್ಮುಖದಲ್ಲಿ ಮದುವೆ ನಡೆದ ನಂತರ ಅದೇ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ಹುಡುಗ ಮತ್ತು ಹುಡುಗಿ ಇಬ್ಬರು ಒಟ್ಟಿಗೆ ಹೋಗಿ ಕೋಣೆಯ ಮುಂಭಾಗಿಲನ್ನು ಹಾಕಿಕೊಂಡು ಪರಸ್ಪರ ಮಚ್ಚಿನಲ್ಲಿ ಹಲ್ಲೆ ಮಾಡಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಚಿಕಿತ್ಸೆಗೆಂದು ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತಾದರೂ, ಲಿಖಿತ ಶ್ರೀ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್ ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಕೆಜಿಎಫ್ ಎಸ್‌ಪಿ ಶಾಂತರಾಜು, ಡಿವೈಎಸ್‌ಪಿ ಪಾಂಡುರಂಗ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Latest Videos
Follow Us:
Download App:
  • android
  • ios