Asianet Suvarna News Asianet Suvarna News

ಅಕ್ರಮ ಸಂಬಂಧಕ್ಕೆ ಬಲಿಯಾದ ಶಿಕ್ಷಕಿ: ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ

6 ತಿಂಗಳ ಹಿಂದೆ ನಡೆದ ನಂಜನಗೂಡು ಶಾಲಾ ಶಿಕ್ಷಕಿ ಕೊಲೆ ಪ್ರಕರಣ ಭೇದಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದು, ನಗರಸಭೆ ಕೌನ್ಸಿಲರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Nanjanagudu hindi teacher murder case: Municipal Councilor and four arrested akb
Author
Nanjangud, First Published Aug 4, 2022, 10:43 AM IST

ಮೈಸೂರು: ಇಂದು ನಂಜನಗೂಡಿನ ಹಿಂದಿ ಶಿಕ್ಷಕಿ ಕೊಲೆ ರಹಸ್ಯ. 6 ತಿಂಗಳ‌ ಹಿಂದೆ ನಡೆದಿದ್ದ ಅನುಮಾನಾಸ್ಪದ ಸಾವು ಪ್ರಕರಣ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.. ಶಾಲಾ ಶಿಕ್ಷಕಿಯ ಸಾವಿನ ಸುತ್ತ ಹಲವು ಅನುಮಾನಗಳು ಬೆಳೆದು ನಿಂತಿತ್ತು. ಆದರೆ ಈಗ 6 ತಿಂಗಳ ನಂತರ ಕೊಲೆ ಆರೋಪಿಗಳು ಅಂದರ್ ಆಗಿದ್ದಾರೆ. ಕೊಲೆಗೆ ಅಕ್ರಮ ಸಂಬಂಧ ಕಾರಣ ಎಂಬುದು ತಿಳಿದು ಬಂದಿದೆ. ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಯೊಂದಿಗೆ ತನ್ನ ಪತಿ ಹೊಂದಿದ್ದ ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ನಂಜನಗೂಡು ಪಟ್ಟಣದ 5 ನೇ ವಾರ್ಡ್‌ನಿಂದ ನಗರಸಭೆಗೆ ಆಯ್ಕೆಯಾಗಿರುವ  ಗಾಯಿತ್ರಿ ಮುರುಗೇಶ್ ಹಾಗೂ ಆಕೆಯ ಒಡನಾಡಿಗಳಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತರು. ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಬಂಧಿಸಿದ ಪೊಲೀಸರು ನಿಗೂಢ ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಮಾರ್ಚ್ 9 ರಂದು ನಂಜನಗೂಡು ನಂಜನಗೂಡು ಮಹದೇವ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿಂದಿ ಶಿಕ್ಷಕಿ ಸುಲೋಚನಾ ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ರು. ಘಟನೆ ನಡೆದು 6 ತಿಂಗಳಾದ್ರೂ ಆರೋಪಿಗಳನ್ನ ಬಂಧಿಸದ ಪೊಲೀಸರ ಮೇಲೆ ತೀವ್ರ ಒತ್ತಡ ಬಂದಿತ್ತು. ಇತ್ತೀಚೆಗೆ ನಂಜನಗೂಡಿಗೆ ಭೇಟಿ ನೀಡಿದ್ದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಜೊತೆ ಈ ಕೊಲೆ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದರು. ಇದರ ಬೆನ್ನಲ್ಲೇ ಎಸ್ಪಿ ಆರ್.ಚೇತನ್, ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋವಿಂದರಾಜ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಹಾಗೂ ಸಿಬ್ಬಂದಿ ತನಿಖೆಯನ್ನ ತೀವ್ರಗೊಳಿಸಿದ್ದರು.

ನಡತೆ ಸರಿಪಡಿಸಿಕೊಳ್ಳಲು ಬೈದು ಬುದ್ಧಿ ಹೇಳಿದ್ದಕ್ಕೆ ತಮ್ಮನನ್ನೇ ಕೊಲೆ ಮಾಡಿಸಿದ ಅಕ್ಕ!

ತನಿಖೆ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ಕೌನ್ಸಿಲರ್ ಗಾಯಿತ್ರಿ ಮುರುಗೇಶ್ ಹಾಗೂ ಸಂಬಂಧಿಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆಗೆ ಅಕ್ರಮ ಸಂಬಂಧ ಕಾರಣವಾಗಿದ್ದು, ಬಂಧಿತ ಆರೋಪಿ ಗಾಯಿತ್ರಿಯ ಪತಿ ಮುರುಗೇಶ್ ಹಾಗೂ ಶಿಕ್ಷಕಿ ಸುಲೋಚನಾ ನಡುವೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಮುರುಗೇಶ್ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದ. ಕಾರ್ಯಕ್ರಮಗಳ ನಡುವೆ ಸುಲೋಚನಾ ಪರಿಚಯ ಮಾಡಿಕೊಂಡಿದ್ದ ಮುರುಗೇಶ್ ಆಕೆಯ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರದಲ್ಲಿ ಮುರುಗೇಶ್ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿತ್ತು. ತನ್ನ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿರುವ ಸುಲೋಚನಾಳನ್ನ ಮುಗಿಸಲು ಸ್ಕೆಚ್ ಹಾಕಿದ ಗಾಯಿತ್ರಿ ತನ್ನ ಸಂಭಂಧಿಕರಾದ ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

ಫಲಿಸಲಿಲ್ಲ ಪ್ರಾರ್ಥನೆ; ಕೋವಿಡ್‌ನಿಂದ ಬಳಲುತ್ತಿದ್ದ ಶಿಕ್ಷಕಿ ಸಾವು

ಗಂಡನ ಮೇಲೆ ಇತ್ತು ಅನುಮಾನ, ಕೊಂದಿದ್ದು ಹೆಂಡತಿ.

ಸುಲೋಚನ ಕೊಲೆ‌ ಆದಾಗ ಎಲ್ಲರೂ ಅಕ್ರಮ ಸಂಬಂಧಕ್ಕೆ‌ ಹೆದರಿ ಮುರುಗೇಶ್ ಕೊಲೆ ಮಾಡಿದ್ದಾನೆ ಅಂತಲೇ ತಿಳಿದಿದ್ದರು. ನಂಜನಗೂಡಿನ ಮಹದೇಶ್ವರ ಬಡಾವಣೆಯಲ್ಲಿದ್ದ ಸುಲೋಚನ ಮಲಗಿದ್ದಲಿಯೇ ಕೊನೆ ಉಸಿರೆಳೆದಿದ್ದಳು. ಸಿಕ್ಕಿ ಬಿದ್ದಿರುವ ಆರೋಪಿಗಳ ಹೇಳಿಕೆ ಪ್ರಕಾರ ಅಂದು ಸುಲೋಚನ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಪ್ಲಾನ್ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಒಟ್ಟಾರೆ ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Follow Us:
Download App:
  • android
  • ios