Asianet Suvarna News Asianet Suvarna News

ಉತ್ತರಕನ್ನಡದಲ್ಲಿ ಜೈಲಿನಿಂದ ಪರಾರಿಯಾದ ಕೈದಿ ಬಂಧನ, ಮೈಸೂರಿನಲ್ಲಿ ಪೆರೋಲ್‌ ಮೇಲೆ ತೆರಳಿದ ಕೈದಿ ಭೂಗತ!

ಜೈಲರ್ ನಿರ್ಲಕ್ಷ್ಯದಿಂದ ಪರಾರಿಯಾಗಿದ್ದ ಕೈದಿ ಮತ್ತೆ ಬಂಧನಕ್ಕೊಳಗಾದ ಘಟನೆ ಉತ್ತರ ಕನ್ನಡಜಿಲ್ಲೆಯ ಶಿರಸಿಯ ತಾಲೂಕು ಕಾರಾಗೃಹದಲ್ಲಿ ನಡೆದಿದೆ.  ಇನ್ನೊಂದೆಡೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಮೇಲೆ ತೆರಳಿ ತಲೆ ಮರೆಸಿಕೊಂಡಿರುವ ಕೈದಿಯ ಸುಳಿವು ನೀಡಿದವರಿಗೆ  50 ಸಾವಿರ ಬಹುಮಾನ ನೀಡುವುದಾಗಿ ಮೈಸೂರು ನಗರ ಪೊಲೀಸರು ಘೋಷಿಸಿದ್ದಾರೆ.

Mysuru Police Commissioner announces reward A prisoner who was out of jail on parole is missing gow
Author
First Published Feb 5, 2023, 7:22 PM IST

ಉತ್ತರ ಕನ್ನಡ (ಫೆ.5): ಜೈಲರ್ ನಿರ್ಲಕ್ಷ್ಯದಿಂದ ಪರಾರಿಯಾಗಿದ್ದ ಕೈದಿ ಮತ್ತೆ ಬಂಧನಕ್ಕೊಳಗಾದ ಘಟನೆ ಉತ್ತರ ಕನ್ನಡಜಿಲ್ಲೆಯ ಶಿರಸಿಯ ತಾಲೂಕು ಕಾರಾಗೃಹದಲ್ಲಿ ನಡೆದಿದೆ. ದರೋಡೆ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಪಾಲಾಗಿದ್ದ ಯಲ್ಲಾಪುರ ಮೂಲದ ಪ್ರಕಾಶ್ ಸಿದ್ದಿಯನ್ನು ಜೈಲರ್ ಹೊರಕ್ಕೆ ಬಿಟ್ಟಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡ ಕೈದಿ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿದ್ದನು. ಶಿರಸಿ ಸಬ್ ಜೈಲ್ ನಿಂದ ಪರಾರಿಯಾಗಿದ್ದ ಕೈದಿಯನ್ನು ಕೊನೆಗೂ ಶಿರಸಿ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಬಳಿ ಕೈದಿಯನ್ನು  ವಶಕ್ಕೆ ಪಡೆದುಕೊಂಡಿದ್ದು, ಶಿರಸಿ ಸಬ್ ಜೈಲ್ ಗೆ ರವಾನೆ ಮಾಡಲಾಗಿದೆ.

ಸೈಕೋ ಟೆಕ್ಕಿ ದಿಲ್ಲಿ ಪ್ರಸಾದ್‌ನ ಮೊಬೈಲ್ ನಲ್ಲಿ 208 ಖಾಸಗಿ ವೀಡಿಯೊಗಳು ಪತ್ತೆ!

ಪೆರೋಲ್‌ ಮೇಲೆ ತೆರಳಿ ತಲೆ ಮರೆಸಿಕೊಂಡಿರುವ ಕೈದಿಯ ಪತ್ತೆಗೆ ಪೊಲೀಸರಿಗೆ ಮನವಿ
ಮೈಸೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಮೇಲೆ ತೆರಳಿ ತಲೆ ಮರೆಸಿಕೊಂಡಿರುವ ಕೈದಿಯ ಪತ್ತೆಗೆ ಮೈಸೂರು ನಗರ ಪೊಲೀಸರು ಮನವಿ ಮಾಡಿದ್ದು, ಸುಳಿವು ನೀಡಿದವರಿಗೆ . 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದ ಸೋಮ ಅಲಿಯಾಸ್‌ ಕೋತಿ ಸೋಮ ಎಂಬಾತನೇ ತಲೆ ಮರೆಸಿಕೊಂಡಿರುವ ಕೈದಿ.

ಚಿನ್ನದ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡ, ಅಜ್ಜಿ ಗ್ಯಾಂಗ್ ಚಿನ್ನದ ಆಟಕ್ಕೆ ಬೆಸ್ತು ಬಿದ್ದ ಬಂಗಾರ ವ್ಯಾಪಾರಿ!

ಪ್ರಕರಣವೊಂದರ ಸಂಬಂಧ ಮಂಡ್ಯದ ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸೋಮ, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. 2009ರ ನವಂಬರ್‌ನಲ್ಲಿ 30 ದಿನ ಪೆರೋಲ್‌ ರಜೆ ಮೇಲೆ ತೆರಳಿದ್ದು, ವಾಪಾಸ್‌ ಶರಣಾಗಬೇಕಿತ್ತು. ಆದರೆ, ಅಂದಿನಿಂದ  ಆತ ತಲೆ ಮರೆಸಿಕೊಂಡಿದ್ದು, ಈವರೆಗೆ ಪತ್ತೆಯಾಗಿಲ್ಲ. ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈತನ ಬಗ್ಗೆ ಸುಳಿವು ನೀಡಿದವರಿಗೆ . 50 ಸಾವಿರ ಬಹುಮಾನ ನೀಡುವುದಾಗಿ ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ತಿಳಿಸಿದ್ದಾರೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಕಂಟ್ರೋಲ್‌ ರೂಂ. 0821- 2418339, ನಜರ್‌ಬಾದ್‌ ಠಾಣೆಯ 2418308, ಮೊ. 94808 02233 ಸಂಪರ್ಕಿಸಬಹುದು ಎಂದು ಪ್ರಕಟಣೆ ಹೊರಡಿಸಲಾಗಿದೆ.

Follow Us:
Download App:
  • android
  • ios