Asianet Suvarna News Asianet Suvarna News

ಮೈಸೂರು ಗ್ಯಾಂಗ್‌ ರೇಪ್‌: ಆರೋಪಿಗಳ ಗುರುತು ಪತ್ತೆ ಹಚ್ಚಿದ ಸಂತ್ರಸ್ತೆ

*   ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಗ್ಯಾಂಗ್‌ರೇಪ್‌ನ ಆರೋಪಿಗಳ ಪರೇಡ್‌
*   ದುಷ್ಕೃತ್ಯ ಕುರಿತು ಪೊಲೀಸರಿಗೆ ವಿವರವಾಗಿ ಹೇಳಿದ ಸಂತ್ರಸ್ತೆ
*   ಬಂಧಿತ ಎಲ್ಲ ಆರೋಪಿಗಳನ್ನು ಫೋಟೋಗಳ ಮೂಲಕವೇ ಪತ್ತೆ ಹಚ್ಚಿದ್ದ ಸಂತ್ರಸ್ತೆ
 

Mysuru Gang Rape Victim Identify of The Accused grg
Author
Bengaluru, First Published Sep 24, 2021, 9:54 AM IST

ಮೈಸೂರು(ಸೆ.24): ಮೈಸೂರಿನ(Mysuru) ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ನಡೆದ ಗ್ಯಾಂಗ್‌ ರೇಪ್‌ ಪ್ರಕರಣದ ಸಂತ್ರಸ್ತೆಯು ಗುರುವಾರ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಗ್ಯಾಂಗ್‌ರೇಪ್‌ನ ಆರೋಪಿಗಳ ಪರೇಡ್‌ ನಡೆಯಿತು. ಜೈಲಿನಲ್ಲಿರುವ ಆರೋಪಿಗಳನ್ನು ಒಬ್ಬರೊಬ್ಬರನ್ನಾಗಿ ಗುರುತಿಸಿ, ಆರೋಪಿಗಳು ಎಸಗಿದ ದುಷ್ಕೃತ್ಯ ಕುರಿತು ಸಂತ್ರಸ್ತೆ(Victim) ಪೊಲೀಸರಿಗೆ ವಿವರಿಸಿದ್ದಾರೆ. ಮೈಸೂರಿನ ಪೊಲೀಸರು 10 ದಿನಗಳ ಹಿಂದೆಯೇ ಮುಂಬೈಗೆ ತೆರಳಿ ಸಂತ್ರಸ್ತೆಯ ಮನೆಯಲ್ಲೇ ಸೆಕ್ಷನ್‌ 161 ಅಡಿ ಹೇಳಿಕೆ ಪಡೆದಿದ್ದರು. ಪೊಲೀಸರ ಪ್ರಶ್ನೆಗಳಿಗೆ ಧನಾತ್ಮಕವಾಗಿ ಉತ್ತರಿಸಿದ್ದ ಸಂತ್ರಸ್ತೆ, ಬಂಧಿತ ಎಲ್ಲ ಆರೋಪಿಗಳನ್ನು ಫೋಟೋಗಳ ಮೂಲಕವೇ ಪತ್ತೆ ಹಚ್ಚಿದ್ದರು. ಅಲ್ಲದೆ, ಪ್ರತಿ ಆರೋಪಿಯೂ ಮಾಡಿದ ಆಪರಾಧ ಕೃತ್ಯಗಳ ಬಗ್ಗೆ ಪೊಲೀಸರ(Police) ಮುಂದೆ ವಿವರಿಸಿದ್ದರು.

ಅಪಹರಿಸಿ ಗ್ಯಾಂಗ್‌ ರೇಪ್‌ ಮಾಡಿ ಅಂಗಾಂಗ ಸುಟ್ಟರು: ಕ್ರೌರ್ಯ ಬಿಚ್ಚಿಟ್ಟ ಯಾದಗಿರಿ ಸಂತ್ರಸ್ತೆ

ಇದಾದ ಮೇಲೆ ಮೈಸೂರಿಗೆ ಆಗಮಿಸಿರುವ ಸಂತ್ರಸ್ತೆ, ಬುಧವಾರ ಮ್ಯಾಜಿಸ್ಪ್ರೇಟ್‌ ಎದುರು ತನ್ನ ಹೇಳಿಕೆ ದಾಖಲಿಸಿದ್ದರು. ಈಗ ಆರೋಪಿಗಳ ಗುರುತು ಪತ್ತೆ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಪ್ರಕರಣದ ತನಿಖೆ ಹಾಗೂ ಚಾರ್ಜ್‌ ಶೀಟ್‌ ಸಲ್ಲಿಸಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಈ ಹೀನ ಕೃತ್ಯಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಕಾಮುಕರಿಗೆ ಗಲ್ಲು ಶಿಕ್ಷೆ ಕೊಡಿಸುವಂತೆ ರಾಜ್ಯದ ಜನರು ಪ್ರತಿಭಟನೆಗಳ ಮೂಲಕ ಆಗ್ರಹಿಸಿದ್ದರು. 
 

Follow Us:
Download App:
  • android
  • ios