Asianet Suvarna News Asianet Suvarna News

ಗೋಕಾಕ: ಬೇರೊಬ್ಬರ ಮನೆ ಮುಂದೆ ಮುಸ್ಲಿಂ ಮಹಿಳೆ ಆತ್ಮಹತ್ಯೆ

ಬೇರೆ ಬೇರೆ ಕಡೆಗಳಲ್ಲಿ ಸಾಲ ಪಡೆದಿದ್ದು ಸಾಲ ಪಾವತಿಸಲಾಗದೆ ಕಿಲ್ಲಾ ಗಲ್ಲಿಯ ಕಿರಣ ದಿಕ್ಷೀತ ಅವರ ಮನೆ ಆವರಣದಲ್ಲಿ ನೇಣಿಗೆ ಶರಣಾದ ಮಹಿಳೆ 

Muslim Woman Committed Suicide at Gokak in Belagavi grg
Author
First Published Sep 30, 2022, 7:30 PM IST

ಗೋಕಾಕ(ಸೆ.30):  ನಗರದ ಕಿಲ್ಲಾ ಗಲ್ಲಿಯಲ್ಲಿ ಬೇರೊಬ್ಬರ ಮನೆಯ ಮುಂದೆ ಮುಸ್ಲಿಂ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಮರಾಠಾ ಗಲ್ಲಿಯ ನಿವಾಸಿ ರೇಷ್ಮಾ ಮುಲ್ಲಾ (38) ನೇಣಿಗೆ ಶರಣಾದ ಮಹಿಳೆ. ಬೇರೆ ಬೇರೆ ಕಡೆಗಳಲ್ಲಿ ಸಾಲ ಪಡೆದಿದ್ದು ಸಾಲ ಪಾವತಿಸಲಾಗದೆ ಕಿಲ್ಲಾ ಗಲ್ಲಿಯ ಕಿರಣ ದಿಕ್ಷೀತ ಅವರ ಮನೆ ಆವರಣದಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ಗೆಳತಿಗೆ ಗುಂಡಿಕ್ಕಿ ಚಲಿಸುತ್ತಿದ್ದ ವಾಹನದ ಕೆಳಗೆ ಹಾರಿದ ಭಗ್ನಪ್ರೇಮಿ: ಇಬ್ಬರೂ ಸಾವು

ಕಳೆದ ಒಂದು ತಿಂಗಳಿಂದ ಕಿರಣ ದಿಕ್ಷೀತ ಅವರು ತಮ್ಮ ಮನೆಯ ದುರಸ್ತಿ ಕಾರ್ಯ ನಡೆಸಲು ಮನೆಯನ್ನು ಖಾಲಿ ಮಾಡಿ, ಬೇರೊಂದು ಮನೆಯಲ್ಲಿ ಬಾಡಿಗೆ ರೂಪದಲ್ಲಿ ಪಡೆದು ವಾಸವಾಗಿದ್ದರು. ಗುರುವಾರ ಬೆಳಗಿನಜಾವ 5 ಗಂಟೆಗೆ ಮೃತ ಯುವತಿ ರೇಷ್ಮಾ ದಿಕ್ಷೀತ ಅವರ ಬೀಗ ಹಾಕಿದ್ದ ಮನೆಯ ಗ್ಯಾಲರಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಗೋಕಾಕ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಎಮ್‌.ಡಿ. ಘೋರಿ ತಿಳಿಸಿದ್ದಾರೆ.
 

Follow Us:
Download App:
  • android
  • ios