ಅಂತ್ಯಕ್ರಿಯೆ ವೇಳೆ ಸಹಾಯ ಮಾಡಿದವರ ಮೇಲೆಯೇ ಕೊಲೆ ಕೇಸ್‌ ದಾಖಲು..!

*  ನಾಸಿಕ್‌ನಲ್ಲಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದ ಆದರ್ಶ ದಾಸ್‌
*  ನಾಸಿಕ್‌ನಿಂದ ಮೃತದೇಹ ಅಂಗರಗುಡ್ಡೆಗೆ ತರಿಸಿ ನಡೆಸಿದ್ದ ಅಂತ್ಯಕ್ರಿಯೆ 
*  ನಾಸಿಕ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು  
 

Murder Case Registered Against the Who Helped Funeral at Nasik grg

ಮೂಲ್ಕಿ(ಜೂ.11): ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪಾನ್‌ ಅಂಗಡಿ ನಡೆಸುತ್ತಿದ್ದ ಮೂಲ್ಕಿಯ ಸಮೀಪದ ಅಂಗರಗುಡ್ಡೆ ಯುವಕ ಆದರ್ಶ ದಾಸ್‌ ಎಂಬವರು ನಾಸಿಕ್‌ನಲ್ಲಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದರು. 

ಆ ಸಂದರ್ಭ ಅಂಗರಗುಡ್ಡೆಯಲ್ಲಿರುವ ಮೃತನ ಮನೆಯವರ ತೀವ್ರ ಅಸಹಾಯಕತೆಯನ್ನು ಮನಗಂಡು ಅತಿಕಾರಿಬೆಟ್ಟು ಗ್ರಾಪಂ ಮಾಜಿ ಸದಸ್ಯ ಜೀವನ್‌ ಶೆಟ್ಟಿ ಅವರು, ನಾಸಿಕ್‌ನ ಪಾನ್‌ ಅಂಗಡಿ ಮಾಲೀಕ ಅನಿಲ್‌ ಪೂಜಾರಿ, ಶಿಮಂತೂರು ನಿವಾಸಿ ಪ್ರತೀಕ್‌ ಶೆಟ್ಟಿ ಮತ್ತಿತರರು ಸೇರಿ ಆಂಬುಲೆನ್ಸ್‌ ಮೂಲಕ ನಾಸಿಕ್‌ನಿಂದ ಮೃತದೇಹವನ್ನು ಹುಟ್ಟೂರಾದ ಅಂಗರಗುಡ್ಡೆಗೆ ತರಿಸಿ ಅಂತ್ಯಕ್ರಿಯೆ ಕಾರ್ಯಗಳಿಗೆ ಸಹಕರಿಸಿದ್ದರು.

ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!

ಇದೀಗ ನೆರವಾದ ಈ ಮೂವರ ಮೇಲೆ ಮೃತ ಆದರ್ಶ ದಾಸ್‌ ಮನೆಯವರು ನಾಸಿಕ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಸಹಾಯ ಮಾಡಿದವರು ಸಂಪೂರ್ಣ ಕುಗ್ಗಿ ಹೋಗಿದ್ದು, ಅಂಗರಗುಡ್ಡೆಯಿಂದ ಸಾವಿರಾರು ಮೈಲಿಗಳ ದೂರವಿರುವ ಮಹಾರಾಷ್ಟ್ರದ ನಾಸಿಕ್‌ ಪೊಲೀಸ್‌ ಠಾಣೆಗೆ ಅಲೆದಾಡುವಂತಾಗಿದೆ.  
 

Latest Videos
Follow Us:
Download App:
  • android
  • ios