3 ತಿಂಗಳ ಹೆಣ್ಣು ಶಿಶು ಕಿಡ್ನಾಪ್‌ ಮಾಡಿ, ಅತ್ಯಾಚಾರಗೈದಿದ್ದ ತೃತೀಯ ಲಿಂಗಿಗೆ ಗಲ್ಲುಶಿಕ್ಷೆ!

ಇದೊಂದು ಅನಾಗರೀಕ ಮತ್ತು ಅಮಾನವೀಯ ರೀತಿಯಲ್ಲಿ ನಡೆದಿರುವ ಅಪರಾಧ. ಅಲ್ಲದೆ, ಇದು ಅಪರೂಪದಲ್ಲಿಯ ಅಪರೂಪದ ಪ್ರಕರಣ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.
 

Mumbai  POCSO court sentences transgender person to death for rape murder of 3 Month girl child san

ಮುಂಬೈ (ಫೆ.28): 3 ತಿಂಗಳ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣದಲ್ಲಿ ಮುಂಬೈನ ಪೋಕ್ಸೋ ಕೋರ್ಟ್‌ ಮಂಗಳವಾರ 24 ವರ್ಷದ ತೃತೀಯ ಲಿಂಗಿ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2021ರಲ್ಲಿ ಮುಬೈನ ಕಫೆ ಪರೇಡ್‌ನಲ್ಲಿ ಈ ಪೈಶಾಚಿಕ ಘಟನೆ ನಡೆದಿತ್ತು. ಇದನ್ನು ಅನಾಗರಿಕ ಹಾಗೂ ಅಮಾನವೀತ ಘಟನೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್‌, ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಹೇಳಿದೆ. ಮಕ್ಕಳ ಲೈಂಗಿಕ ಅಪರಾಧಗಳ ತಡೆಗಟ್ಟುವಿಕೆ (ಪೋಕ್ಸೊ) ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಆದಿತೀ ಕದಮ್ ತೀರ್ಪು ನೀಡಿದ್ದು, 'ಜೀವಾವಧಿ ಶಿಕ್ಷೆ ಒಂದು ನಿಯಮ ಆದರೆ, ಮರಣದಂಡನೆ ಶಿಕ್ಷೆ ಬಹಳ ಅಪರೂಪ. ತೀರಾ ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಮಾತ್ರವೇ ಈ ಶಿಕ್ಷ ನೀಡಲಾಗುತ್ತದೆ. ಈ ಅಪರಾಧವು, ಹೆಣ್ಣು ಮಗುವಿನ ಮೇಲಡ ಮಾಡಿರುವ ವಿಕೃತಿಯನ್ನು ಸೂಚಿಸುತ್ತಿದೆ. ಅಪರಾಧ ಎಸಗಿರುವ ರೀತಿಯ ಅತ್ಯಂತ ಅನಾಗರಿಕ ಹಾಗೂ ಅಮಾನವೀಯ ರೀತಿಯಲ್ಲಿದೆ. ಆದ್ದರಿಂದ ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎನ್ನುತ್ತೇನೆ. ಆರೋಪಿ ಈ ಅಪರಾಧವನ್ನು ಮಾಡಲು ಮೊದಲೇ ಯೋಜಿಸಿದ್ದ ಹಾಗೂ ಅತ್ಯಂತ ನಿಖರವಾದ ರೀತಿಯಲ್ಲಿ ಕಾರ್ಯಗತಗೊಳಿಸಿದ ಎಂದಿದ್ದಲ್ಲದೆ, ಇದೊಂದು ಕೋಲ್ಡ್‌ ಬ್ಲಡೆಡ್‌ ಮರ್ಡರ್‌ ಎಂದು ಹೇಳಿದ್ದಾರೆ.

ತನಿಖೆಯ ಪ್ರಕಾರ ಆರೋಪಿಯಾಗಿರುವ ತೃತೀಯ ಲಿಂಗಿ, ಹೆಣ್ಣು ಮಗು ಹುಟ್ಟಿರುವ ಕಾರಣಕ್ಕೆ ಉಡುಗೊರೆ ನೀಡಿ ಎನ್ನುವಂತೆ ಕುಟುಂಬದತ್ತ ಬಂದಿದ್ದ. ಸಾಮಾನ್ಯವಾಗಿ ತೃತೀಯ ಲಿಂಗಿ ಸಮುದಾಯದಲ್ಲಿ ಇಂಥದ್ದೊಂದು ಸಂಪ್ರದಾಯ ಸಾಮಾನ್ಯವಾಗಿರುತ್ತದೆ. ಆಶೀರ್ವಾದ ಮಾಡಿದ ಬಳಿಕ ಹಣ ಅಥವಾ ಬೇರೆ ಏನನ್ನಾದರೂ ಕೇಳುವುದು ಕೆಲವೆಡೆ ಸಂಪ್ರದಾಯ. ಆದರೆ, ಕುಟುಂಬ ಇದನ್ನು ನೀಡಲು ನಿರಾಕರಿಸಿದೆ. ಇದರಿಂದ ಸಿಟ್ಟಾಗಿದ್ದ ತೃತೀಯ ಲಿಂಗಿ ಈ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎನ್ನುವ ಜಿದ್ದಿಗೆ ಇಳಿದಿದ್ದ. ಆ ಬಳಿಕ ಇಡೀ ಮನೆಯವರು ಮಲಗಿದ್ದ ವೇಳೆ ಸಣ್ಣ ಮಗುವನ್ನು ಕಿಡ್ನ್ಯಾಪ್‌ ಮಾಡಿದ್ದ. ಮಾತ್ರವಲ್ಲ, ಪುಟ್ಟ ಶಿಶುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಶವವನ್ನು ಪಕ್ಕದಲ್ಲಿಯೇ ಹರಿಯುವ ತೋಡಿನಲ್ಲಿ ಎಸೆದಿದ್ದ. ಈ ವೇಳೆ ಈತನಿಗೆ ಮತ್ತೊಬ್ಬ ಸಹಾಯ ಕೂಡ ಮಾಡಿದ್ದ. ಆದರೆ, ನ್ಯಾಯಾಧೀಶರು ಆತನ ಮೇಲಿದ್ದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಿದ್ದಾರೆ. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಮರುದಿನ ಬೆಳಿಗ್ಗೆ ಮಗುವಿನ ಶವವು ಅವರ ಮನೆಯ ಸಮೀಪವಿರುವ ತೊರೆ ಬಳಿಯ ಜವುಗು ಪ್ರದೇಶದಲ್ಲಿ ಪತ್ತೆಯಾಗಿತ್ತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸಸೂನ್ ಡಾಕ್‌ನಲ್ಲಿ ಮೀನುಗಾರಿಕೆಗೆ ತೆರಳಿದಾಗ ಮಗು ಪತ್ತೆಯಾಗಿದೆ ಎಂದು ಸಾಕ್ಷಿಯೊಬ್ಬರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ''ಆರೋಪಿ  ರಾತ್ರಿ 8 ಗಂಟೆ ಸುಮಾರಿಗೆ 9 ಗಜದ ಸೀರೆ, ತೆಂಗಿನಕಾಯಿ ಮತ್ತು ಹೆಣ್ಣು ಮಗು ಜನಿಸಿದಾಗ ₹ 1,100 ರೂಪದಲ್ಲಿ ಉಡುಗೊರೆ ಕೇಳಿಕೊಂಡು ಮನೆಗೆ ಬಂದಿದ್ದರು. ನಾವು ಅವನಿಗೆ ಏನನ್ನೂ ನೀಡಲಿಲ್ಲ. ಹೊರಡುವ ವೇಳೆ ಇನ್ನು ಐದಾರು ದಿನಗಳಲ್ಲಿ ನಾನೊಂದು ಕೆಲಸ ಮಾಡಲಿದ್ದು, ಅದರಿಂದ ಪ್ರಖ್ಯಾತನಾಗುತ್ತೇನೆ' ಎಂದು ದೂರು ದಾಖಲಿಸಿದ ಮಹಿಳೆ ತಿಳಿಸಿದ್ದಾರೆ. ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲರು, ಕೃತ್ಯ ಮಾಡಿರುವ ವ್ಯಕ್ತಿಗೆ ಯಾವುದೇ ಕ್ರಿಮಿನಲ್‌ ಹಿನ್ನಲೆಯಿಲ್ಲ. ಅವರು ಅಶಿಕ್ಷಿತ ತೃಯೋಯ ಲಿಂಗಿಯಾಗಿದ್ದು, ಜನರು ನೀವು ಭಿಕ್ಷೆಯಿಂದ ಬದುಕುತ್ತಿದ್ದಾರೆ. ಆರೋಪಿಯ ವಯಸ್ಸು, ಚಾರಿತ್ರ್ಯ, ಇತರ ಸಂದರ್ಭಗಳು ಮತ್ತು ಶಿಕ್ಷೆಯ ಪ್ರಮುಖ ನಿರ್ಧಾರಕವಾಗಬೇಕು ಇದನ್ನು ಪರಿಗಣಿಸುವಂತೆ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ಮ್ಯಾಟ್ರಿಮೊನಿಯಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, 250 ಮಹಿಳೆಯರಿಗೆ ವಂಚಿಸಿದ ಅಂಕಲ್!

ಆದರೆ, ನ್ಯಾಯಾಧೀಶರು ಮಾತ್ರ, ಈ ಘಟನೆ ಯಾವುದೇ ಹೆಣ್ಣು ಮಗುವಿನ ತಾಯಿಗೆ ಆತಂಕ ಮೂಡುವಂತ ವಿಚಾರವಾಗಿದೆ.  ಅದರಲ್ಲೂ ಪ್ರಮುಖವಾಗಿ ಕೊಳಗೇರಿಗಳಲ್ಲಿ ಬುದುಕುವ ಕುಟುಂಬಕ್ಕೆ. ಹೆಣ್ಣು ಶಿಶುವನ್ನು ಅತ್ಯಂಥ ಘೋರ ಹಾಗೂ ಅಮಾನುಷವಾಗಿ ಆತ ಕೊಂದಿರುವುದನ್ನು ನೋಡಿದರೆ, ಇದು ಆತನಲ್ಲಿನ ವಿಕೃತಿಯನ್ನು ತೋರಿಸಿದೆ. ಆತನ ಸಾಮಾಜಿಕ ಪರಿಸರವು ಎಂದೂ ಸರಿಪಡಿಸಲಾಗದಷ್ಟು ಹಾನಿಗೊಳಗಾಗಿದೆ' ಎಂದು ಹೇಳಿದರು. "ವಿಚಾರಣೆಯು ತ್ವರಿತವಾಗಿ ಮುಂದುವರೆದಿದೆ ಮತ್ತು ನಾವು ನಿರ್ಧಾರದಿಂದ ತೃಪ್ತರಾಗಿದ್ದೇವೆ. ನ್ಯಾಯ ಸಿಕ್ಕಿದೆ’ ಎಂದು ಮಗುವಿನ ತಂದೆ ತಿಳಿಸಿದ್ದಾರೆ.

ಬೆಂಗ್ಳೂರಲ್ಲಿ ಮೊಬೈಲ್‌ ಕದ್ದು ಹಳ್ಳೀಲಿ ಮಾರುತ್ತಿದ್ದ ಪದವೀಧರ..!

Latest Videos
Follow Us:
Download App:
  • android
  • ios