ಹೆಡ್ ಮಸಾಜ್ ನೆಪ; ಗೆಳೆಯನ ಪತ್ನಿ ಮೇಲೆ ರೇಪ್ ಮಾಡಿದ ನೇವಿ ಅಧಿಕಾರಿ
* ಸಹದ್ಯೋಗಿ ಪತ್ನಿ ಮೇಲೆ ಅತ್ಯಾಚಾರ ಮಾಡಿದ ನೌಕಾಪಡೆ ಅಧಿಕಾರಿ
* ಪತಿ ತರಬೇರಿಗೆ ಬೇರೆ ಊರಿಗೆ ತೆರಳಿದ್ದಾಘ ಕೃತ್ಯ
* ಘಟನೆ ಬಾಯಿ ಬಿಟ್ಟರೆ ಕೊಲ್ಲುವ ಬೆದರಿಕೆ
ಮುಂಬೈ (ಮೇ 22) ಭಾರತೀಯ ನೌಕಾಪಡೆಯ ಸಿಬ್ಬಂದಿಯ ಹೆಂಡತಿಯ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ವರದಿಯಾಗಿದೆ. ಗಂಡನ ಗೆಳೆಯನೇ ಅತ್ಯಾಚಾರ ಮಾಡಿದ್ದು ಆತ ಸಹ ವಾಯುಸೇನೆಯ ಅಧಿಕಾರಿ.
ಕಳೆದ ತಿಂಗಳು ಘಟನೆ ನಡೆದಿದ್ದು ಮೇ 17 ರಂದು ಸಂತ್ರಸ್ತೆ ದೂರು ನೀಡಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆಯ ಪತಿ ಮತ್ತು ಆರೋಪಿ ಕಳೆದ ಒಂದು ವರ್ಷದದಿಂದ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆ ತೆಗೆದುಕೊಂಡು ವಾಸ ಮಾಡುತ್ತಿದ್ದರು. ಮಹಿಳೆಯ ಗಂಡ ಕೇರಳಕ್ಕೆ ತರಬೇತಿಗೆ ಎಂದು ತೆರಳಿದ್ದಾಗ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ಘಟನೆಯನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ಬಾಯಿಬಿಟ್ಟರೆ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಮಹಿಳೆ ಮೇಲೆರಗಿದ ಕಾಮಾಂಧರು
ಆದರೆ ಮಹಿಳೆ ಕೆಲ ದಿನಗಳ ನಂತರ ನಡೆದ ಘಟನೆಯನ್ನು ಗಂಡನಿಗೆ ವಿವರಿಸಿದ್ದಾಳೆ. ಇದಾದ ನಂತರ ಠಾಣೆಗೆ ತೆರಳಿ ದೂರಯ ನೀಡಿದ್ದಾರೆ.
ತನಗೆ ಪ್ರಮೋಶನ್ ಸಿಕ್ಕಿದೆ ಎಂದು ಹೇಳಿಕೊಂಡು ಕೋಣೆಗೆ ಬಂದ ಆರೋಪಿ ಕೆಲ ದುಬೈನಿಂದ ತಂದಿದ್ದೇನೆ ಎಂದು ಚಾಕೋಲೆಟ್ ಗಳನ್ನು ನೀಡಿದ್ದಾನೆ. ಇದಾದ ಮೇಲೆ ಪಾನೀಯವನ್ನು ಕುಡಿಸಿದ್ದಾನೆ. ಸೇವನೆ ನಂತರ ಮಹಿಳೆಗೆ ತಲೆನೋವು ಶುರುವಾಗಿದ್ದು ಆಕೆ ಪೇನ್ ಕಿಲ್ಲರ್ ತೆಗೆದುಕೊಂಡಿದ್ದಾಳೆ.
ತಲೆ ನೋವಿಗೆ ಹೆಡ್ ಮಸಾಜ್ ಮಾಡುತ್ತೇನೆ ಎಂದು ಹೇಳಿದ ಆರೋಪಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ವಾರ ಪತಿ ಕೇರಳದಿಂದ ಮುಂಬೈಗೆ ಮರಳಿದ್ದು ನೌಕಾ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ, ಕಫ್ ಪೆರೇಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.