ಮುಂಬೈ, [ಜ.13]: ಪೊಲೀಸ್ ಪೇದೆಯೊಬ್ಬ ಮುಂಬೈನ ರೆಡ್ ಲೈಟ್ ಏರಿಯಾಗೆ ಡ್ರಾಪ್ ಮಾಡಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಟ್ಯಾಕ್ಸಿ ಚಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರ್​ಪಿಎಫ್​ ಪೆದೇಯನ್ನು ಅಮಿತ್​ ಧಂಡಕ್​ ಎಂದು ಪೊಲೀಸರು ಪತ್ತೆ ಮಾಡಿ ಆತನನ್ನು ಬಂಧಿಸಿದ್ದಾರೆ.

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ ಸಾವು

ಘಟನೆ ವಿವರ:
ಆರ್ ಪಿಎಫ್ ಪೊಲೀಸ್ ಪೇದೆ ಅಮಿತ್ ಧಂಕಡ್ ಎನ್ನುವ ಆಸಾಮಿ, ಕ್ಯಾಬ್ ಚಾಲಕನ ಬಳಿ ಹೋಗಿ ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ. ಆದ್ರ, ಇದಕ್ಕೆ ಕ್ಯಾಬ್ ಚಾಲಕ ಅಲ್ಲಿಗೆಲ್ಲ ಬರಲ್ಲ ಎಂದು ಹೇಳಿದ್ದಾನೆ.

ಇದ್ರಿಂದ ಆಕ್ರೋಶಗೊಂಡ ಪೇದೆ, ಚಾಲಕನ ಮೇಲೆ ಹಲ್ಲೆ ನಡೆಸಿ ಆತನನ್ನು ಛತ್ರಪತಿ ಶಿವಾಜಿ ಮಹಾರಾಜ್ ರೇಲ್ವೆ ನಿಲ್ದಾಣದ ಮೂಲೆಯೊಂದಕ್ಕೆ ಎಳೆದೊಯ್ದು ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  

ಕೂಡಲೇ ಟ್ಯಾಕ್ಸಿ ಚಾಲಕ ಎಂಆರ್ ಎ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಚಾಲಕನ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕಾಮುಕ ಧಂಕಡ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಇನ್ನು ಈ ಆಘಾತಕಾರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆರ್ ಪಿಎಫ್, ಧಂಕಡ್ ನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಅಷ್ಟೇ ಅಲ್ಲದೇ ಈ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಿದೆ.