Driver  

(Search results - 296)
 • Mohammud Haneef
  Video Icon

  state23, Feb 2020, 11:07 AM IST

  ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

  ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

  ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು! 

 • KSRTC
  Video Icon

  Mysore22, Feb 2020, 3:53 PM IST

  ಮೈಸೂರು KSRTC ಘಟಕದಲ್ಲಿ ಕಿರುಕುಳ; ಡಿಪೋ ಮ್ಯಾನೇಜರ್-ಚಾಲಕನ ನಡುವೆ ಜಗಳ!

  ಡಿಪೋ ಮ್ಯಾನೇಜರ್ ಹಾಗೂ ಚಾಲಕ ನಡುವಿನ ಜಗಳದಿಂದ ಕೆರ್ ನಗರ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಕೊರಳ ಪಟ್ಟಿ ಹಿಡಿದು ರಂಪಾಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಹೊಸ ದಿಕ್ಕಿನತ್ತ ತಿರುಗುತ್ತಿದೆ.

 • BCP

  CRIME19, Feb 2020, 4:36 PM IST

  'ಸುರಕ್ಷಾ' ಆ್ಯಪ್‌ಗೆ ಬಂದಿರುವ ದೂರು: ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು

  ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ 'ಸುರಕ್ಷಾ' ಎನ್ನುವ ಹೊಸ ಆ್ಯಪ್‌ ಆರಂಭಿಸಲಾಗಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಅಲ್ಲದೇ ಸದ್ಯ ಸುರಕ್ಷಾ ಆ್ಯಪ್ ಗೆ ಬಂದಿರುವ ಕಂಪ್ಲೇಂಟ್ಸ್ ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು.
   

 • KSRTC Jobs

  State Govt Jobs18, Feb 2020, 7:32 PM IST

  KSRTC ನೇಮಕಾತಿ: 3745 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 • undefined

  CRIME18, Feb 2020, 9:22 AM IST

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆ ಹಿಡಿದು ಎಳೆದಾಡಿದ!

  ಕಾರಿನಲ್ಲಿ ಮಹಿಳಾ ಟೆಕಿಯ ಬಟ್ಟೆಹಿಡಿದು ಎಳೆದಾಡಿದ!| ನಗರವೆಲ್ಲ ಸುತ್ತಾಡಿಸಿ ದೂರು ನೀಡದಂತೆ ಬೆದರಿಕೆ

 • undefined

  Karnataka Districts16, Feb 2020, 12:27 PM IST

  ಹೊಸಪೇಟೆ ಕಾರು ಅಪಘಾತ ಪ್ರಕರಣ: ಕಾರು ಚಾಲಕ ಅರೆಸ್ಟ್

  ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಲಾಯಿಸುತ್ತಿದ್ದ ರಾಹುಲ್‌ ಎಂಬಾತನನ್ನು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿ, ಘಟನಾ ಸ್ಥಳಕ್ಕೆ ಕರೆತರಲಾಗಿದೆ. ಬಳಿಕ ಹೊಸಪೇಟೆಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ ಜಾಮೀನು ಲಭಿಸಿತು.
   

 • Toll gate
  Video Icon

  CRIME14, Feb 2020, 8:13 PM IST

  ಮತ್ತೆ ಹಣ ಕಟ್ಟಲು ಹೇಳಿದ ಟೋಲ್ ಸಿಬ್ಬಂದಿ; ನಡು ರಸ್ತೆಯಲ್ಲಿ ಡಿಶುಂ, ಡಿಶುಂ!

  ಟೋಲ್ ಗೇಟ್‌‌ನಲ್ಲಿ ಹೋಗುವ ಹಾಗೂ ಬರುವ ಟೋಲ್ ಹಣವನ್ನು ಕಟ್ಟಿ ಮುಂದೆ ಸಾಗಿದ್ದ ಬಸ್ ಚಾಲಕ ಮರಳಿ ಬಂದಾಗ ಮತ್ತೆ ಟೋಲ್ ಕಟ್ಟಲು ಸಿಬ್ಬಂದಿ ಸೂಚಿಸಿದ್ದಾನೆ. ಈಗಾಗಲೇ ಹಣ ಪಾವತಿಸಿದ್ದೇನೆ ಮತ್ತೇಕೆ ಕಟ್ಟಲಿ ಎಂದು ಶುರುವಾದ ವಾಗ್ವಾದ ಹೊಡೆದಾಟಕ್ಕೆ ತಿರುಗಿದ ಘಟನೆ ನಂಜನಗೂಡು ಟೋಲ್‌ಗೇಟ್‌ನಲ್ಲಿ ನಡೆದಿದೆ.

 • undefined
  Video Icon

  Automobile7, Feb 2020, 7:57 PM IST

  ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!

  ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಟೋಲ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡುವ ಕಿರಿಕಿರಿಗೆ ಕೇಂದ್ರ ಮುಕ್ತಿ ಹಾಡಿದೆ. ಆದರೆ ಮಂಡ್ಯದ ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ನಡೆಯಲ್ಲ, ಬೇಕಿದ್ದರೆ ಹಣಕಟ್ಟಿ ಪ್ರಯಾಣಿಸಿ ಎಂದು ಟೋಲ್ ಸಿಬ್ಬಂದಿಗಳು ದರ್ಪ ತೋರಿದ್ದಾರೆ. 

 • Mohammud Haneef

  Karnataka Districts7, Feb 2020, 1:51 PM IST

  'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

  ಮಹಮ್ಮದ್‌ ಹನೀಫ್‌ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ  ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್‌ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.

   

 • undefined

  Karnataka Districts7, Feb 2020, 11:58 AM IST

  ಪ್ರೀತಿಸುವಂತೆ ಪದೇ ಪದೇ ಕಾಡಿದ ಆಟೋ ಚಾಲಕ : ಒಪ್ಪದಿದ್ದಾಗ ತಳ್ಳಿ ಕೊಲೆಗೈದ ?!

  ತನ್ನನ್ನು ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಆಟೋ ಚಾಲಕ ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪದಿದ್ದಾಗ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. 

 • Driving

  Karnataka Districts6, Feb 2020, 9:16 AM IST

  ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಚಾಲಕರ ಹೊಡೆದಾಟ..!

  ನಗರದ ಬೆಂದೂರ್‌ವೆಲ್‌ ಬಳಿ ಬುಧವಾರ ರಸ್ತೆ ಮಧ್ಯೆ ಖಾಸಗಿ ಸಿಟಿ ಬಸ್‌ ಚಾಲಕರ ನಡುವೆ ಹೊಡೆದಾಟ ನಡೆದಿದೆ. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಇತ್ತಂಡ ವಿರುದ್ಧ ಪ್ರಕರಣ ದಾಖಲಾಗಿದೆ.

 • Agumbe

  Karnataka Districts1, Feb 2020, 7:44 AM IST

  ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!

  ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!| ಘಾಟ್‌ನಲ್ಲಿ ರಾತ್ರಿ ವೇಳೆ ಟಿಟಿಯಿಂದ ಬಿದ್ದ ಬಾಲಕಿ| ಮತ್ತೊಂದು ಕಾರಿನವರಿಂದ ಪವಾಡಸದೃಶ ರಕ್ಷಣೆ| ಕೇರಳ, ತಮಿಳ್ನಾಡು ಪ್ರವಾಸದಿಂದ ಟಿಟಿಯಲ್ಲಿ ಮರಳುತ್ತಿದ್ದ ಚಿಕ್ಕಮಗಳೂರಿನ ಕುಟುಂಬ| ಆಗುಂಬೆ ಘಾಟಿಯಲ್ಲಿ ಎಲ್ಲರಿಗೂ ಗಾಢನಿದ್ರೆ. ಆಕಸ್ಮಿಕವಾಗಿ ಬಾಗಿಲು ತೆರೆದು ಬಿದ್ದ ಬಾಲಕಿ| ದಟ್ಟಾರಣ್ಯದ ರಸ್ತೆಯಲ್ಲಿ ಅಳುತ್ತಾ ನಿಂತಿದ್ದಾಗ ಹಿಂದಿನಿಂದ ಆಗಮಿಸಿದ ಮತ್ತೊಂದು ಕಾರು| ಮಗು ರಕ್ಷಿಸಿ ತೀರ್ಥಹಳ್ಳಿ ಪೊಲೀಸರಿಗೆ ನೀಡಿಕೆ. ಅತ್ತ ಮಗು ಇಲ್ಲದೆ ಟಿಟಿಯಲ್ಲಿದ್ದವರಿಗೆ ಗಾಬರಿ| ಹಿಂದೆ ಬಂದು ಚೆಕ್‌ಪೋಸ್ಟಲ್ಲಿ ವಿಚಾರಿಸಿದಾಗ ಠಾಣೆಗೆ ತೆರಳಲು ಸಲಹೆ, ಪ್ರಕರಣ ಸುಖಾಂತ್ಯ

 • Bengaluru

  Karnataka Districts31, Jan 2020, 2:51 PM IST

  ಉದ್ಯಮಿ ಮೊಬೈಲ್, ಸುಂದರಿಯರ ಬಳಿ ಚಾಲಕನ ಚಾಟಿಂಗ್ : ಮುಂದೇನಾಯ್ತು..?

  ಬೇರೊಬ್ಬ ವ್ಯಕ್ತಿಯ ಮೊಬೈಲ್ ನಿಮದ ಸುಂದರ ಯುವತಿಯರಿಗೆ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೋರ್ವನನ್ನು ಅರೆಸ್ಟ್ ಮಾಡಲಾಗಿದೆ. 

 • Auto

  Karnataka Districts29, Jan 2020, 11:14 AM IST

  ಬಿರಿಯಾನಿ ನೆಪದಲ್ಲಿ ಆಟೋ ರಿಕ್ಷಾವನ್ನೇ ಕದ್ದೊಯ್ದ ಖತರ್ನಾಕ್ ಕಳ್ಳ..!

  ಬಿರಿಯಾನಿ ಪಾರ್ಸಲ್‌ ನೆಪದಲ್ಲಿ ಚಾಲಕನನ್ನು ಯಾಮಾರಿಸಿದ ಚಾಲಾಕಿ ಕಳ್ಳನೊಬ್ಬ, ಆಟೋ ಕದ್ದು ಪರಾರಿಯಾಗಿರುವ ಘಟನೆ ಶಿವಾಜಿನಗರ ಸಮೀಪ ನಡೆದಿದೆ.

 • Lorry

  Karnataka Districts24, Jan 2020, 10:54 AM IST

  ಮುಖಾಮುಖಿಯಾದ ಲಾರಿ, ಭೀಕರ ಅಪಘಾತದಲ್ಲಿ ಚಾಲಕ ಸಾವು

  ಮೈಸೂರಿನ ಹುಣಸೂರಿನಲ್ಲಿ ಎರಡು ಲಾರಿಗಳು ಮುಖಾಮುಖಿಯಾಗಿದೆ. ಕೆ.ಆರ್.ನಗರದ ಹೊಸಕಾಲುವೆ ರೈಲ್ವೆ ಮೇಲುಸೇತುವೆ ಬಳಿ ಭೀಕರ ಅಪಘಾತವಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದೆ.