Asianet Suvarna News Asianet Suvarna News

Chikkamagaluru: ತಮಿಳುನಾಡು ಮೂಲದ ಎಟಿಎಂ ವಂಚಕನ ಬಂಧಿಸಿದ ಮೂಡಿಗೆರೆ ಪೋಲೀಸರು

ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. 

Mudigere Police Arrested Interstate ATM Card Thief gvd
Author
Bangalore, First Published Jun 17, 2022, 2:37 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.17): ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ಎಟಿಎಂ ಕೇಂದ್ರದಲ್ಲಿ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಬದಲಾವಣೆ ಮಾಡಿಕೊಂಡು ಲಕ್ಷಾಂತರ ರೂಪಾಯಿಯನ್ನು ವಂಚನೆ ಮಾಡುತ್ತಿದ್ದು, ತಮಿಳುನಾಡು ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.

70 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್, 11 ಕೇಸ್: ಬಂಧಿತ ಆರೋಪಿ ತಂಬಿರಾಜು ತಮಿಳುನಾಡಿನ ತೇನಿ ಜಿಲ್ಲೆಯವನಾಗಿದ್ದಾನೆ. ಈತನ ಮೇಲೆ ಹಿಂದೆ ತಮಿಳುನಾಡಿನಲ್ಲಿ ಒಟ್ಟು 11 ಪ್ರಕರಣಗಳು ತನಿಖಾ ಹಂತದಲ್ಲಿವೆ. ಈತನಿಂದ ಸುಮಾರು 70 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್, 60 ಗ್ರಾಂ ಚಿನ್ನ ಹಾಗೂ 35 ಸಾವಿರ ನಗದನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ರಾಜ್ಯದಲ್ಲೂ 7 ಪ್ರಕರಣಗಳು ದಾಖಾಲಾಗಿದ್ದು, ತನಿಖೆ ನಡೆಯುತ್ತಿದೆ. ಇದೇ ತಿಂಗಳು 10ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಆರೋಪಿ ಕಾಫಿ ಬೆಳೆಗಾರರಾದ ಉದಯ್ ಕುಮಾರ್ ಎನ್ನವರಿಗೆ ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾವಣೆ ಮಾಡಿಕೊಂಡು ಹಣ ಡ್ರಾ ಮಾಡಿದ್ದ. 

ಯೋಧನ ನೋಡಲು ಹರಿದುಬಂದ ಜನಸಾಗರ: ಸಕಲ ಸರ್ಕಾರಿ ಗೌರವಗಳೊಂದಿಗೆ ಗಣೇಶ್ ಅಂತ್ಯಕ್ರಿಯೆ

ಎಟಿಎಂ ಕಾರ್ಡ್ ಬದಲಾವಣೆ ಮಾಡಿಕೊಂಡು ವಂಚನೆ: ಮೂಡಿಗೆರೆ ಪಟ್ಟಣದ ಕಾಫಿ ಬೆಳೆಗಾರರಾದ ಉದಯ್ ಕುಮಾರ್ ಎಂಬುವರು ಮೂಡಿಗೆರೆಯ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣವನ್ನ ಡ್ರಾ ಮಾಡಲು ಆರೋಪಿ ಸಹಾಯ ಮಾಡುವ ನೆಪದಲ್ಲಿ ನನ್ನ ಕರ್ನಾಟಕ ಬ್ಯಾಂಕಿನ ಎಟಿಎಂ ಕಾರ್ಡನ್ನ ಬದಲಿಸಿಕೊಂಡು ಹೋಗಿ ಚಿಕ್ಕಮಗಳೂರು ನಗರದ ಎಟಿಎಂನಲ್ಲಿ 25 ಸಾವಿರ ರೂ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಜೊತೆಗೆ, ಚಿಕ್ಕಮಗಳೂರು ನಗರದ ಅರಹಮ್ ಜ್ಯುವೆಲರಿ ಶಾಪ್‌ನಲ್ಲಿ 75 ಸಾವಿರ ರೂಪಾಯಿ ಹಣವನ್ನ ಸ್ಟೈಪ್ ಮಾಡಿ ಚಿನ್ನವನ್ನು ಖರೀದಿಸಿದ್ದಾರೆ ಎಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಟಿಎಂ ಕಾರ್ಡ್ ಬದಲಿಸಿಕೊಂಡು 25 ಸಾವಿರ ಹಣ ಡ್ರಾ ಮಾಡಿ, ಬಂಗಾರದ ಅಂಗಡಿಯಲ್ಲಿ ಕಾರ್ಡ್ ಸ್ವೈಪ್ ಮಾಡಿ 75 ಸಾವಿರದ ಚಿನ್ನ ಖರೀದಿಸಿದ್ದ, ಪ್ರಕರಣ ದಾಖಲಿಸಿಕೊಂಡ ಮೂಡಿಗೆರೆ ಪೊಲೀಸರು ಸಹಾಯ ಮಾಡುವ ನೆಪದಲ್ಲಿ ಮೋಸ ಮಾಡಿದ ವ್ಯಕ್ತಿ ತಮಿಳುನಾಡಿನ ತೇನಿ ಮೂಲದ ತಂಬಿರಾಜು ಎಂಬ ಆರೋಪಿಯನ್ನ ಮಡಿಕೇರಿಯಲ್ಲಿ ಬಂಧಿಸಿದ್ದಾರೆ. ಬಂಧಿತ ತಂಬಿರಾಜುವನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡಿದ್ದಾರೆ. ಪೊಲೀಸರು ವಿಚಾರಿಸಿದಾಗ ತಂಬಿರಾಜು ತನ್ನೆಲ್ಲಾ ಹೆಜ್ಜೆ ಗುರುತುಗಳನ್ನ ಒಂದೊಂದಾಗಿ ಬಿಚ್ಚಿಟಿದ್ದಾನೆ. 

ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ನೆಕ್ಕುತ್ತಿದ್ರು ಹೇಳಿಕೆಗೆ ತಿರುಗೇಟು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ, ಬೆಂಗಳೂರಿನಲ್ಲೂ ಎಟಿಎಂ ಗ್ರಾಹಕರಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಗ್ರಾಹಕರಿಂದ ಕಾರ್ಡ್ ಬದಲಿಸಿ ಬೇರೆ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು, ಜ್ಯುವೆಲರಿ ಶಾಪ್‌ನಲ್ಲಿ ಸ್ವೈಪ್ ಮಾಡಿ ಚಿನ್ನ ಖರೀದಿಸಿರುತ್ತಾನೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ಸೋಮಶೇಖರ್, ಸಬ್ ಇನ್ಸ್ಪೆಕ್ಟರ್ ಆದರ್ಶ್, ಸಿಬ್ಬಂದಿಗಳಾದ ಗಿರೀಶ್. ಲೋಹಿತ್. ವಸಂತ್. ಮನು, ಪಾಲ್ಗೊಂಡಿದ್ದರು.

Follow Us:
Download App:
  • android
  • ios