ಭೋಪಾಲ್‌[ಫೆ.17]: ಕರುವೊಂದನ್ನು ಸಾಯಿಸಿದ ಕಾರಣಕ್ಕೆ ಅಪ್ಪನಿಗೆ ಆತನ ಅಪ್ರಾಪ್ತ ಮಗಳನ್ನೇ ಮದುವೆ ಮಾಡಿಕೊಡುವಂತಹ ಶಿಕ್ಷೆ ನೀಡಿದ ಪದ್ಧತಿ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನ ಬೈಕ್‌ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಕರು ಸಾವನ್ನಪ್ಪಿತ್ತು. ಇದಕ್ಕೆ ಸ್ಥಳೀಯ ಸಂಪ್ರದಾಯದ ಅನ್ವಯ ಪಂಚಾಯತ್‌ ಸದಸ್ಯರು, ಅಪ್ರಾಪ್ತ ಮಗಳನ್ನೇ ಮದುವೆ ಮಾಡಿಕೊಟ್ಟು, ಪಾಪ ಪರಿಹಾರ ಸೂಚಿಸಿದ್ದರು. ಅದಕ್ಕೆ ವ್ಯಕ್ತಿ ಸಿದ್ಧವಾಗಿರುವ ಹೊತ್ತಿನಲ್ಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮತ್ತು ಪೊಲಿಸರು ಮದುವೆ ತಡೆದಿದ್ದಾರೆ.

ಕರು ಕೊಂದವರಿಗೆ, ಗಂಗೆಯಲ್ಲಿ ಸ್ಥಾನ ಮಾಡುವ ಇಲ್ಲವೇ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಪಾಪ ಪರಿಹಾರ ಮಾಡಿಕೊಳ್ಳುವ ಸಂಪ್ರದಾಯ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದೆ.