Vivek Bindra Controversy: ಪೊಲೀಸರ ಪ್ರಕಾರ, ಬಿಂದ್ರಾ ಅವರ ಪತ್ನಿ ಯಾನಿಕಾ ಅವರ ಸಹೋದರ ವೈಭವ್ ಕ್ವಾತ್ರಾ ಅವರು ದೂರು ದಾಖಲಿಸಿದ್ದಾರೆ. 

ನವದೆಹಲಿ (ಡಿ.23): ಜನಪ್ರಿಯ ಮೋಟಿವೇಷನಲ್‌ ಸ್ಪೀಕರ್‌ ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ವಿವೇಕ್ ಬಿಂದ್ರಾ ಮದುವೆಯಾದ ಒಂದೇ ವಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಅವರ ಮೇಲೆ ಕೇಸ್‌ ದಾಖಲು ಮಾಡಲಾಗುದೆ. ನೋಯ್ಡಾದ ಸೆಕ್ಟರ್ 126ರಲ್ಲಿ ಆತನ ಸೋದರ ಮಾವನಿಂದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಿಂದ್ರಾ ಅವರ ಪತ್ನಿ ಯಾನಿಕಾ ಅವರ ಸಹೋದರ ವೈಭವ್ ಕ್ವಾತ್ರಾ ಅವರು ದೂರು ದಾಖಲಿಸಿದ್ದಾರೆ, ದಂಪತಿಗಳು ವಾಸಿಸುವ ನೋಯ್ಡಾದ ಸೆಕ್ಟರ್ 94 ರ ಸೂಪರ್ನೋವಾ ವೆಸ್ಟ್ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಡಿಸೆಂಬರ್‌ 7ರ ಮುಂಜಾನೆ ವಿವೇಕ್‌ ಬಿಂದ್ರಾ ಹಾಗೂ ಅವರ ತಾಯಿ ಪ್ರಭಾ ನಡುವೆ ದೊಡ್ಡ ಮಟ್ಟದ ವಾಗ್ವಾದ ನಡೆಸಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಯಾನಿಕಾ ಇಬ್ಬರನ್ನು ಸಮಾಧಾನ ಮಾಡಲು ಮುಂದಾಗಿದ್ದರು. ಈ ಹಂತದಲ್ಲಿ ವಿವೇಕ್‌ ಬಿಂದ್ರಾ, ಯಾನಿಕಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಯಾನಿಕಾ ಅವರ ದೇಹದ ಮೇಲೆ ದೊಡ್ಡ ಪ್ರಮಾಣದ ಗಾಯಗಳಾಗಿವೆ ಎನ್ನುವುದು ವೈರಲ್‌ ಆಗಿರುವ ವಿಡಿಯೋದಿಂದ ಗೊತ್ತಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಕೂಡ ಆಗಿದೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಬಿಂದ್ರಾ ಮತ್ತು ಯಾನಿಕಾ ಡಿಸೆಂಬರ್ 6 ರಂದು ವಿವಾಹವಾಗಿದ್ದರು. ಆದರೆ, ಮದುವೆಯ ಕೆಲವು ಗಂಟೆಗಳ ನಂತರ, ಬಿಂದ್ರಾ ಯಾನಿಕಾಳನ್ನು ಕೋಣೆಯೊಳಗೆ ಕರೆದೊಯ್ದು, ಆಕೆಯ ಮೇಲೆ ದೌರ್ಜನ್ಯ ಎಸೆದು, ಆಕೆಯ ಕೂದಲನ್ನು ಎಳೆದು ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಗಿ ಯಾನಿಕಾಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಬಿಂದ್ರಾ, ಯಾನಿಕಾ ಅವರ ಫೋನ್ ಕೂಡ ಒಡೆದು ಹಾಕಿದ್ದಾರೆ ಎನ್ನಲಾಗಿದೆ.

'ಯಾರಪ್ಪನ ಮನೆಯ ಹಣ ಕೇಳ್ತಿಲ್ಲ' ಎಂದ ಉದಯನಿಧಿ, ನಾಲಿಗೆಯ ಮೇಲೆ ಹಿಡಿತವಿರಲಿ, ಎಚ್ಚರಿಸಿದ ವಿತ್ತ ಸಚಿವೆ!

ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ (BBPL) ನ ಸಿಇಒ ಬಿಂದ್ರಾ ಮತ್ತು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಜನ ಫಾಲೋವರ್‌ಗಳಾಗಿದ್ದಾರೆ. ಅದಲ್ಲದೆ, ಇವರು ಜನಪ್ರಿಯ ಮೋಟಿವೇಷನಲ್‌ ಸ್ಪೀಕರ್‌ ಕೂಡ ಆಗಿದ್ದಾರೆ. ಮತ್ತು ಯೂಟ್ಯೂಬರ್ ಸಂದೀಪ್ ಮಹೇಶ್ವರಿ ಅವರ ಪ್ರಕಾರ, ಈತ ದೊಡ್ಡ ಹಗರಣವೊಂದರ ಕೇಂದ್ರಬಿಂದು ಕೂಡ ಆಗಿದ್ದಾರೆ ಎಂದಿದ್ದಾರೆ.

ಕೆಆರ್‌ಎಸ್ ಹಿನ್ನೀರಿನಲ್ಲಿ ಇಬ್ಬರ ಮೃತದೇಹ ಪತ್ತೆ; ಹತ್ಯೆಗೈದು ನದಿಗೆಸೆದಿರೋ ಶಂಕೆ!

ಸಂದೀಪ್‌ ಮಹೇಶ್ವರಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ "ಬಿಗ್ ಸ್ಕ್ಯಾಮ್ ಎಕ್ಸ್‌ಪೋಸ್" ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಬಿಂದ್ರಾ ಅವರ ಕಂಪನಿಯಿಂದ ಮೋಸ ಹೋಗಿದ್ದಾರೆಂದು ಹೇಳಿಕೊಂಡ ವಿದ್ಯಾರ್ಥಿಗಳಿಂದ ಪತ್ರಗಳನ್ನು ಪ್ರಸ್ತುತಪಡಿಸಿದರು. ಆದರೆ, ಎಲ್ಲಾ ಆರೋಪಗಳನ್ನು ಬಿಂದ್ರಾ ನಿರಾಕರಿಸಿದ್ದಾರೆ.