Asianet Suvarna News Asianet Suvarna News

Kolar: ಕೌಟುಂಬಿಕ ಕಲಹಕ್ಕೆ ಬೇಸರ: ಎರಡು ಪುಟ್ಟ ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ಕ್ರೂರಿ ತಾಯಿ

ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳು ಮಕ್ಕಳೊಂದಿಗೆ ಕೆರೆಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಹೊರ ವಲಯದಲ್ಲಿ ನಡೆದಿದೆ. 

Mother dies after jumping into lake with two children Family feud suspected sat
Author
First Published Jan 19, 2023, 4:37 PM IST

ಕೋಲಾರ (ಜ.19): ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳು ಮಕ್ಕಳೊಂದಿಗೆ ಕೆರೆಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಹೊರ ವಲಯದಲ್ಲಿ ನಡೆದಿದೆ. 

ಮಾಲೂರು ಪಟ್ಟಣದ ಹೊರ ವಲಯದಲ್ಲಿ ತನ್ನ ಇಬ್ಬರು ಪುಟಾಣಿ ಹೆಣ್ಣು ಮಕ್ಳಳ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಕೆರೆಗೆ ಹಾರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಮೃತ ದೇಹಗಳನ್ನು ಕೆರೆಯಿಂದ ತೆಗೆದು ಹೊರಗೆ ಹಾಕಿದ್ದಾರೆ. ಸ್ಥಳಕ್ಕೆ ಮಾಲೂರು ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

ಮೃತ ತಾಯಿ ಮಕ್ಕಳು ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ನಿವಾಸಿಗಳು ಆಗಿದ್ದಾರೆ.  ಮೃತ ತಾಯಿಯನ್ನು ಬೇಬಿ (30) ಹಾಗೂ ಮಕ್ಕಳನ್ನು ದರ್ಶಿನಿ (4) ಛಾಯಾ ಶ್ರೀ (9 ತಿಂಗಳ ಮಗು ) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ಬೇಬಿಯ ಪತಿ ವೇಣುಗೋಪಾಲ ಅವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Vijayapura: ಪ್ರೀತಿಸಿದವರು ಸಾವಿನಲ್ಲಿ ಒಂದಾದರು: ಪ್ರೇಮಿಯಿಂದ ತಾಳಿಕಟ್ಟಿಸಿಕೊಂಡು ಪ್ರಾಣಬಿಟ್ಟ ಯುವತಿ

ತಮ್ಮ ಸಾವಿನ ಜೊತೆಗೆ ಮಕ್ಕಳನ್ನು ಕೊಲ್ಲುವ ಚಿಂತನೆ ಏಕೆ.?
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹದಿಂದ ಬೇಸತ್ತವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಅವರಿಗೆ ಬದಕಲು ಸಾಕಷ್ಟು ಅವಕಾಶಗಳು ಇದ್ದರೂ ದುಡುಕು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ತಾವು ಒಬ್ಬರೇ ಆತ್ಮಹತ್ಯೆ ಮಾಡಿಕೊಳ್ಳದೇ ಜಗತ್ತಿನ ಬಗ್ಗೆ ಅರಿವೇ ಇಲ್ಲದ ಕಂದಮ್ಮಗಳನ್ನೂ ಸಾಯಿಸುತ್ತಿರುವುದು ಅತ್ಯಂತ ಅಮಾನವೀಯ ಘಟನೆ ಆಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರಿಗೆ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ನೀಡಲು ಸರ್ಕಾರ ಕೆಲವು ಅಭಿಯಾನವನ್ನಾದರೂ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಂದೆ- ತಾಯಿ ಜಗಳದಲ್ಲಿ ಜಗತ್ತನ್ನೇ ಅರಿಯದ ಕಂದಮ್ಮಗಳ ಬಲಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ.

Follow Us:
Download App:
  • android
  • ios