ಚಿಕ್ಕಬಳ್ಳಾಪುರ: 2 ಮಕ್ಕಳ ಜೊತೆ ಬಾವಿಗೆ ಜಿಗಿದ ತಾಯಿ, ಈಜಿ ಪಾರಾದ 7 ವರ್ಷದ ಪುತ್ರಿ
ನಾಗಮ್ಮ ಮತ್ತು 5 ವರ್ಷದ ಬಾಲಕಿ ಶ್ರೀನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೊಬ್ಬ ಪುತ್ರಿ ಏಳು ವರ್ಷದ ಬಾಲಕಿ ಗಂಗೋತ್ರಿ ಈಜಿ ದಡ ಸೇರಿ ಬದುಕುಳಿದಿದ್ದಾಳೆ.
ಚಿಕ್ಕಬಳ್ಳಾಪುರ(ಜು.23): ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರಲ್ಲಿ ಒಬ್ಬ ಮಗಳು ಈಜಿ ದಡ ಸೇರಿ ಬದುಕುಳಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್‌ದಿನ್ನೆಯ ಜಡಿಗೆನಹಳ್ಳಿಯಲ್ಲಿ ನಡೆದಿದೆ.
ನಾಗಮ್ಮ (39) ಮತ್ತು 5 ವರ್ಷದ ಬಾಲಕಿ ಶ್ರೀನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೊಬ್ಬ ಪುತ್ರಿ ಏಳು ವರ್ಷದ ಬಾಲಕಿ ಗಂಗೋತ್ರಿ ಈಜಿ ದಡ ಸೇರಿ ಬದುಕುಳಿದಿದ್ದಾಳೆ.
ಮಂಡ್ಯ: ಅನಾರೋಗ್ಯದಿಂದ ಬೇಸತ್ತು ವಿಧವೆ ನೇಣು ಬಿಗಿದು ಆತ್ಮಹತ್ಯೆ
ಮನೆಯಲ್ಲಿ ಪತಿ, ಪತ್ನಿ ನಡುವೆ ನಿತ್ಯ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ನಾಗಮ್ಮ ಶುಕ್ರವಾರ ರಾತ್ರಿ ತನ್ನ ಇಬ್ಬರು ಮಕ್ಕಳೊಂದಿಗೆ ಜಡಿಗೆನಹಳ್ಳಿ ಹೊರವಲಯದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.