ರಾಯಚೂರು: ಖಿನ್ನತೆಯಿಂದ ತಾಯಿ ಮಗಳು ಆತ್ಮಹತ್ಯೆ 

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ಖಿನ್ನತೆಗೊಳಗಾಗಿ 12 ವರ್ಷದ ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ.

Mother and daughter committed suicide due to depression in gudadanal at raichur rav

ರಾಯಚೂರು (ಜೂ.10): ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ಖಿನ್ನತೆಗೊಳಗಾಗಿ 12 ವರ್ಷದ ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀ(46), ಅಂಬಿಕಾ(12) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು. ದಾಂಪತ್ಯ ಕಲಹದಿಂದ 14 ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದ ಲಕ್ಷ್ಮೀ. ಗ್ರಾಮದಲ್ಲಿ ಕೆಲಸವಿಲ್ಲದೇ ಮಗಳೊಂದಿಗೆ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀ. ಆದರೆ ಪತಿಯಿಂದ ದೂರವಾದ ನಂತರ ಖಿನ್ನತೆಗೊಳಗಾಗಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಊರಿಗೆ ಮರಳಿದ್ದ ತಾಯಿ ಮಗಳು. ಇಂದು ಏಕಾಏಕಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಮೃತ ಲಕ್ಷ್ಮೀಯ ಪುತ್ರ ಪಂಪನಗೌಡ ಲಿಂಗಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.

ಮತ್ತೊಬ್ಬ ನೀಟ್‌ ಆಕಾಂಕ್ಷಿಕೋಟದಲ್ಲಿ ಆತ್ಮಹತ್ಯೆ: ಈ ವರ್ಷದ 10ನೇ ಪ್ರಕರಣ

Latest Videos
Follow Us:
Download App:
  • android
  • ios